ಹಳೆಯಂಗಡಿ ಪ್ರಿಯದರ್ಶಿನಿ ಸೊಸೈಟಿ ಸ್ಥಾಪನೆಗೆ ಪ್ರೇರಣಾ ಶಕ್ತಿ ಎಚ್‌ ನಾರಾಯಣ ಸನಿಲ್‌: ವಸಂತ ಬೆರ್ನಾಡ್‌

KannadaprabhaNewsNetwork |  
Published : Mar 21, 2026, 02:30 AM IST
ಹಳೆಯಂಗಡಿ ಪ್ರಿಯದರ್ಶಿನಿಯಲ್ಲಿ ಸಹಕಾರಿ ರಂಗದ ಭೀಷ್ಮ ಎಚ್‌ ನಾರಾಯಣ ಸನಿಲ್‌ ಸ್ಮರಣೆ | Kannada Prabha

ಸಾರಾಂಶ

ಹಳೆಯಂಗಡಿ ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿ ಆಶ್ರಯದಲ್ಲಿ ಸೊಸೈಟಿಯ ಸಭಾ ಭವನದಲ್ಲಿ ಜರಗಿದ ಸಂಘದ ಪ್ರೇರಣಾಶಕ್ತಿ, ಸಹಕಾರಿ ರಂಗದ ಭೀಷ್ಮ ಎಚ್. ನಾರಾಯಣ ಸನಿಲ್ ಅವರ ಸ್ಮರಣಾ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮೂಲ್ಕಿ: ದಿ.ಎಚ್ ನಾರಾಯಣ ಸನಿಲ್ ಧಾರ್ಮಿಕ, ರಾಜಕೀಯ, ಸಹಕಾರಿ ಸಂಘದ ಭೀಷ್ಮರಾಗಿ ಸಾಮಾಜಿಕ ರಂಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಎಲ್ಲರಿಗೂ ಪ್ರೇರಕ ಶಕ್ತಿಯಾಗಿದ್ದರು. ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಪ್ರಿಯದರ್ಶಿನಿ ಸಂಸ್ಥೆಯು ಸಾಧನೆ ಮಾಡಿದೆ. ಸಂಸ್ಥೆಯು ಲಾಭದ ಬಗ್ಗೆ ಯೋಚಿಸದೇ ಉದ್ಯೋಗ ಸೃಷ್ಟಿ ಹಾಗೂ ಸಾಮಾಜಿಕ ಕಳಕಳಿ ಮೂಲಕ ಗ್ರಾಹಕರ ಹಾಗೂ ಸಿಬ್ಬಂದಿಗಳ ಶ್ರಮದೊಂದಿಗೆ ಮುನ್ನಡೆಯುತ್ತಿದೆಯೆಂದು ಹಳೆಯಂಗಡಿ ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಚ್ ವಸಂತ್ ಬೆರ್ನಾಡ್ ಹೇಳಿದರು.

ಹಳೆಯಂಗಡಿ ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿ ಆಶ್ರಯದಲ್ಲಿ ಸೊಸೈಟಿಯ ಸಭಾ ಭವನದಲ್ಲಿ ಜರಗಿದ ಸಂಘದ ಪ್ರೇರಣಾಶಕ್ತಿ, ಸಹಕಾರಿ ರಂಗದ ಭೀಷ್ಮ ಎಚ್. ನಾರಾಯಣ ಸನಿಲ್ ಅವರ ಸ್ಮರಣಾ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೋವಿಡ್‌ ಸಂದರ್ಭದಲ್ಲಿ ಕೆಲವು ಹಿತೈಷಿಗಳ ಸಹಕಾರದಿಂದ ಆರಂಭಿಸಿದ ಸಂಸ್ಥೆಯು ಇಂದು ನಾಲ್ಕು ಶಾಖೆಗಳನ್ನು ಹೊಂದಿದ್ದು ಸುಮಾರು 38 ಕೋಟಿ ರು. ವ್ಯವಹಾರ ನಡೆಸುತ್ತಿದೆಯೆಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜ್ಯೋತಿಷಿವಿಶ್ವನಾಥ್ ಭಟ್ ಎಸ್.ಕೋಡಿ ಮಾತನಾಡಿ ಸಾಮಾಜಿಕ, ಶೈಕ್ಷಣಿಕ ಹಾಗೂ ಸಹಕಾರಿ ಕ್ಷೇತ್ರಕ್ಕೆ ದಿ.ನಾರಾಯಣ ಸನಿಲ್ ಅವರ ಕೊಡುಗೆ ಅಪಾರವಾಗಿದ್ದು ಅವರ ನೆರಳಿನಲ್ಲಿ ನಡೆಯುತ್ತಿರುವ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಸಂಸ್ಥೆಯು ಇನ್ನಷ್ಟು ಸಾಧನೆಗಳನ್ನು ಮಾಡಲೆಂದು ಶುಭ ಹಾರೈಸಿದರು. ಉಷಾ ವಿಶ್ವನಾಥ್ ಎಸ್ ಕೋಡಿ, ಉದ್ಯಮಿ ಪ್ರವೀಣ್ ಕುಮಾರ್ ಬೊಳ್ಳೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದು, ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿ ನಿರ್ದೇಶಕರಾದ ವಿಜಯ ಸನಿಲ್, ಧನಂಜಯ ಮಟ್ಟು, ಉಮಾನಾಥ ಜೆ ಶೆಟ್ಟಿಗಾರ್, ನವೀನ್ ಸಾಲ್ಯಾನ್, ಗಣೇಶ್ ಪ್ರಸಾದ್ ದೇವಾಡಿಗ, ಜಯ ಕೃಷ್ಣ ಕೋಟ್ಯಾನ್, ಸೊಸೈಟಿ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಮತ್ತಿತರರು ಉಪಸ್ಥಿತರಿದ್ದರು. ಸ್ವಸಹಾಯ ಸಂಘದ ಪ್ರೇರಕಿ ನೀತು ನಿರಂಜಲ ಪ್ರಾರ್ಥಿಸಿದರು. ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಸ್ವಾಗತಿಸಿದರು. ಪ್ರಧಾನ ಕಚೇರಿ ಲೆಕ್ಕಿಗರಾದ ಲೋಲಾಕ್ಷಿ ವಂದಿಸಿದರು. ಸಾಲ ವಿಭಾಗದ ಪ್ರಬಂಧಕಿ ಅಕ್ಷತಾ ಶೆಟ್ಟಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಸಹಕಾರಿ ಸಂಘದ ಭೀಷ್ಮ ದಿ ನಾರಾಯಣ್ ಸುನಿಲ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಾಹೀರಾತು ನೀತಿ-2026 ಸ್ಥಗಿತಕ್ಕೆ ಒತ್ತಾಯಿಸಿ ಮನವಿ
ಧಾರ್ಮಿಕ ತ್ಯಾಜ್ಯ ಸಂಗ್ರಹ, ವಿಲೇವಾರಿಗೆ ಅಭಿಯಾನ ಆರಂಭ