ಮಠಗಳು ಸಮಾಜದ ಶಕ್ತಿ ಕೇಂದ್ರಗಳು

KannadaprabhaNewsNetwork |  
Published : Dec 02, 2025, 01:45 AM IST
 ಫೋಟೋ ಇದೆ  :-29 ಕೆಜಿಎಲ್ 1 :  ಅಂಕನಹಳ್ಳಿ ಮಠದಲ್ಲಿ ಹಲವಾರು ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳೊಂದಿಗೆ ಸ್ವಾಮೀಜಿ | Kannada Prabha

ಸಾರಾಂಶ

ಮಠಗಳು ಸಮಾಜದ ಎಲ್ಲಾ ಅಗತ್ಯಗಳನ್ನು ಪೂರೈಸುವ ಶಕ್ತಿ ಕೇಂದ್ರಗಳಾಗಿವೆ ಅದಕ್ಕಾಗಿ ಸಮಾಜವು ಕೂಡ ಮಠಕ್ಕೆ ವಿಧೇಯತೆಯಿಂದ ನಡೆದುಕೊಳ್ಳಬೇಕು ಎಂದು ಅಂಕನಹಳ್ಳಿ ಮಠದ ಶ್ರೀ ಶಿವರುದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕುಣಿಗಲ್ ಮಠಗಳು ಸಮಾಜದ ಎಲ್ಲಾ ಅಗತ್ಯಗಳನ್ನು ಪೂರೈಸುವ ಶಕ್ತಿ ಕೇಂದ್ರಗಳಾಗಿವೆ ಅದಕ್ಕಾಗಿ ಸಮಾಜವು ಕೂಡ ಮಠಕ್ಕೆ ವಿಧೇಯತೆಯಿಂದ ನಡೆದುಕೊಳ್ಳಬೇಕು ಎಂದು ಅಂಕನಹಳ್ಳಿ ಮಠದ ಶ್ರೀ ಶಿವರುದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ. ತಾಲೂಕಿನ ಅಂಕನಹಳ್ಳಿ ಮಠದಲ್ಲಿ ಫಿರಂಗೇಶ್ವರ ಸ್ವಾಮಿ ಗುರುಕುಲ ಶ್ರಮ ಹಾಗೂ ಗ್ರಾಮಾಂತರ ನಿಲಯ ಪ್ರೌಢಶಾಲೆ ಮಾಧ್ಯಮಿಕ, ಸಂಸ್ಕೃತಿಕ ಪಾಠಶಾಲೆ, ಹಾಗೂ ವೇದಾಗಮ ಪಾಠಶಾಲೆ ವತಿಯಿಂದ ಏರ್ಪಡಿಸಿದ್ದ ಶಾಲಾ ವಾರ್ಷಿಕೋತ್ಸವ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು . ಮನುಷ್ಯನ ಹುಟ್ಟು ಪ್ರಾರಂಭ ಆದಾಗ ಗುರುವಿನ ಪ್ರವೇಶ ಆಗುತ್ತದೆ ಅಂದಿನಿಂದ ಗುರು ಮತ್ತು ಶಿಷ್ಯನ ಸಂಬಂಧ ಪ್ರಾರಂಭ ಆಗುತ್ತಿದೆ. ಆತನ ವೈವಾಹಿಕ ಜೀವನದ ನಂತರವೂ ಕೂಡ ಗುರುಗಳ ಆಶೀರ್ವಾದ ಜೊತೆಗೆ ಶಿಕ್ಷಣ, ಜ್ಞಾನ ಆಧ್ಯಾತ್ಮ ಸೇರಿದಂತೆ ಹಲವಾರು ಸದ್ಗತಿಗಳನ್ನು ನೀಡುವ ಕಾರ್ಯ ಮಠ ನಿರಂತರವಾಗಿ ಮಾಡುತ್ತಾ ಬರುತ್ತಿದ್ದು, ಸಾಂಸಾರಿಕ ಜೀವನದ ನಡೆಸುವ ಪ್ರತಿಯೊಬ್ಬರಿಗೂ ಕೂಡ ಮಠಗಳು ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ. ಭಾರತ ಸ್ವಾತಂತ್ರ್ಯ ಪೂರ್ವದಿಂದಲೂ ಈ ದೇಶಕ್ಕೆ ಮಠಗಳು ನೀಡಿರುವ ಕೊಡುಗೆಗಳು ಅಪಾರ ಇದೆ. ಶಿಕ್ಷಣ ಕ್ಷೇತ್ರ ಆರೋಗ್ಯ ಕ್ಷೇತ್ರ ಧಾರ್ಮಿಕ ಸೇರಿದಂತೆ ವಸತಿ ಹಾಗೂ ಹಲವಾರು ಕ್ಷೇತ್ರಗಳಲ್ಲಿ ತನ್ನದೇ ಆದ ಕಾರ್ಯವನ್ನು ನಿರ್ವಹಿಸಿ ಮಠಗಳು ಉತ್ತಮ ಸಾಧನೆ ಮಾಡಿದ್ದೇವೆ ಎಂದರು. ಕರ್ನಾಟಕ ರಾಜ್ಯದಲ್ಲಿ ಮಠಗಳು ಮಾಡಿದ ಅಕ್ಷರ ಕ್ರಾಂತಿಯಿಂದ ಭಾರತ ದೇಶದ ಬಹುದೊಡ್ಡ ಕ್ರಾಂತಿ ಆಗಿದ್ದ ಹಿನ್ನೆಲೆಯಲ್ಲಿ ಬಹುತೇಕ ಅಕ್ಷರ ಜ್ಞಾನ ಉಳ್ಳಂತಹ ಅವರು ಕಾಣಬಹುದು ದೇಶದ ಅಭಿವೃದ್ಧಿಗಾಗಿ ಪ್ರತಿಯೊಬ್ಬರಿಗೂ ಕೂಡ ಮಠಗಳು ತನ್ನದೇ ಆದ ಕಾರ್ಯನಿರ್ವಹಿಸುತ್ತಿವೆ ಜಾತಿ ಭೇದ ಎಂಬುದನ್ನು ದೂರ ಇಟ್ಟು ಸಮಾನತೆಯ ಹಾದಿಯಲ್ಲಿ ಮಠಗಳು ಕಾರ್ಯನಿರ್ವಹಿಸುತ್ತಿವೆ ಎಂದರು. ಈ ಸಂದರ್ಭದಲ್ಲಿ ಹಲವಾರು ವಿಭಾಗಗಳಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಾರತೀಯರ ಕರೆತರಲು ವಿಶೇಷ ವಿಮಾನ ಮಾಡಿ: ಮೋದಿಗೆ ಸಿಎಂ ಸಿದ್ದು ಪತ್ರ
100ಕ್ಕೂ ಕನ್ನಡಿಗರ ಹೊತ್ತು ಬಂತು ಮೊದಲ ವಿಮಾನ