ಪಶುವೈದ್ಯರ ಖಾಲಿ ಹುದ್ದೆಗಳ ಹುದ್ದೆ ಭರ್ತಿಗೆ ಕ್ರಮ

KannadaprabhaNewsNetwork |  
Published : Feb 08, 2025, 12:32 AM IST
7ಕೆಜಿಎಫ್‌1 | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಸಾಕಷ್ಟು ಕುಟುಂಬಗಳು ಹೈನುಗಾರಿಕೆಯ ಮೇಲೆ ಅವಲಂಬಿತರಾಗಿದ್ದು, ತಾಲೂಕಿನಲ್ಲಿ ಪಶು ವೈದ್ಯರ ಅಗತ್ಯವಿದ್ದು, ಪಶುಗಳ ಚಿಕಿತ್ಸೆಗಾಗಿ ರೈತರು ಅಲೆದಾಡದೆ ತಾಲೂಕಿನ ಜನರು ಸೌಲಭ್ಯವನ್ನು ಪಡೆದುಕೊಳ್ಳಬೇಕು. ಪಶು ಇಲಾಖೆಯ ಸಹಯೋಗ ಬಹಳ ಅಗತ್ಯವಿರುತ್ತದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಕೆಲಸ ನಿರ್ವಹಿಸಬೇಕು

ಕನ್ನಡಪ್ರಭ ವಾರ್ತೆ ಕೆಜಿಎಫ್‌

ಜಿಲ್ಲೆಯಲ್ಲಿ ಬಹುತೇಕ ರೈತ ಕುಟಂಬಗಳು ಹೈನೋದ್ಯಮವನ್ನು ನಂಬಿಕೊಂಡು ಜೀವನ ನಡೆಸುತ್ತಿವೆ. ಪಶುಗಳ ಆರೋಗ್ಯವು ರೈತರರಿಗೆ ಅತಿಮುಖ್ಯ, ರೈತರು ಆರೋಗ್ಯಕರ ಹಾಲು ಉತ್ಪಾದನೆ ಮಾಡಬೇಕಾದರೆ ಪಶುಗಳ ಆರೋಗ್ಯವನ್ನು ಕಾಪಾಡಬೇಕಾದರೆ ಜಿಲ್ಲೆಯಲ್ಲಿ ೩೬ ಪಶುವೈದ್ಯರ ಹುದ್ದೆಗಳು ಖಾಲಿ ಇದ್ದು, ಸರ್ಕಾರದ ಗಮನಕ್ಕೆ ತಂದು ಜಿಲ್ಲೆಯಲ್ಲಿ ಖಾಲಿ ಇರುವ ಪಶುವೈದ್ಯರನ್ನು ನೇಮಕ ಮಾಡಲಾಗುವುದೆಂದು ಶಾಸಕಿ ರೂಪಕಲಾಶಶಿಧರ್ ತಿಳಿಸಿದರು. ಪಾರಂಡಹಳ್ಳಿಯ ತಾಪಂ ಕಟ್ಟಡದ ಪಕ್ಕದಲ್ಲಿ ೫೦ ಲಕ್ಷ ರು. ವೆಚ್ಚದಲ್ಲಿ ನೂತನ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕರ ನೂತನ ಕಚೇರಿಯ ಗುದ್ದಲಿ ಪೂಜೆಯನ್ನು ನೆರವೇರಿಸಿ ಮಾತನಾಡಿದರು,

