ಪ್ರಿಯದರ್ಶಿನಿ ಕೋ- ಆಪರೇಟಿವ್ ಸೊಸೈಟಿ ದಾಖಲೆಯ 483 ಕೋಟಿ ವ್ಯವಹಾರ

KannadaprabhaNewsNetwork |  
Published : Apr 06, 2026, 03:00 AM IST
ಪ್ರಿಯದರ್ಶಿನಿ ಕೋ- ಆಪರೇಟಿವ್ ಸೊಸೈಟಿ  ಹಳೆಯಂಗಡಿ ದಾಖಲೆಯ 483 ಕೋಟಿ ರೂ. ವ್ಯವಹಾರ | Kannada Prabha

ಸಾರಾಂಶ

ಪ್ರಿಯದರ್ಶಿನಿ ಕೋ- ಆಪರೇಟಿವ್ ಸೊಸೈಟಿ ಲಿ. ಹಳೆಯಂಗಡಿ ಸಂಸ್ಥೆಯು ಸದಸ್ಯರ ಪ್ರೋತ್ಸಾಹ, ಗ್ರಾಹಕರ ಸಹಕಾರ, ಆಡಳಿತ ವರ್ಗದವರ ಮಾರ್ಗದರ್ಶನ ಹಾಗೂ ಸಿಬ್ಬಂದಿಗಳ ಕಾರ್ಯಶ್ರಮತೆಯಿಂದಾಗಿ 2025-26ನೇ ಸಾಲಿನಲ್ಲಿ 483 ಕೋಟಿ ರು. ವ್ಯವಹಾರ ನಡೆಸಿದೆ ಎಂದು ಪ್ರಿಯದರ್ಶಿನಿ ಕೋ- ಆಪರೇಟಿವ್ ಸೊಸೈಟಿ ಲಿ. ಹಳೆಯಂಗಡಿಯ ಅಧ್ಯಕ್ಷ ಎಚ್‌ ವಸಂತ ಬೆರ್ನಾಡ್‌ ತಿಳಿಸಿದ್ದಾರೆ.

ಮೂಲ್ಕಿ: ಪ್ರಿಯದರ್ಶಿನಿ ಕೋ- ಆಪರೇಟಿವ್ ಸೊಸೈಟಿ ಲಿ. ಹಳೆಯಂಗಡಿ ಸಂಸ್ಥೆಯು ಸದಸ್ಯರ ಪ್ರೋತ್ಸಾಹ, ಗ್ರಾಹಕರ ಸಹಕಾರ, ಆಡಳಿತ ವರ್ಗದವರ ಮಾರ್ಗದರ್ಶನ ಹಾಗೂ ಸಿಬ್ಬಂದಿಗಳ ಕಾರ್ಯಶ್ರಮತೆಯಿಂದಾಗಿ 2025-26ನೇ ಸಾಲಿನಲ್ಲಿ 483 ಕೋಟಿ ರು. ವ್ಯವಹಾರ ನಡೆಸಿದೆ ಎಂದು ಪ್ರಿಯದರ್ಶಿನಿ ಕೋ- ಆಪರೇಟಿವ್ ಸೊಸೈಟಿ ಲಿ. ಹಳೆಯಂಗಡಿಯ ಅಧ್ಯಕ್ಷ ಎಚ್‌ ವಸಂತ ಬೆರ್ನಾಡ್‌ ತಿಳಿಸಿದ್ದಾರೆ.

ಮಾಜಿ ಸಚಿವ ಕೆ ಅಭಯ ಚಂದ್ರ ಜೈನ್ ರ ಮಾರ್ಗದರ್ಶನದಲ್ಲಿ ಸಹಕಾರಿ ರಂಗದ ಭೀಷ್ಮ ದಿ. ಎಚ್ ನಾರಾಯಣ ಸನಿಲ್ ಮತ್ತು ದಿ. ಪಂಜದಗುತ್ತು ಶಾಂತರಾಮ ಶೆಟ್ಟಿ ರವರ ಪ್ರೇರಣಾ ಶಕ್ತಿಯಿಂದ 2021 ರಲ್ಲಿ ಪ್ರಾರಂಭವಾದ ಪ್ರಿಯದರ್ಶಿನಿ ಕೋ- ಆಪರೇಟಿವ್ ಸೊಸೈಟಿಯು, ವರದಿ ಸಾಲಿನಲ್ಲಿ 483 ಕೋಟಿ ರು. ವ್ಯವಹಾರವನ್ನು ದಾಖಲಿಸಿದೆ. ಕಳೆದ ಸಾಲಿನ ವ್ಯವಹಾರದಿಂದ ಶೇ 72.86 ಏರಿಕೆ ಕಂಡಿದೆ. ಪ್ರಸ್ತುತ 38.32 ಕೋಟಿ ರು.. ಠೇವಣಿ, 32.48 ಕೋಟಿ ರು. ಸಾಲ ಮತ್ತು ಮುಂಗಡಗಳೊಂದಿಗೆ 76.57 ಲಕ್ಷ ರು. ಪಾಲು ಬಂಡವಾಳ, 90. 50 ಲಕ್ಷ ರು. ನಿಧಿಗಳು, 40 ಕೋಟಿ ರು. ದುಡಿಯುವ ಬಂಡವಾಳ ಹೊಂದಿರುತ್ತದೆ. 2025-26ನೇ ಸಾಲಿನಲ್ಲಿ ಉತ್ತಮ ಲಾಭಾಂಶ ಗಳಿಸಿದ್ದು, ಸದಸ್ಯರಿಗೆ ಉತ್ತಮ ರೀತಿಯ ಪಾಲು ಮುನಾಫೆಯನ್ನು ಹಂಚುವ ಗುರಿ ಹೊಂದಿದೆ. ಹಳೆಯಂಗಡಿ, ಪಡುಬಿದ್ರೆ, ಕಿನ್ನಿಗೋಳಿ ಮತ್ತು ಮೂಡಬಿದ್ರೆ ಸೇರಿದಂತೆ ಒಟ್ಟು ನಾಲ್ಕು ಶಾಖೆಗಳನ್ನು ಹೊಂದಿರುವ ಸೊಸೈಟಿಯು ವರದಿ ವರ್ಷದಲ್ಲಿ ಕೂಡ ಹೊಸ ಶಾಖೆ ಒಂದನ್ನು ತೆರೆಯುವ ಗುರಿ ಇಟ್ಟುಕೊಂಡಿದೆ ಎಂದು ಅವರು ತಿಳಿಸಿದರು. ಅವಲೋಕನ ಸಭೆಯಲ್ಲಿ ಸಂಸ್ಥೆಯ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಸುದರ್ಶನ, ಲೆಕ್ಕಿಗರಾದ ಲೋಲಾಕ್ಷಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಡತನ ನೀಗಿದ್ದರೆ ಪ್ರಚಾರಕ್ಕೆ 5 ದಿನ ಬರಬೇಕಿತ್ತಾ?: ಕುಮಾರಸ್ವಾಮಿ
ಕಾರಜೋಳ-ಚರಂತಿಮಠ ಜೋಡಿ ಬಾಗಲಕೋಟೆ ಅಭಿವೃದ್ಧಿಗೆ ಮಾರಕ: ತಿಮ್ಮಾಪೂರ