ಲಿಂಗರಾಜು ಕೋರಾ
ರಾಜ್ಯದಲ್ಲಿ ಖಾಸಗಿ ಶಾಲೆ, ಪಿಯು ಕಾಲೇಜುಗಳನ್ನು ಆರಂಭಿಸುವುದು ಈಗ ಇನ್ನಷ್ಟು ಸುಲಭ. ಹೊಸ ಶಾಲೆ, ಕಾಲೇಜುಗಳ ಆರಂಭಕ್ಕೆ ಅಗತ್ಯ ಭೂಮಿಯ ಗುತ್ತಿಗೆ, ಬಾಡಿಗೆ ಕರಾರು ಅವಧಿ, ಸ್ಥಳ ಬದಲಾವಣೆ, ಭೂ ಪರಿವರ್ತನೆ ಸೇರಿದಂತೆ ಹಲವು ಮಾನದಂಡಗಳನ್ನು ಮತ್ತಷ್ಟು ಸರಳೀಕರಿಸಿ ಸರ್ಕಾರ ನಿಯಮಾವಳಿಗಳಿಗೆ ಬದಲಾವಣೆ ಮಾಡಿದೆ.
ಇದರ ಜೊತೆಗೆ, ಮಾನ್ಯತೆಗೆ ಅರ್ಜಿ ಸಲ್ಲಿಸುವಾಗ ಆಡಿಟ್ ವರದಿ ಜೊತೆಗೆ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಣ ಇಲಾಖೆಯ ಹೆಸರಲ್ಲಿ ಜಂಟಿಯಾಗಿ ಭದ್ರತಾ ಠೇವಣಿ ಇಡಬೇಕೆಂದು ಹೊಸ ನಿಯಮ ರೂಪಿಸಲಾಗಿದೆ. ಒಂದು ವೇಳೆ ಶಾಲೆ ಮುಚ್ಚಿದರೆ, ಸರ್ಕಾರಕ್ಕೆ ಯಾವುದೆ ಹಣದ ಬಾಕಿ ಇದ್ದರೆ ಅಂತಹ ಸಂದರ್ಭದಲ್ಲಿ ಈ ಠೇವಣಿಯ ಹಣವನ್ನು ಸರ್ಕಾರ ಬಳಸಿಕೊಳ್ಳಲು ಅವಕಾಶ ನೀಡಲಾಗಿದೆ.ಭೂ ಪರಿವರ್ತನೆ ಬೇಕಿಲ್ಲ:
ಮಾರಾಟ, ಸ್ಥಳ ಬದಲಾವಣೆ ಸರಳ:
ಕರ್ನಾಟಕ ಶಿಕ್ಷಣಸಂಸ್ಥೆಗಳ (ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಾನ್ಯತೆ) ತಿದ್ದುಪಡಿ ನಿಯಮಗಳು 2026ರ ಪ್ರಕಾರ, ಶಾಲಾ ಮಾನ್ಯತೆಗಾಗಿ ಸಲ್ಲಿಸುವ ಪ್ರತಿಯೊಂದು ಅರ್ಜಿಯೊಂದಿಗೆ ವಾರ್ಷಿಕ ಆಡಿಟ್ ವರದಿ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ನಿಂದ ಇ-ಬ್ಯಾಂಕ್ ಗ್ಯಾರಂಟಿ ರೂಪದಲ್ಲಿ ಭದ್ರತಾ ಠೇವಣಿ ಸಲ್ಲಿಕೆ ಕಡ್ಡಾಯವಾಗಿದೆ. ಮಾಹಿತಿ ಪ್ರಕಾರ, ಹೊಸ ಶಾಲೆಗಳು ₹3 ಲಕ್ಷವರೆಗೆ, 2018ಕ್ಕಿಂತ ಹಳೆಯ ಶಾಲೆಗಳು ಸುಮಾರು ₹50 ಸಾವಿರಗಳಿಂದ ₹1 ಲಕ್ಷ ವರೆಗೆ ಭದ್ರತಾ ಠೇವಣಿ ಇಡಬೇಕು ಎನ್ನಲಾಗುತ್ತಿದೆ. ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯು ಈ ಠೇವಣಿಯ ಮೇಲಿನ ಬಡ್ಡಿಯನ್ನು ಶಾಲೆಯ ಅಭಿವೃದ್ಧಿಗೆ ಬಳಸಿಕೊಳ್ಳಲು ಅವಕಾಶವಿದ್ದರೂ, ಶಾಲೆಯ ಬಾಕಿ ಪಾವತಿಸಲು ವಿಫಲವಾದರೆ ಅಥವಾ ಮುಚ್ಚಲ್ಪಟ್ಟರೆ ಆ ಭದ್ರತಾ ಠೇವಣಿ ಹಣವನ್ನು ಬಳಸಿಕೊಳ್ಳುವ ಹಕ್ಕನ್ನು ಶಿಕ್ಷಣ ಇಲಾಖೆಗೆ ನೀಡಲಾಗಿದೆ.
ಕೋಟ್
ಖಾಸಗಿ ಶಾಲೆಗಳಿಗೆ ಸಂಬಂಧಿಸಿದಂತೆ ಸರ್ಕಾರ ವಿವಿಧ ನಿಯಮಗಳಿಗೆ ತಿದ್ದುಪಡಿ ತಂದು ಮಾನದಂಡಗಳನ್ನು ಸರಳೀಕರಿಸಿರುವುದು ಆರೋಗ್ಯಕರ ಬೆಳವಣಿಗೆ. ಕಳೆದ ಏಳೆಂಟು ವರ್ಷಗಳ ಹೋರಾಟಕ್ಕೆ ಫಲ ಸಿಕ್ಕಂತಾಗಿದೆ. ಆದರೆ, 2018ಕ್ಕೆ ಮೊದಲು ಆರಂಭವಾದ ಶಾಲೆಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಹಾಗೂ ಸ್ಪಷ್ಟವಾದ ಮಾನದಂಡಗಳನ್ನು ಹೊರಡಿಸಬೇಕು.