ಹಾಲು ಉತ್ಪಾದನೆಯೇ ಜೀವನಾಡಿ

ಪಶು ವೈದ್ಯರು ರೈತರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿ, ಹಸು, ಕರು ಹಾಗೂ ಪಶುಗಳಿಗೆ ಉತ್ತಮ ಚಿಕಿತ್ಸೆ ನೀಡುವ ಮೂಲಕ ರೈತರ ಮನವನ್ನು ಗೆಲ್ಲಬೆಕಂದು ತಿಳಿಸಿದರು. ಪಶುಗಳು ಈ ಭಾಗದ ರೈತರ ಜೀವನಾಡಿಯಾಗಿದ್ದು, ಬಹುತೇಕ ರೈತರು ಹೈನೋದ್ಯಮದಲ್ಲಿ ತೊಡಗಿಸಿಕೊಂಡಿದ್ದು, ಪಶುಗಳ ಆರೋಗ್ಯವನ್ನು ಕಾಪಡುವ ನಿಟ್ಟಿನಲ್ಲಿ ಪಶು ವೈದ್ಯರು ತಾಲೂಕಿನಲ್ಲಿ ಉತ್ತಮ ಕಾರ್ಯನಿರ್ವಹಿಸಬೇಕಿದೆ ಎಂದರು.ತಾಲೂಕಿನ ಕೇಂದ್ರ ಭಾಗವಾದ ಪಾರಂಡಹಳ್ಳಿಯಲ್ಲಿರುವ ತಾಲೂಕು ಪಂಚಾಯತಿ (ಇ.ಒ.) ಕಚೇರಿ ಬಳಿ ನಿರ್ಮಾಣ ಮಾಡಲಾಗುತ್ತಿದ್ದು, ಕಚೇರಿಯನ್ನು ಆರ್.ಐ.ಡಿ.ಎಫ್. -೩೦ ಟ್ರಾಂಚ್ ಯೋಜನೆಯಡಿ ೫೦ ಲಕ್ಷ ರು.ಅನುದಾನದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಪಶುವೈದ್ಯರು ಅನಿವಾರ್ಯ

ಜಿಲ್ಲೆಯಲ್ಲಿ ಸಾಕಷ್ಟು ಕುಟುಂಬಗಳು ಹೈನುಗಾರಿಕೆಯ ಮೇಲೆ ಅವಲಂಬಿತರಾಗಿದ್ದು, ತಾಲೂಕಿನಲ್ಲಿ ಪಶು ವೈದ್ಯರ ಅಗತ್ಯವಿದ್ದು, ಪಶುಗಳ ಚಿಕಿತ್ಸೆಗಾಗಿ ರೈತರು ಅಲೆದಾಡದೆ ತಾಲೂಕಿನ ಜನರು ಸೌಲಭ್ಯವನ್ನು ಪಡೆದುಕೊಳ್ಳಬೇಕು. ಪಶು ಇಲಾಖೆಯ ಸಹಯೋಗ ಬಹಳ ಅಗತ್ಯವಿರುತ್ತದೆ ಈ ನಿಟ್ಟಿನಲ್ಲಿ ತಾವು ಕೆಲಸ ನಿರ್ವಹಿಸಬೇಕೆಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.ರೈತರಿಗೆ ಸರಕಾರದಿಂದ ಸಿಗುವ ಪಶುಇಲಾಖೆಯ ಯೋಜನೆಗಳ ಬಗ್ಗೆ ಕಾಲ ಕಾಲಕ್ಕೆ ಮಾಹಿತಿ ಒದಗಿಸಲು ತಿಳಿಸಿದರು. ವಿಶೇಷವಾಗಿ ಹಸುಗಳಿಗೆ ಏನಾದರೂ ಆರೋಗ್ಯ ಸಮಸ್ಯೆ ಆದಾಗ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಲು ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಶು ನಿರ್ದೇಶಕರಾದ ಡಾ.ರಮೇಶ್, ಉಪ ನಿರ್ದೇಶಕರಾದ ತಿರುಮಲನಾಯಕ್ ತಾ.ಪಂ, ಇ.ಒ ವೆಂಕಟೇಶಪ್ಪ, ನಗರಸಭೆ ಅಧ್ಯಕ್ಷರಾದ ಇಂದಿರಾಗಾಂಧಿ, ಮುಖಂಡರಾದ ಅ.ಮು,ಲಕ್ಷ್ಮೀನಾರಾಯಣ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!