ಕನ್ನಡಪ್ರಭ ವಾರ್ತೆ ಮುನವಳ್ಳಿ
ಶಿಂದೋಗಿ ಗ್ರಾಮದ ಕಲ್ಮೇಶ್ವರ ದೇವಸ್ಥಾನದ ಸಭಾಭವನದಲ್ಲಿ ಶ್ರೀ ಹಡಪದ ಅಪ್ಪಣ್ಣನವರ 892 ನೇ ಜಯಂತ್ಯುತ್ಸವ ಜರುಗಿತು.ಸಾನಿಧ್ಯ ವಹಿಸಿದ್ದ ಸತ್ಸಂಗ ಆಶ್ರಮದ ಮುಕ್ತಾನಂದ ಶ್ರೀಗಳು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಸವಣ್ಣನವರ ಕಾಲದಲ್ಲಿ ಮಡಿ. ಮೈಲಗೆ ಜಾತಿ ಬೇಧ ಮರೆತು ಬಸವಣ್ಣನವರು ಎಲ್ಲ ಸಮಾಜದವರು ಒಂದೇ ಎಂದು ತೋರಿಸಿಕೊಟ್ಟರು. ಅವರ ಗುಂಪಿನಲ್ಲಿದ್ದ ಹಡಪದ ಅಪ್ಪಣ್ಣನವರ ಜೊತೆಗಿದ್ದ ಸಂತ ಮಾಂತರು ಸೇರಿ ಬಸವಣ್ಣನವರು ಕಲಿಸಿಕೊಟ್ಟ ಕಾಯಕದಿಂದ ಧರ್ಮ ನಿಷ್ಠೆಯಿಂದ ದುಡಿದು ತಮ್ಮ ಸಂಸಾರದ ಬಾರ ನಿಬಾಯಿಸುವದರ ಜೊತೆಗೆ ಸಂಘ ಸಂಸ್ಥೆಗಳನ್ನು ಕಟ್ಟಿ ಬೆಳೆಸಿ ಬಸವಣ್ಣನವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಿದ್ದರು. ಈಗಿನ ಯುವಕರು ಕಾಯಕದ ಜೊತೆಗೆ ಶಿಕ್ಷಣ ಸಂಸ್ಕೃತಿ ಕಲಿತು ಸಮಾಜಕ್ಕೆ ಮಾದರಿಯಾಗಬೇಕು. ಈಗಿನ ಸಮಾಜ ಮೌಢ್ಯಗಳಿಗೆ ದಾಸನಾಗದೆ ತಮ್ಮ ಕಾಯಕದಲ್ಲಿ ಶ್ರದ್ದೆ ಇಟ್ಟು ಕೆಲಸ ಮಾಡುವಂತೆ ತಿಳಿಸಿದರು. ಪತ್ರಕರ್ತ ಟಿ.ಎನ್.ಮುರಂಕರ ಪ್ರಾಸ್ತಾವಿಕವಾಗಿ ಮಾತನಾಡಿ, ಹಡಪದ ಅಪ್ಪಣ್ಣ ಸಮಾಜದ ಯುವಕರು ದುಶ್ಚಟಗಳಿಗೆ ಬಲಿಯಾಗದೆ ಮೊಬೈಲ್ ದಾಸರಾಗದೆ ತಮ್ಮ ಕಾಯಕ ವೃತ್ತಿಯಿಂದ ತಮ್ಮ ಕುಟುಂಬವನ್ನು ಉನ್ನತಮಟ್ಟಕ್ಕೆ ಸೇರಲು ಶ್ರಮಿಸಬೇಕೆಂದರು.ವೇದಮೂರ್ತಿಗಳಾದ ಮಡಿವಾಳಯ್ಯ ಹಿರೇಮಠ, ಈರಯ್ಯ ಹಿರೇಮಠ, ಅಧ್ಯಕ್ಷತೆಯನ್ನು ಸಮಾಜದ ಹಿರಿಯರಾದ ಶ್ರೀಶೈಲ ಉಜ್ಜಿನಕೊಪ್ಪ ವಹಿಸಿದ್ದರು. ಅತಿಥಿಗಳಾಗಿ ಗಂಗಪ್ಪ ಕುರಬಗಟ್ಟಿ, ಮದನ ಶಿಂಧೆ, ಎಚ್.ಆರ್.ತೋರಣಗಟ್ಟಿ, ಸುರೇಶ ಕುರಬಗಟ್ಟಿ, ಮಾಂತೇಶ ಕುರಬಗಟ್ಟಿ, ಜಿ.ಬಿ.ಕುರಬಗಟ್ಟಿ, ವಿ.ಎಚ್.ಪಾಟೀಲ, ಮಾಂತೇಶ ನಡನಳ್ಳಿ, ಬಿ.ಸಿ.ಮೇಟಿ, ಮಾಂತೇಶ ಯಕ್ಕೇರಿ, ಅಪ್ಪು ನುಗ್ಗಾನಟ್ಟಿ, ಹಂಪನ ಹಡಪದ, ಹನಮಂತ ಹಡಪದ, ರಮೇಶ ವಾನಿ, ನಾಗಪ್ಪ ಹಡಪದ, ಭೀಮಶಿ ಹಡಪದ, ಸಮಾಜ ಬಾಂಧವರು ಉಪಸ್ಥಿತರಿದ್ದರು. ಶಿಕ್ಷಕ ಎ.ವಿ.ನರಗುಂದ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.