ಸರ್ಕಾರಿ ಶಾಲಾ ಕಟ್ಟಡ ಕೆಡವಿದ ಖಾಸಗಿ ವ್ಯಕ್ತಿ: ದೂರು

KannadaprabhaNewsNetwork |  
Published : May 12, 2024, 01:23 AM IST
ಪೋಟೋ 3 : ಶಿವಗಂಗೆ ಗ್ರಾ.ಪಂ.ಪಿಡಿಒ ಭೇಟಿ ನೀಡಿರುವುದು | Kannada Prabha

ಸಾರಾಂಶ

ದಾಬಸ್‌ಪೇಟೆ: ಯಾವುದೇ ಆದೇಶ, ಅನುಮತಿಯಿಲ್ಲದೆ ಸರ್ಕಾರಿ ಶಾಲಾ ಕಟ್ಟಡವನ್ನು ಖಾಸಗಿ ವ್ಯಕ್ತಿಯೊಬ್ಬರು ಕೆಡವಿದ್ದು ಆತನ ವಿರುದ್ಧ ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ದಾಬಸ್‌ಪೇಟೆ: ಯಾವುದೇ ಆದೇಶ, ಅನುಮತಿಯಿಲ್ಲದೆ ಸರ್ಕಾರಿ ಶಾಲಾ ಕಟ್ಟಡವನ್ನು ಖಾಸಗಿ ವ್ಯಕ್ತಿಯೊಬ್ಬರು ಕೆಡವಿದ್ದು ಆತನ ವಿರುದ್ಧ ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಸೋಂಪುರ ಹೋಬಳಿಯ ಶಿವಗಂಗೆ ಗ್ರಾಪಂ ವ್ಯಾಪ್ತಿಯ ಗಂಗೇನಪುರ ಗ್ರಾಮದಲ್ಲಿ ಭಾನುಪ್ರಕಾಶ್ ಎಂಬ ವ್ಯಕ್ತಿ ಸರ್ಕಾರಿ ಶಾಲಾ ಕಟ್ಟಡವನ್ನು ಕೆಡವಿ ನೆಲಸಮಗೊಳಿಸಿದ್ದಾನೆ ಎಂದು ಶಾಲಾ ಮುಖ್ಯ ಶಿಕ್ಷಕಿ ನಾಗರತ್ನ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಹಿಂದೆ ಗ್ರಾಮದಲ್ಲಿ ಹಿರಿಯ ಪ್ರಾಥಮಿಕ ಶಾಲೆಯಿತ್ತು. ಮಕ್ಕಳ ಸಂಖ್ಯೆ ಕಡಿಮೆಯಾಗಿದೆ ಎಂದು 1995-96ರಲ್ಲಿ ಶಾಲೆಯನ್ನು ಕಿರಿಯ ಪ್ರಾಥಮಿಕ ಶಾಲೆಗಷ್ಟೇ ಸೀಮಿತಗೊಳಿಸಲಾಯಿತು. ಪ್ರಸ್ತುತ ಶಾಲೆಯಲ್ಲಿ ಇಬ್ಬರು ಶಿಕ್ಷಕರಿದ್ದು, ಸುಮಾರು 16 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಆದರೆ ಬೇಸಿಗೆ ರಜೆ ಇದ್ದ ಕಾರಣ ಶಾಲಾ ಕಟ್ಟಡವನ್ನು ಭಾನುಪ್ರಕಾಶ್ ಜೆಸಿಬಿಯಿಂದ ನೆಲಸಮ ಮಾಡಿದ್ದಾರೆ. ಅಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದ್ದು ಸೂಕ್ತ ಕ್ರಮ ವಹಿಸಬೇಕೆಂದು ಮನವಿ ಮಾಡಿದ್ದಾರೆ.

ಸರ್ಕಾರದ ಹೆಸರಲ್ಲೆ ಶಾಲೆ: ಶಾಲಾ ಕಟ್ಟಡವಿದ್ದ ಸ್ಥಳ ಸರ್ಕಾರಿ ಶಾಲೆಯ ಹೆಸರಿನಲ್ಲಿದ್ದರೂ, ಭಾನುಪ್ರಕಾಶ್ ಅತಿಕ್ರಮ ಪ್ರವೇಶ ಮಾಡಿ ಏಕಾಏಕಿ ಜೆಸಿಬಿ ಯಂತ್ರ ಬಳಸಿ ಶಾಲಾ ಕಟ್ಟಡ ತೆರವುಗೊಳಿಸಿರುವ ಪೋಷಕರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಪೀಠೋಪಕರಣಗಳು ನಾಪತ್ತೆ: ಶಾಲೆಗೆ ಎರಡು ಕಟ್ಟಡಗಳಿದ್ದು, ದಾಖಲಾತಿ ಪ್ರಮಾಣ ಕಡಿಮೆಯಾದ್ದರಿಂದ ಒಂದು ಕಟ್ಟಡದಲ್ಲಿ ಶಾಲೆ ನಡೆಯುತ್ತಿದೆ. ಮತ್ತೊಂದು ಕಟ್ಟಡದಲ್ಲಿ ಶಾಲೆಗೆ ಸಂಬಂಧಿಸಿದ ಪೀಠೋಪಕರಣಗಳನ್ನು ಇಡಲಾಗಿತ್ತು. ಇದೇ ಕಟ್ಟಡವನ್ನೇ ಭಾನುಪ್ರಕಾಶ್ ಉರುಳಿಸಿದ್ದು, ಪೀಠೋಪಕರಣಗಳು ನಾಪತ್ತೆಯಾಗಿವೆ ಎಂದು ಆರೋಪಿಸಲಾಗಿದೆ.

