ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದವರು ಜನರಿಗೆ ತೊಂದರೆ ಆಗುವುದನ್ನು ತಪ್ಪಿಸುವಂತ ಅನೇಕ ಜನಪರ ಹಾಗೂ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಕಸಾಪ ಗೌರವ ತಾಲೂಕು ಕಾರ್ಯದರ್ಶಿ, ಪತ್ರಕರ್ತ ಎಂ.ಚಿದಾನಂದ ಕಂಚಿಕೇರಿ ಹೇಳಿದರು.
ಕನ್ನಡಪ್ರಭ ವಾರ್ತೆ ಹರಿಹರ
ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದವರು ಜನರಿಗೆ ತೊಂದರೆ ಆಗುವುದನ್ನು ತಪ್ಪಿಸುವಂತ ಅನೇಕ ಜನಪರ ಹಾಗೂ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಕಸಾಪ ಗೌರವ ತಾಲೂಕು ಕಾರ್ಯದರ್ಶಿ, ಪತ್ರಕರ್ತ ಎಂ.ಚಿದಾನಂದ ಕಂಚಿಕೇರಿ ಹೇಳಿದರು.
ನಗರದ ಕರ್ನಾಟಕ ರಕ್ಷಣಾ ವೇದಿಕೆ( ಪ್ರವೀಣ್ ಶೆಟ್ಟಿ ಬಣದ ವತಿಯಿಂದ 70ನೇ ಕನ್ನಡ ರಾಜ್ಯೋತ್ಸವ ಆಚರಣೆ ಪ್ರಯುಕ್ತ ನಡೆದ ಆರೋಗ್ಯ ತಪಾಸಣೆ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಕೇವಲ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಿಕ್ಕೆ ಸೀಮಿತವಾಗಿರದೆ ಸಾರ್ವಜನಿಕರಿಗೆ ತೊಂದರೆ ಆದ ಸಂದರ್ಭದಲ್ಲಿ ರಸ್ತೆಗಿಳಿದು ಹೋರಾಟ ನಡೆಸಿ ಅನ್ಯಾಯದ ತಡೆಗೋಡೆ ಆಗಿದ್ದಾರೆ. ರಕ್ಷಣಾ ವೇದಿಕೆಯ ಪ್ರೀತಂ ಬಾಬು, ರಮೇಶ್ ಮಾನೆ ಯವರ ಹೋರಾಟದ ಫಲವಾಗಿ ಹಳ್ಳದ ಮೇಲಿನ ರಸ್ತೆಗೆ ತಡೆಗೋಡೆ ವ್ಯವಸ್ಥೆ, ಸಾರ್ವಜನಿಕ ಆಸ್ಪತ್ರೆಗೆ ಡೈಯಾಲಿಸಿಸ್ ಕೇಂದ್ರ ಸೇರಿ ಅನೇಕ ಜನ ಪರ ಹೋರಾಟ ಮಾಡಿದ್ದಾರೆ ಎಂದರು.
ಡಾ. ಅಬ್ದುಲ್ ಖಾದರ್ ಮಾತನಾಡಿ, ಪೋಷಕರು ತಮ್ಮ ಮಕ್ಕಳಿಗೆ ಬಾಲ್ಯದಲ್ಲೇ ಕನ್ನಡದ ಇತಿಹಾಸ, ಪರಂಪರೆಯನ್ನು ತಿಳಿಸುವಂತಾದರೆ, ಮಕ್ಕಳಲ್ಲಿ ಕನ್ನಡ ಅಭಿಮಾನ ಮೂಡುತ್ತದೆ ಎಂದರು.
ಕಸಾಪ ಅಧ್ಯಕ್ಷ ಡಿ.ಎಂ.ಮಂಜುನಾಥಯ್ಯ ಮಾತನಾಡಿ, ನವೆಂಬರ್ ತಿಂಗಳಲ್ಲಿ ಬಹುತೇಕ ಕನ್ನಡಿಗರು ಕನ್ನಡ ರಾಜ್ಯೋತ್ಸವ ಆಚರಣೆ ಮಾಡಿ ನಾಡು ನುಡಿ ಸಾಹಿತ್ಯದ ಹಬ್ಬವನ್ನು ಸಂಭ್ರಮಿಸುವಂತದ್ದು ಶ್ಲಾಘನೀಯ ಕಾರ್ಯ, ಅದರಂತೆ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದರವರು ಜನತೆಗೆ ಆರೋಗ್ಯ ತಪಾಸಣೆ ಎಂಬ ಕಾರ್ಯವನ್ನು ಹಮ್ಮಿಕೊಂಡ ಜನರು ಆರೋಗ್ಯಕರ ಜೀವನ ನಡೆಸುವುದಕ್ಕೆ ವಿಶೇಷ ಕಾಳಜಿಯನ್ನು ಹೊಂದಿರುವಂತಹ ಅರ್ಥಪೂರ್ಣ ಕಾರ್ಯಕ್ರಮ ಎಂದರು.
ಎಚ್.ಕೆ. ಕೊಟ್ರಪ್ಪ ಮಾತನಾಡಿ, ಕನ್ನಡ ರಾಜ್ಯೋತ್ಸವ ಕೇವಲ ಒಂದು ದಿನಕ್ಕೆ ಸೀಮಿತವಾಗದೆ ಪ್ರತಿನಿತ್ಯ ಒಂದಿಲ್ಲೊಂದು ಕಾರ್ಯಗಳು ನಡೆಯುತ್ತಿರುವುದರಿಂದ, ಕನ್ನಡ ನಿತ್ಯೋತ್ಸವ ಆಗಿ ಪರಿವರ್ತನೆಗೊಂಡಿದೆ. ಕನ್ನಡ ನುಡಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ, ಅನೇಕ ಅಧಿಕಾರಿಗಳಿಗೆ ನಿರ್ಲಕ್ಷ್ಯದಿಂದ ಕರ್ತವ್ಯವನ್ನು ಮಾಡದಂತೆ ಎಚ್ಚರಿಕೆ ಕೊಡುವ ಕಾರ್ಯ ಸಂಸ್ಥೆ ಮಾಡುತ್ತಿದೆ ಎಂದು ಹೇಳಿದರು.
ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ರಮೇಶ್ ಮಾನೆ ಪ್ರೀತಂ ಬಾಬು, ಮಾಜಿ ಶಾಸಕ ಎಸ್.ರಾಮಪ್ಪ, ನಗರಸಭೆ ಮಾಜಿ ಸದಸ್ಯ ಶಂಕರ್ ಖಟಾವ್ಕರ್, ಪಿಎಸ್ಐ ಶ್ರೀಪತಿ ಗಿನ್ನಿ, ಡಾ.ವಿಶ್ವನಾಥ್, ಉಪನ್ಯಾಸಕ ಇದ್ರೂಸ್, ಕನ್ನಡ ರಕ್ಷಣಾ ವೇದಿಕೆಯ ಗೌರವ ಸಲಹೆಗಾರ ಬಿ.ಮುಗ್ದಂ, ಎಂ.ಎನ್.ವಸಿದ್ದಪ್ಪ, ಉಪಾಧ್ಯಕ್ಷ ಶಂಕರ್ ದುರಗೋಜಿ, ಶೇಕ್ ಆಹ್ಮದ್, ಅಲಿ ಅಕ್ಬರ್, ರಜಾಕ್, ಗೀತಮ್ಮ ಅನೇಕರು ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.