ಕನ್ನಡಪ್ರಭ ವಾರ್ತೆ ಲೋಕಾಪುರಪಟ್ಟಣದ ಸಮೀಪದ ಜ್ಯಾಡರ ಅರಳಿಕಟ್ಟಿ ಗ್ರಾಮಕ್ಕೆ ಭೇಟಿ ನೀಡಿ, ಇತ್ತೀಚೆಗೆ ಉಂಟಾದ ಬೆಳೆ ಹಾನಿ ಪ್ರದೇಶಗಳನ್ನು ಖುದ್ದಾಗಿ ಸಚಿವ ವಿಜಯಾನಂದ ಕಾಶಪ್ಪನವರ್ ಮತ್ತು ಶಾಸಕ ಆರ್.ಬಿ.ತಿಮ್ಮಾಪುರ ವೀಕ್ಷಿಸಿದರು.
ಕನ್ನಡಪ್ರಭ ವಾರ್ತೆ ಲೋಕಾಪುರ
ಪಟ್ಟಣದ ಸಮೀಪದ ಜ್ಯಾಡರ ಅರಳಿಕಟ್ಟಿ ಗ್ರಾಮಕ್ಕೆ ಭೇಟಿ ನೀಡಿ, ಇತ್ತೀಚೆಗೆ ಉಂಟಾದ ಬೆಳೆ ಹಾನಿ ಪ್ರದೇಶಗಳನ್ನು ಖುದ್ದಾಗಿ ಸಚಿವ ವಿಜಯಾನಂದ ಕಾಶಪ್ಪನವರ್ ಮತ್ತು ಶಾಸಕ ಆರ್.ಬಿ.ತಿಮ್ಮಾಪುರ ವೀಕ್ಷಿಸಿದರು.ಅನ್ನದಾತರಿಗೆ ಆಗಿರುವ ನಷ್ಟವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಅಧಿಕಾರಿಗಳಿಂದ ಹಾನಿಯ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದು, ರೈತರಿಗೆ ಶೀಘ್ರದಲ್ಲಿಯೇ ಸೂಕ್ತ ಪರಿಹಾರ ಒದಗಿಸಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ರೈತರ ಕಷ್ಟದ ಸಮಯದಲ್ಲಿ ನಮ್ಮ ಸರ್ಕಾರ ಸದಾ ಅವರ ಬೆಂಬಲಕ್ಕೆ ನಿಲ್ಲಲಿದೆ. ರೈತರು ಯಾವುದೇ ಕಾರಣಕ್ಕೂ ಆತಂಕಪಡುವ ಅಗತ್ಯವಿಲ್ಲ ಎಂದು ಅಭಯ ನೀಡಿದರು.ಅಧ್ಯಯನ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸಂಗಪ್ಪ, ಎಡಿಸಿ ಅಶೋಕ ತೇಲಿ, ಜಿಲ್ಲಾ ಕೃಷಿ ಜಂಟಿ ಅಧಿಕಾರಿ ಟಿ.ಎಸ್. ರುದ್ರೇಶ್, ಜಿಲ್ಲಾ ತೋಟಗಾರಿಕೆ ಇಲಾಖೆ ಅಧಿಕಾರಿ ರವೀಂದ್ರ ಹಕಾಟೆ, ಮುಧೋಳ ತಾಲೂಕು ತಹಸೀಲ್ದಾರ್ ಡಾ. ಚಿಕ್ಕಪ್ಪ ನಾಯಕ, ಸ್ಥಳದಲ್ಲಿ ಸಿದ್ದು ಕೊಣ್ಣೂರ ಉದಯ ಸರವಾಡ, ರಾಜುಗೌಡ, ಶಿವಾನಂದ ಉದಪುಡಿ, ಲೋಕಣ್ಣ, ಉಳ್ಳಾಗಡ್ಡಿ, ಪತ್ರಪ್ಪ ಹೊಸಕೋಟಿ ಹಾಗೂ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ರೈತರು ಉಪಸ್ಥಿತರಿದ್ದರು.