-ಸಚಿವ ಪ್ರಿಯಾಂಕ್ ಖರ್ಗೆ ಹುಟ್ಟುಹಬ್ಬ ಪ್ರಯುಕ್ತ ಜಿಲ್ಲೆಯಲ್ಲಿ ರಕ್ತದಾನ, ಅನ್ನದಾನ ಕಾರ್ಯಕ್ರಮ । ಅಭಿಮಾನಿಗಳಿಂದ ಸಚಿವರಿಗೆ ಶುಭಹಾರೈಕೆ
-----ಕನ್ನಡಪ್ರಭ ವಾರ್ತೆ ಕಲಬುರಗಿ
ಸಚಿವ ಪ್ರಿಯಾಂಕ್ ಖರ್ಗೆ ಹುಟ್ಟುಹಬ್ಬ ಪ್ರಯುಕ್ತ ಜಿಲ್ಲೆಯಲ್ಲಿ ರಕ್ತದಾನ, ಅನ್ನದಾನ ಕಾರ್ಯಕ್ರಮ ನಡೆಸಿದ ಅಭಿಮಾನಿಗಳು ಸಚಿವರಿಗೆ ಶುಭಹಾರೈಸಿದರು.ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯಿತಿ ರಾಜ್ ಮತ್ತು ಐಟಿ/ ಬಿಟಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರ 47 ನೇ ಹುಟ್ಟುಹಬ್ಬದ ಪ್ರಯುಕ್ತ ಕಲಬುರಗಿ ನಗರ ಹಾಗೂ ಹಲವಾರು ಪಟ್ಟಣಗಳಲ್ಲಿ ಹಾಗೂ ನಗರಗಳಲ್ಲಿ ಉಚಿತ ಆರೋಗ್ಯ ತಪಾಸಣೆ, ಕಣ್ಣು ಪರೀಕ್ಷೆ, ರಕ್ತದಾನ ಶಿಬಿರ ಹಾಗೂ ಅನ್ನ ಸಂತರ್ಪಣೆ ನೆರವೇರಿಸಲಾಯಿತು.
ಸಾರ್ವಜನಿಕರು, ಯುವಕರು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿ ಶಿಬಿರಗಳಲ್ಲಿ ಭಾಗಿಯಾಗಿದ್ದರು.ಈ ಸಂದರ್ಭದಲ್ಲಿ ಮಾನ್ಯ ಸಚಿವರಿಗೆ ಶುಭ ಹಾರೈಸಿದರು. ಕಂಪ್ಯೂಟರ್ ತರಬೇತಿಗೆ ಚಾಲನೆ: ಪ್ರಿಯಾಂಕ್ ಖರ್ಗೆ ಹುಟ್ಟು ಹಬ್ಬದ ಪ್ರಯುಕ್ತ ರೆಡ್ಡೀಸ್ ಇನ್ಸ್‌ಟ್ಯೂಟ್, ಕಂಪ್ಯೂಟರ್ ತರಬೇತಿ ಕೇಂದ್ರ & ಶ್ರೀ ಮಲ್ಲಿಕಾರ್ಜುನ ಖರ್ಗೆ ಅಭಿಮಾನಿಗಳ ಸಂಘ ಜಂಟಿಯಾಗಿ ಯುವಕ/ಯುವತಿಯರಿಗೆ ಉಚಿತ ಬೇಸಿಕ್ ಕಂಪ್ಯೂಟರ್ ತರಬೇತಿಗೆ ಶಾಸಕ ಅಲ್ಲಂಪ್ರಭು ಪಾಟೀಲ, ಎಂಎಲ್‍ಸಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ, ಸಂಸ್ಥೆಯ ಅಧ್ಯಕ್ಷ ಶಾಂತರೆಡ್ಡಿ ಪೇಠಶಿರೂರ ಉದ್ಘಾಟಿಸಿದರು.
ಶಾಸಕ ಅಲ್ಲಂಪ್ರಭು ಪಾಟೀಲ ಮಾತನಾಡಿ, ಪ್ರಿಯಾಂಕ್ ಖರ್ಗೆ, ಯುವ ಕಾಂಗ್ರೆಸ್ ನಲ್ಲಿದ್ದು, ಹೋರಾಟದಿಂದ ರಾಜಕೀಯಕ್ಕೆ ಬಂದರು ಎಂದು ಶ್ಲಾಘಿಸಿದರು.ಉಚಿತ ಬೇಸಿಕ್ ಕಂಪ್ಯೂಟರ್ ತರಬೇತಿ ಆಯೋಜಿಸಿದ ಮಲ್ಲಿಕಾರ್ಜುನ ಖರ್ಗೆ ಅಭಿಮಾನಿಗಳ ಸಂಘ, ರೆಡ್ಡೀಸ್ ಇನ್ಸ್‌ಟ್ಯೂಟ್ ಕಂಪ್ಯೂಟರ್ ತರಬೇತಿ ಕೇಂದ್ರ ಮುಖ್ಯಸ್ಥರಿಗೆ ಸದಸ್ಯರಿಗೆ ಧನ್ಯವಾದ ತಿಳಿಸಿದರು.
ರಾಜು ದೇಶಮುಖ, ದಯಾನಂದ ಮನೋಕರ, ಮಂಜುನಾಥ ಅಣಕಲ್, ಸಿದ್ರಾಮರೆಡ್ಡಿ, ಪ್ರಶಾಂತ ರೆಡ್ಡಿ, ಲಿಂಗರಾಜ ಭಾವಿಕಟ್ಟಿ, ರಾಧಾಕೃಷ್ಣ, ಜಯವರ್ಧನ, ಜಗದೀಶ ಪಾಟೀಲ್, ಆನಂದ ಹೋಳಕುಂದಿ,ನಾಗಾರಾಜ, ಕಲ್ಯಾಣರಾವ, ಆಕಾಶ,ಚಂದ್ರಕಾಂತ ಇದ್ದರು ಸಂತೋಷ ಜವಳಿ ವಂದಿಸಿದರು.