ದಸರಾ ಮನೆ ಮನೆ ಗೊಂಬೆ ಸ್ಪರ್ಧೆಯ ಬಹುಮಾನ ವಿತರಣೆ

KannadaprabhaNewsNetwork |  
Published : Oct 21, 2025, 01:00 AM IST
39 | Kannada Prabha

ಸಾರಾಂಶ

ಸುಮಾರು 25 ಜನರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ರು. ಒಂದು ಸಾವಿರ ನಗದು ಬಹುಮಾನವನ್ನು ಹಾಗೂ 17 ಜನರಿಗೆ ರು. 500 ಗಳಂತೆ ಬಹುಮಾನವನ್ನು ನೀಡಲಾಯಿತು

ಕನ್ನಡಪ್ರಭ ವಾರ್ತೆ ಮೈಸೂರುಎಚ್.ವಿ. ರಾಜೀವ್‌ ಸ್ನೇಹ ಬಳಗ, ವಿಪ್ರ ಮಹಿಳಾ ಸಂಗಮ ಮತ್ತು ಕೃಷ್ಣ ಕಾಲಿಂಗ್ ಚಾರಿಟಬಲ್ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ದಸರಾ ಮನೆ ಮನೆ ಗೊಂಬೆ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭವು ಕುವೆಂಪುನಗರದ ಪ್ರಮತಿ ವಿದ್ಯಾಸಂಸ್ಥೆಯಲ್ಲಿ ನಡೆಯಿತು.ಎಚ್.ವಿ. ರಾಜೀವ್ ಅವರು ತಂಡಗಳನ್ನು ರಚನೆ ಮಾಡಿ, ದಸರಾ ಗೊಂಬೆಗಳನ್ನು ಜೋಡಣೆಯ ಸುಮಾರು 150ಕ್ಕೂ ಹೆಚ್ಚು ಮನೆ ಮನೆಗಳಿಗೆ ಭೇಟಿ ನೀಡಿ ಯಾರು ಅತ್ಯುತ್ತಮವಾದ ರೀತಿಯಲ್ಲಿ ಗೊಂಬೆಗಳನ್ನು ಜೋಡಣೆ ಮಾಡಿದ್ದಾರೆ ಅವರಲ್ಲಿ ಪ್ರಥಮ ಬಹುಮಾನವಾಗಿ 25 ಸಾವಿರ ರು., ದ್ವಿತೀಯ ಬಹುಮಾನವಾಗಿ ರು. 15 ಸಾವಿರ ಹಾಗೂ ತೃತೀಯ ಬಹುಮಾನವಾಗಿ ರು. 10 ಸಾವಿರಗಳನ್ನು ನೀಡಲಾಯಿತು.ಇದರೊಂದಿಗೆ ವಿಶೇಷವಾಗಿ 65 ವಯಸ್ಸು ಮೇಲ್ಪಟ್ಟು ವಯೋವೃದ್ಧರು ಕೂರಿಸಿರುವ ದಸರಾ ಗೊಂಬೆಗಳಿಗೆ ಅವರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ತಲಾ ರು. 5 ಸಾವಿರಗಳಂತೆ 7 ಜನರಿಗೆ ಬಹುಮಾನ ನೀಡಲಾಯಿತು ಇದರೊಂದಿಗೆ ಸುಮಾರು 25 ಜನರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ರು. ಒಂದು ಸಾವಿರ ನಗದು ಬಹುಮಾನವನ್ನು ಹಾಗೂ 17 ಜನರಿಗೆ ರು. 500 ಗಳಂತೆ ಬಹುಮಾನವನ್ನು ನೀಡಲಾಯಿತು ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಪ್ರಮಾಣ ಪತ್ರವನ್ನು ನೀಡಿ ಪ್ರೋತ್ಸಾಹಿಸಲಾಯಿತು.ಪ್ರಥಮ ಬಹುಮಾನ ಗೀತಾ ಶ್ರೀಹರಿ, ದ್ವಿತೀಯ ಬಹುಮಾನ ವಿ.ಆರ್. ಪಾರ್ವತಿ ಮತ್ತು ತೃತಿಯ ಬಹುಮಾನವನ್ನು ಹೇಮಲತಾ ಕುಮಾರಸ್ವಾಮಿ ಅವರು ಪಡೆದರು.ಬಳಗ ಅಧ್ಯಕ್ಷ ಎಚ್‌.ವಿ. ರಾಜೀವ್, ಆಕಾಶವಾಣಿಯ ನಿವೃತ್ತ ಮಹಾನಿರ್ದೇಶಕ ಡಾ. ವಿಜಯಹರನ್, ನೃತ್ಯಾಲಯ ಟ್ರಸ್ಟ್‌ನ ನಿರ್ದೇಶಕಿ ತುಳಸಿ ರಾಮಚಂದ್ರ, ವಿಪ್ರ ಮಹಿಳಾ ಸಂಗಮದ ಅಧ್ಯಕ್ಷೆ ಕೆ.ವಿ. ಲಕ್ಷ್ಮೀದೇವಿ, ಕೃಷ್ಣ ಕಾಲಿಂಗ್‌ ಚಾರಿಟಬಲ್‌ ಟ್ರಸ್ಟ್‌ ಅಧ್ಯಕ್ಷ ಕೆ.ಆರ್. ಗಣೇಶ್ ರಾವ್, ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ದಸರಾ ಮನೆ ಮನೆ ಗೊಂಬೆ ಸ್ಪರ್ಧೆಯಲ್ಲಿ ಪಾಲ್ಗೊಂಡ ಭಾಗವಹಿಸಿದ ಎಲ್ಲ ಸದಸ್ಯರು ಭಾಗವಹಿಸಿದ್ದರು.

PREV

Recommended Stories

ಮಲೆನಾಡು, ಕರಾವಳಿಯಲ್ಲಿ ಮಳೆ : ಜನಜೀವನ ಅಸ್ತವ್ಯಸ್ತ
ಚಿತ್ತಾಪುರದಲ್ಲಿ ನ.2ರಂದು ಪಥ ಸಂಚಲನ: ಅನುಮತಿ ಕೋರಿ ಹೊಸದಾಗಿ ಅರ್ಜಿ