ಮೂಲ್ಕಿ: ಸಂಘವು 2025- 26 ಸಾಲಿನಲ್ಲಿ 484.78 ಕೋಟಿ ರು. ವಹಿವಾಟುಗಳನ್ನು ಮಾಡಿದ್ದು, 54.25 ಲಕ್ಷ ಲಾಭಾಂಶ ಗಳಿಸಿದೆ. ಪ್ರಸ್ತುತ 70 ಲಕ್ಷ ಪಾಲು ಬಂಡವಾಳ, 3184 ಸದಸ್ಯರು, ಒಟ್ಟು44.93 ಕೋಟಿ ರು. ಠೇವಣಿ ಇದ್ದು, 37 ಕೋಟಿ ರು. ಸಾಲ ನೀಡಲಾಗಿದೆ. ಶೇ. 97.5 ಸಾಲ ವಸೂಲಾತಿ ಮಾಡಿದ್ದು, ಈ ಬಾರಿ ಕೂಡ ಆಡಿಟ್ ವರ್ಗೀಕರಣದಲ್ಲಿ ‘ಎ’ ದರ್ಜೆಯ ಸ್ಥಾನಮಾನ ದೊರಕಿದೆ ಎಂದು ಹಳೆಯಂಗಡಿ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಚ್. ವಸಂತ್ ಬೆರ್ನಾರ್ಡ್ ಹೇಳಿದರು. ಸೊಸೈಟಿಯ ಪ್ರಧಾನ ಕಚೇರಿ ಸಭಾಂಗಣದಲ್ಲಿ ಜರುಗಿದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘದ ಸದಸ್ಯರು ಮೃತರಾದಲ್ಲಿ ಅವರ ಶವ ಸಂಸ್ಕಾರಕ್ಕೆ ಅನುಕೂಲವಾಗುವ ದೃಷ್ಟಿಯಿಂದ ಎಚ್. ನಾರಾಯಣ ಸನಿಲ್ ಮರಣೋತ್ತರ ನಿಧಿ ಸ್ಥಾಪಿಸಿ, ಮರಣದ ಸಂದರ್ಭದಲ್ಲಿ 10,000 ರು. ನೀಡಲಾಗುವುದು. ಹಳೆಯಂಗಡಿ, ಪಡುಬಿದ್ರಿ, ಕಿನ್ನಿಗೋಳಿ, ಮೂಡುಬಿದಿರೆ ಸೇರಿದಂತೆ ನಾಲ್ಕು ಕಡೆಗಳಲ್ಲಿ ಶಾಖೆಯನ್ನು ಹೊಂದಿದ್ದು, ಈ ವರ್ಷ ಉಡುಪಿಯಲ್ಲಿ ಶಾಖೆಯನ್ನು ತೆರೆಯಲು ಸಿದ್ಧತೆ ನಡೆದಿದೆ. ಸದಸ್ಯರಿಗೆ ಶೇ, 9.5 ಡಿವಿಡೆಂಡ್ ನೀಡುವುದಾಗಿ ತಿಳಿಸಿದರು.
ರಕ್ಷಿತ್ ಪ್ರಾರ್ಥಿಸಿದರು. ಅಕ್ಷತಾ ಶೆಟ್ಟಿ, ಪ್ರಜ್ಞಾಶ್ರೀ ನಿರೂಪಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಪೂಜಾರಿ ಸ್ವಾಗತಿಸಿದರು, ಲೋಲಾಕ್ಷಿ ವಂದಿಸಿದರು.