ರಾಮನಗರ: ವೃತ್ತಿಯಲ್ಲಿ ಸಾಮಾಜಿಕ ಚಿಂತನೆ ಇಟ್ಟುಕೊಂಡು ಸ್ವಾರ್ಥವಿಲ್ಲದೆ ಬಡವ ಬಲ್ಲಿದ ಬೇಧ ಭಾವ ಇಲ್ಲದೆ ಸೇವೆ ಸಲ್ಲಿಸಿದ ಎನ್ ಡಿಎ ಅಭ್ಯರ್ಥಿ ಡಾ.ಸಿ.ಎನ್ .ಮಂಜುನಾಥ್ ಅವರಿಗೆ 20ಕ್ಕೂ ಹೆಚ್ಚು ಕನ್ನಡಪರ ಸಂಘಟನೆಗಳು ಬೆಂಬಲ ನೀಡಿವೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ರಾಜ್ಯಾಧ್ಯಕ್ಷ ಪಿ.ಕೃಷ್ಣೇಗೌಡ ಮನವಿ ಮಾಡಿದರು.
ಕಸ್ತೂರಿ ಜನಪರ ವೇದಿಕೆ ರಾಜ್ಯಾಧ್ಯಕ್ಷ ನೀಲೇಶ್ ಗೌಡ ಮಾತನಾಡಿ, ಕನ್ನಡಪರ ಸಂಘಟನೆಗಳು ನೆಲ ಜಲ ಭಾಷೆ ರಕ್ಷಣೆ ಮಾಡುತ್ತಿದ್ದ ಪ್ರಾದೇಶಿಕ ಪಕ್ಷವನ್ನು ಬೆಂಬಲಿಸುತ್ತಾ ಬಂದಿದೆ. ಈಗ 20ಕ್ಕೂ ಹೆಚ್ಚು ಕನ್ನಡಪರ ಸಂಘನೆಗಳು ಡಾ.ಮಂಜುನಾಥ್ ಅವರಿಗೆ ವ್ಯಕ್ತಿಗತವಾಗಿ ಬೆಂಬಲ ನೀಡುತ್ತಿದೆ ಎಂದು ತಿಳಿಸಿದರು.
ಮಂಜುನಾಥ್ ಅವರು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ರತ್ನ ಇದ್ದಂತೆ. ಕೇಂದ್ರದಲ್ಲಿ ಆರೋಗ್ಯ ಸಚಿವರಾಗುವ ಅವಕಾಶವಿದ್ದು, ಇದರಿಂದ ಜಿಲ್ಲೆಯಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರಲಿದ್ದಾರೆ ಎಂದರು.ಕರ್ನಾಟಕ ನವ ನಿರ್ಮಾಣ ವೇದಿಕೆ ರಾಜ್ಯಾಧ್ಯಕ್ಷ ನರಸಿಂಹಮೂರ್ತಿ ಮಾತನಾಡಿ, ಕನ್ನಡಪರ ಸಂಘಟನೆಗಳು ನಾಡಿನ ನೆಲ ಜಲ ಭಾಷೆ ಬಗ್ಗೆ ಹೋರಾಟ ಮಾಡಿಕೊಂಡು ಬಂದಿವೆ. ದೇಶದಲ್ಲಿ 543 ಕ್ಷೇತ್ರಗಳ ಅಭ್ಯರ್ಥಿಗಳ ಪೈಕಿ ಡಾ.ಮಂಜುನಾಥ್ ರವರು ಸಜ್ಜನ ವ್ಯಕ್ತಿಯಾಗಿದ್ದಾರೆ. ಇಡೀ ದೇಶ ಬೆಂಗಳೂರು ಗ್ರಾಮಾಂತರ ಕ್ಷೇತ್ರದತ್ತ ನೋಡುತ್ತಿದ್ದಾರೆ ಎಂದು ಹೇಳಿದರು.
ಯಾವ್ಯಾವ ಸಂಘಟನೆಗಳ ಬೆಂಬಲ:
ಕರವೇ ಪ್ರವೀಣ್ ಶೆಟ್ಟಿ ಬಣದ ಜಿಲ್ಲಾ ಉಸ್ತುವಾರಿ ಅಧ್ಯಕ್ಷ ಕನ್ನಡ ಮಂಜು, ಕರುನಾಡ ಸೇವಕ ರಾಜ್ಯಾಧ್ಯಕ್ಷ ಲೋಕೇಶಗೌಡ, ಕರ್ನಾಟಕ ಯುವ ರಕ್ಷಣಾ ಸೇನೆ ರಾಜ್ಯಾಧ್ಯಕ್ಷ ಸುನೀಲ್ , ಕರ್ನಾಟಕ ರಕ್ಷಣಾ ಸೇನೆ ರಾಜ್ಯಾಧ್ಯಕ್ಷರು ಟಿ.ರಮೇಶಗೌಡ, ಕರ್ನಾಟಕ ಕಾರ್ಮಿಕ ಪರೀಷತ ರಾಜ್ಯಾಧ್ಯಕ್ಷ ನಾರಾಯಣ, ಕರವೇ ಸ್ವಾಭಿಮಾನಿ ಬಣ ದ ಜಿಲ್ಲಾ ಉಪಾಧ್ಯಕ್ಷ ಬೆಟ್ಟೆಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಾಸು ಜಿಲ್ಲಾ ಕಾರ್ಯದರ್ಶಿ ಮನು, ಪ್ರತತಾ, ರಮೇಶ ಅವರು ಎನ್ ಡಿಎ ಅಭ್ಯರ್ಥಿ ಕುಮಾರಸ್ವಾಮಿಗೆ ಬೆಂಬಲ ಸೂಚಿಸಿದ್ದಾರೆ.22ಕೆಆರ್ ಎಂಎನ್ 1.ಜೆಪಿಜಿರಾಮನಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ರಾಜ್ಯಾಧ್ಯಕ್ಷ ಪಿ.ಕೃಷ್ಣೇಗೌಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.