ಶಾಲಾ ಕಟ್ಟಡ ಕೆಡವಿದ ಹಿನ್ನೆಲೆಯಲ್ಲಿ ವಿಷಯ ತಿಳಿದು ಶಿವಗಂಗೆ ಗ್ರಾಪಂ ಪಿಡಿಒ ಗಿರೀಶ್ ಸೇರಿದಂತೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.ಕೋಟ್ ...........

ಸರ್ಕಾರಿ ಶಾಲೆಯನ್ನು ಯಾರೂ ಇಲ್ಲದ ವೇಳೆ ಹಾಗೂ ಬೇಸಿಗೆ ರಜೆ ಕೊಟ್ಟಿರುವುದನ್ನು ಬಳಸಿಕೊಂಡು ಜೆಸಿಬಿ ಯಂತ್ರದಿಂದ ಸಂಪೂರ್ಣವಾಗಿ ಉರುಳಿಸಿದ್ದಾರೆ. ಯಾವುದೇ ಅನುಮತಿ ಪಡೆಯದೆ, ದಾಖಲೆಯೂ ಇಲ್ಲದೆ ಕಟ್ಟಡವನ್ನು ಕೆಡವಲಾಗಿದೆ. ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಆತನಿಂದಲೇ ನೂತನ ಕಟ್ಟಡ ನಿರ್ಮಿಸಿಕೊಡುವಂತೆ ಮಾಡಬೇಕು.

-ದಿನೇಶ್ ನಾಯಕ್, ಶಿವಗಂಗೆ ಗ್ರಾಪಂ ಸದಸ್ಯ

ಕೋಟ್ .................

ಶಾಲಾ ಕಟ್ಟಡ ಉರುಳಿಸಿರುವ ಬಗ್ಗೆ ಶಿಕ್ಷಕರು ಹಾಗೂ ಗ್ರಾಮಸ್ಥರಿಂದ ಮಾಹಿತಿ ಬಂದಿದೆ. ಶಾಲೆಯ ಕಟ್ಟಡ ಶಿಕ್ಷಣ ಇಲಾಖೆಗೆ ಸೇರಿದ್ದೆಂಬುದಕ್ಕೆ ದಾಖಲೆಗಳಿದೆ. ಆದರೂ ಖಾಸಗಿ ವ್ಯಕ್ತಿ ಅತಿಕ್ರಮವಾಗಿ ಕಟ್ಟಡ ಕೆಡವಿರುವ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಹಿರಿಯ ಅಧಿಕಾರಿಗಳಿಗೂ ಮಾಹಿತಿ ನೀಡಿ ಕ್ರಮಕ್ಕೆ ಮನವಿ ಮಾಡುತ್ತೇನೆ.

-ಎಂ.ಎಚ್.ತಿಮ್ಮಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ

ಪೋಟೊ 1 : ಗಂಗೇನಪುರ ಗ್ರಾಮದಲ್ಲಿದ್ದ ಸರ್ಕಾರಿ ಶಾಲಾ ಕಟ್ಟಡವನ್ನು ವ್ಯಕ್ತಿಯೊಬ್ಬ ಉರುಳಿಸಿ ನೆಲಸಮ ಮಾಡಿರುವುದುಪೋಟೋ 2 : ದಾಖಲಾತಿ ಶಾಲೆಯ ಹೆಸರಿನಲ್ಲಿರುವುದುಪೋಟೋ 3 : ಶಿವಗಂಗೆ ಗ್ರಾ.ಪಂ.ಪಿಡಿಒ ಭೇಟಿ ನೀಡಿರುವುದು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

''ದ್ವೇಷ ಮಸೂದೆಯಿಂದ ಭಿನ್ನ ದನಿ ದಮನ ಆಗಲ್ಲ ''
3 ವರ್ಷ ಮೊಮ್ಮಗನಿಗೆ ಬಾರಲ್ಲಿ ಹೆಂಡ ಕುಡಿಸಿದ ಅಜ್ಜ: ಆಕ್ರೋಶ