ಪಿ.ಮಹದೇವಪುರದಲ್ಲಿ ನಡೆದ ಅದ್ಧೂರಿ ರಾಮನವಮಿ ಉತ್ಸವದಲ್ಲಿ ರಘುಮೂರ್ತಿ ಹೇಳಿಕೆಕನ್ನಡಪ್ರಭ ವಾರ್ತೆ ಚಳ್ಳಕೆರೆ:
ಎಲ್ಲೆಡೆ ಶ್ರೀರಾಮನ ಭಕ್ತರ ಸಂಖ್ಯೆ ಹೆಚ್ಚುತ್ತಿದೆ, ಪ್ರಸ್ತುತ ಈ ಗ್ರಾಮದಲ್ಲೂ ಈ ಕಾರ್ಯಕ್ರಮಕ್ಕೆ ಸುತ್ತಮುತ್ತಲ ಜನರು ಸೇರಿ ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದೀರ, ಶ್ರೀರಾಮನ ಬಗ್ಗೆ ಅಪಾರವಾದ ಭಕ್ತಿ, ಶ್ರದ್ಧೆಯನ್ನು ನೀವೆಲ್ಲಾ ಹೊಂದಿದ್ದೀರಿ, ಶ್ರೀರಾಮನ ನಾಮದಲ್ಲಿ ವಿಶೇಷ ಶಕ್ತಿ ಅಡಗಿದೆ ಎಂದರು.
ಉತ್ಸವ ಸಮಿತಿಯ ಗೌರವಾಧ್ಯಕ್ಷರಾದ ನಿವೃತ್ತ ಶಿಕ್ಷಕ ಎಂ.ನಾಗರಾಜರಾವ್ ಮಾತನಾಡಿ, ಕಳೆದ ಹತ್ತಾರು ವರ್ಷಗಳಿಂದ ಗ್ರಾಮದಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಎಲ್ಲರ ಮೇಲೆ ವಿಶ್ವಾಸವಿಟ್ಟು ತಪ್ಪದೆ ಆಗಮಿಸುತ್ತಿದ್ದಾರೆ. ಗ್ರಾಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಆಲಿಸಿ ಪರಿಹರಿಸುತ್ತಾರೆ. ಗ್ರಾಮದ ಜನರ ಮೇಲೆ ಅವರಿಗೆ ಅಪಾರವಾದ ವಿಶ್ವಾಸವಿದೆ, ಪ್ರಭುಶ್ರೀ ರಾಮಚಂದ್ರ ಮುಂದಿನ ದಿನಗಳಲ್ಲಿ ಅವರಿಗೆ ರಾಜಕೀಯ ಕ್ಷೇತ್ರದಲ್ಲಿ ಉತ್ತಮ ಸ್ಥಾನ ನೀಡಲಿ ಎಂದು ಶ್ರೀರಾಮನನ್ನು ಪ್ರಾರ್ಥಿಸುವುದಾಗಿ ತಿಳಿಸಿದರು.ಜಿಲ್ಲಾ ಗ್ಯಾರಂಟಿ ಸಮಿತಿ ಸದಸ್ಯ ಚನ್ನಕೇಶವ, ಮಾಜಿ ಜಿಪಂ ಸದಸ್ಯ ಜಯಕುಮಾರ್, ಪರಶುರಾಮಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಟಿ.ಶಶಿಧರ, ತ್ಯಾಗರಾಜ, ಮಹಾಲಿಂಗೇಗೌಡ, ನಿಂಗಪ್ಪ, ರಾಜಶೇಖರ, ನಿವೃತ್ತ ಕಾರ್ಮಿಕ ಇಲಾಖೆ ಜಂಟಿ ನಿರ್ದೇಶಕ ರಮೇಶ್, ಎಂ.ಸತ್ಯನಾರಾಯಣರಾವ್, ವೆಂಕಟೇಶ್, ಶ್ರೀನಿವಾಸ್‌ಮೂರ್ತಿ ಮುಂತಾದವರು ಉಪಸ್ಥಿತರಿದ್ದರು.