ಧಾರವಾಡ:
ನಗರದ ಅಂಜುಮನ್ ಕಾಲೇಜಿನ ಮಹಿಳಾ ಸಬಲೀಕರಣ ಕೋಶ ಹಾಗೂ ಇತಿಹಾಸ ವಿಭಾಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಿತ್ತೂರು ರಾಣಿ ಚೆನ್ನಮ್ಮ 19ನೇ ಶತಮಾನದ ಪೌರಾಣಿಕ ರಾಣಿ ವಿಚಾರ ಸಂಕಿರಣ ಉದ್ಘಾಟಿಸಿದ ಅವರು, ಸ್ತ್ರೀಯರಿಗೆ ಮುಕ್ತ ಅವಕಾಶ ನೀಡಿದಾಗ ಪ್ರತಿಭೆ ಹೊರಬರಲು ಸಾಧ್ಯ. ಅದೇ ರೀತಿ ಮಾನಸಿಕ ಚಂಚಲತೆಯಿಂದ ಮುಕ್ತರಾಗಬೇಕು ಹಾಗೂ ಮಹಿಳೆ ಸ್ವಯಂ ಅರಿವು ಬೆಳೆಸಿಕೊಳ್ಳುವುದು ಅತಿ ಮುಖ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಅಂಜುಮನ್ ಇಸ್ಲಾಂ ಉಪಾಧ್ಯಕ್ಷ ಬಶೀರ್ ಅಹಮದ್ ಜಾಗೀರದಾರ, ರಾಣಿ ಚೆನ್ನಮ್ಮ ಅವರ ಸಾಧನೆಯನ್ನು ಮುಕ್ತ ಕಂಠದಿಂದ ಪ್ರಶಂಶಿಸಿದರು. ಕಾರ್ಯಕ್ರಮದ ಅಂಗವಾಗಿ ಭಿತ್ತಿಚಿತ್ರ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಮಂಡಳಿಯ ಕಾರ್ಯದರ್ಶಿ ಡಾ. ಎಸ್.ಎ. ಸರ್ಗಿರೋ, ಖಜಾಂಚಿ ಮಹಮ್ಮದ್ ರಫಿಕ್ ಶಿರಹಟ್ಟಿ, ಪ್ರಾಚಾರ್ಯ ಡಾ. ಎನ್.ಎಂ. ಮಕಾಂದಾರ ಹಾಗೂ ಡಾ. ಎನ್.ಬಿ. ನಲತವಾಡ, ಪತ್ರಗಾರ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಡಾ. ಮಂಜುಳಾ ಎಲಿಗಾರ ವೇದಿಕೆಯಲ್ಲಿ ಇದ್ದರು.ಖೈರುದ್ದೀನ್ ಶೇಕ್, ಯಾಸಿನ್ ಹಾವೇರಿ ಪೇಟ್, ನಜೀರ್ ಬಲಬಟ್ಟಿ ಇದ್ದರು. ರಾಣಿ ಚೆನ್ನಮ್ಮಳ ಪೌರಾಣಿಕ ಕಿರು ನಾಟಕದ ಮೂಲಕ ಕಾರ್ಯಕ್ರಮ ಪ್ರಾರಂಭಿಸಲಾಯಿತು.