ಕನ್ನಡಪ್ರಭ ವಾರ್ತೆ ಹಟ್ಟಿಚಿನ್ನದಗಣಿ
ಸಿಐಟಿಯು ಹಟ್ಟಿ ಘಟಕ ಹಾಗೂ ಹಟ್ಟಿ ಚಿನ್ನದ ಗಣಿ ಸಿಬ್ಬಂದಿ ಹಾಗೂ ಕಾರ್ಮಿಕ ಸಂಘದ ನೇತೃತ್ವದಲ್ಲಿ ಹಟ್ಟಿಚಿನ್ನದಗಣಿ ಮುಖ್ಯ ಕಾರ್ಯಾಲಯದ ಮುಂದೆ ನಡೆಸಿದ ಪ್ರತಿಭಟನೆಯನ್ನುದ್ದೇಶಿಸಿ ಶನಿವಾರ ಮಾತನಾಡಿದರು.
ನೂರಾರು ಕಾರ್ಮಿಕರು ಸೇರಿ ಕಾರ್ಮಿಕರನ್ನು ನವಗುಲಾಮಗಿರಿಗೆ ತಳ್ಳುವ, ಕಾರ್ಮಿಕ ಇಲಾಖೆಯನ್ನು ದುರ್ಬಲಗೊಳಿಸುವ, ಹಿಂಬಾಗಲಿನ ಮೂಲಕ ಕಾರ್ಮಿಕ ಸಂಹಿತೆಗಳ ಜಾರಿಗೆ ಹುನ್ನಾರ ನಡೆಸಿರುವ, ಕೇಂದ್ರ ಸರ್ಕಾರದ ಕರಾಳ ನೂತನ ಶ್ರಮ ಶಕ್ತಿ ನೀತಿ ವಾಪಸ್ಸಾಗಬೇಕೆಂದರು. ಕಾರ್ಮಿಕ ಸಂಹಿತೆ ಗಳ ಅಧಿಸೂಚನೆಯನ್ನು ವಿರೋಧಿಸಿ, ಕರ್ನಾಟಕ ಸರ್ಕಾರ ಈ ಸಂಹಿತೆಗಳಿಗೆ ನಿಯಮಗಳನ್ನು ರೂಪಿಸಬಾರದು ಎಂದು ಒತ್ತಾಯಿಸಿ ಕಾರ್ಮಿಕರು ಘೋಷಣೆ ಕೂಗಿದರು.ಸಿಬ್ಬಂದಿ ಹಾಗೂ ಕಾರ್ಮಿಕ ಸಂಘದ ಉಪಾಧ್ಯಕ್ಷ ಆನ್ವರಿ ಶಾಂತಪ್ಪ, ಕಾರ್ಯದರ್ಶಿ ಗಳಾದ ಹನೀಫ್, ಜಮದಗ್ನಿ, ರಮೇಶಬಾಬು, ಸಿದ್ದಪ್ಪ ಮುಂಡರಗಿ, ಚಂದ್ರಶೇಖರ್ ನೆಲೋಗಿ, ಗುಂಡಪ್ಪಗೌಡ, ಸಿಐಟಿಯು ಹಟ್ಟಿ ಘಟಕದ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಗೋರ್ ಕಲ್, ಪ್ರಮುಖರಾದ ಮೈನುದ್ದೀನ್, ಕಾರ್ಮಿಕರಿದ್ದರು.
--22ಹಟ್ಟಿಚಿನ್ನದಗಣಿ1:ಕೇಂದ್ರ ಸರ್ಕಾರದ ಕಾರ್ಮಿಕ ನೀತಿ ವಿರೋಧಿಸಿ ಹಟ್ಟಿ ಚಿನ್ನದಗಣಿ ಕಂಪನಿ ಕಾರ್ಮಿಕರು ಕಾರ್ಮಿಕ ಸಂಘದ ನೇತೃತ್ವದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.