ಮೂಲ್ಕಿ: ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಬ್ಯಾಂಕಿಂಗ್ ಜೊತೆಗೆ ಸಾಮಾಜಿಕ ಚಿಂತ ಹೊಂದಿದ್ದು, ಇದಕ್ಕೆ ಪೂರಕವಾಗಿ ಅಶಕ್ತ ವಿಕಲಚೇತನರಿಗೆ ಸವಲತ್ತು ವಿತರಿಸುವ ಜೊತೆಗೆ ಸಾಮಾಜಿಕ ಚಟುವಟಿಕೆಗಳನ್ನು ಮುಂದುವರಿಸಲಿದ್ದೇವೆ ಎಂದು ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಚ್. ವಸಂತ್ ಬೆರ್ನಾರ್ಡ್ ಹೇಳಿದ್ದಾರೆ.
ಶ್ರೀ ಕೊಡಮಣಿತ್ತಾಯ ಬ್ರಹ್ಮಶ್ರೀ ಬೈದರ್ಕಳ ಗರಡಿ ಕೊಡಿಪಾಡಿ ಸುರತ್ಕಲ್ ನ ಅಧ್ಯಕ್ಷ ರೂಪೇಶ್ ರೈ ಬಹುಮಾನ ವಿತರಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಹಳೆಯಂಗಡಿ ಶಾಖೆಯ ಶಾಖಾ ಪ್ರಬಂಧಕ ಜಗದೀಶ್ ಶೆಟ್ಟಿ, ಸಮಾಜ ಸೇವಕಿ ವಿಲ್ಮಾ ಡಿ ಕೋಸ್ತ ಕಿನ್ನಿಗೋಳಿ ಮುಖ್ಯ ಅತಿಥಿಗಳಾಗಿದ್ದರು.ಫಲಿತಾಂಶ: ಚಿತ್ರಕಲಾ ಸ್ಪರ್ಧೆಯಲ್ಲಿ ಮಲ್ಟಿ ಕಲರ್ ವಿಭಾಗದಲ್ಲಿ ಕೆನರಾ ಪ್ರೌಢಶಾಲೆ ಉರ್ವ ಮಂಗಳೂರಿನ ವಿದ್ಯಾರ್ಥಿ ಅದಿತ್ ಪ್ರಥಮ , ಶ್ರೀ ದುರ್ಗಾಪರಮೇಶ್ವರಿ ದೇವಳ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಕಟೀಲಿನ ವಿದ್ಯಾರ್ಥಿನಿ ತ್ರಿಷಾ ಆಚಾರ್ಯ ದ್ವಿತೀಯ , ಪೆನ್ಸಿಲ್ ಸ್ಕೆಚ್ ವಿಭಾಗದಲ್ಲಿ ಹೋಲಿ ಫ್ಯಾಮಿಲಿ ಆಂಗ್ಲ ಮಾಧ್ಯಮ ಸ್ಕೂಲ್, ಸುರತ್ಕಲ್ ನ ವಿದ್ಯಾರ್ಥಿನಿ ಜೆನಿಶಾ ಶ್ಲಿವಿಟಾ ಡಿಸೋಜ ಪ್ರಥಮ , ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠ ಕಿಲ್ಪಾಡಿಯ ವಿದ್ಯಾರ್ಥಿನಿ ಅಭಿಜ್ಞಾ ಶ್ರೇಯಾ ದ್ವಿತೀಯ ಬಹುಮಾನ ಪಡೆದರು.
ಬಹುಮಾನವಾಗಿ ಪ್ರಶಸ್ತಿ ಫಲಕ, ಪ್ರಶಸ್ತಿ ಪತ್ರ, ನಗದು ಬಹುಮಾನ ಪ್ರಥಮ ರು.3,333, ದ್ವಿತೀಯ ರು. 2,222/- ನೀಡಿ ಗೌರವಿಸಲಾಯಿತು.ಹಲೀಮ ಮರ್ವ ಇಂದಿರಾನಗರ, ಪ್ರತೀಕ್ಷ ಎಸ್ ಕರ್ಕೇರ ಸಸಿಹಿತ್ಲು ಮತ್ತು ಪುಷ್ಪ ಪೂಜಾರ್ತಿ ಇಂದಿರಾನಗರ ಅವರಿಗೆ ವೀಲ್ ಚೇರ್ ಹಸ್ತಾಂತರಿಸಲಾಯಿತು.ಸ್ವಸಹಾಯ ಗುಂಪಿನ ಪ್ರೇರಕಿ ನಿರಂಜಲ ಪ್ರಾರ್ಥಿಸಿದರು, ಸೊಸೈಟಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಸ್ವಾಗತಿಸಿದರು, ಸಾಲ ವಿಭಾಗದ ಪ್ರಬಂಧಕಿ ಅಕ್ಷತಾ ಶೆಟ್ಟಿ ನಿರೂಪಿಸಿದರು, ಲೆಕ್ಕಿಗ ಲೋಲಾಕ್ಷಿ ವಂದಿಸಿದರು.