ರಾಜಮಾರ್ಗದಲ್ಲೆ ಮೆರವಣಿಗೆ, ಸವಣೂರಿನ ಸಿಂಪಿಗಲ್ಲಿ ಗಣೇಶ ವಿಸರ್ಜನೆ

KannadaprabhaNewsNetwork |  
Published : Sep 27, 2026, 02:15 AM IST
ಸವಣೂರ ಪಟ್ಟಣದಲ್ಲಿ ಶನಿವಾರ ಗಣೇಶ ವಿಸರ್ಜನೆ ಕೈಗೊಳ್ಳಲಾಯಿತು. ಈ ಸಂದರ್ಭದಲ್ಲಿ ಡಿಜೆ ಹೆಜ್ಜೆ ಹಾಕಿದ ಭಕ್ತರು. | Kannada Prabha

ಸಾರಾಂಶ

ರಾಜಮಾರ್ಗದಲ್ಲಿ ಮೆರವಣಿಗೆ ಮೂಲಕ ತೆರಳಲು ಪಟ್ಟು ಹಿಡಿದು ವಿಸರ್ಜನೆ ಮೆರವಣಿಗೆ ಮೊಟಕುಗೊಳಿಸಿ ಮರುಸ್ಥಾಪಿತ ಸಿಂಪಿಗಲ್ಲಿ ಗಣೇಶ ಸೇರಿದಂತೆ ೧೩ ಗಣೇಶ ಮಂಡಳಿಗಳು ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ಮೂಲಕ ಗಣೇಶ ವಿಸರ್ಜನೆ ಕೈಗೊಂಡರು.

ಸವಣೂರು: ರಾಜಮಾರ್ಗದಲ್ಲಿ ಮೆರವಣಿಗೆ ಮೂಲಕ ತೆರಳಲು ಪಟ್ಟು ಹಿಡಿದು ವಿಸರ್ಜನೆ ಮೆರವಣಿಗೆ ಮೊಟಕುಗೊಳಿಸಿ ಮರುಸ್ಥಾಪಿತ ಸಿಂಪಿಗಲ್ಲಿ ಗಣೇಶ ಸೇರಿದಂತೆ ೧೩ ಗಣೇಶ ಮಂಡಳಿಗಳು ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ಮೂಲಕ ಗಣೇಶ ವಿಸರ್ಜನೆ ಕೈಗೊಂಡರು.ರಾಜ್ಯ ವ್ಯಾಪ್ತಿಯಲ್ಲಿ ಸುದ್ದಿಯಾಗಿದ್ದ ಸಿಂಪಿಗಲ್ಲಿ ಗಣೇಶ ಮಂಡಳಿ ಪದಾಧಿಕಾರಿಗಳು ಹಾಗೂ ಪಟ್ಟಣದ ಹಿಂದು ಸಮಾಜದ ಪ್ರಮುಖರು ಜಿಲ್ಲಾಧಿಕಾರಿಗಳ ಹಾಗೂ ಹಿರಿಯ ಪೋಲಿಸ್ ಅಧಿಕಾರಿಗಳ ಮಾರ್ಗದರ್ಶನದಂತೆ ಪ್ರತಿ ವರ್ಷದಂತೆ ಹಳೆಯ ಮಾರ್ಗವಾಗಿ ಗಣೇಶ ಮೂರ್ತಿಯನ್ನು ಅತ್ಯಂತ ಸರಳ ರೀತಿಯಲ್ಲಿ ಮೆರವಣಿಗೆ ಕೈಗೊಂಡು ಲಕ್ಷ್ಮೇಶ್ವರ ನಾಕಾದ ಹತ್ತಿರದ ದೊಡ್ಡಕೆರೆಯಲ್ಲಿ ವಿಸರ್ಜನೆ ಕೈಗೊಂಡರು. ೫ನೇ ದಿನಕ್ಕೆ ರಾಜಮಾರ್ಗವಾಗಿ ಸಾಗಲು ಅವಕಾಶ ಕಲ್ಪಿಸಲು ಒತ್ತಾಯಿಸಿ ಕೈಗೊಂಡಿದ್ದ ಪ್ರತಿಭಟನೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಆದರೆ, ಗಣೇಶ ವಿಸರ್ಜನೆಯಲ್ಲಿ ಗಣೇಶ ಸ್ಥಾಪನೆಯ ಮಂಡಳಿಯ ೧೫ಕ್ಕೂ ಕಡಿಮೆ ಪದಾಧಿಕಾರಿಗಳು ಪಾಲ್ಗೊಂಡಿದ್ದರು.ಉಳಿದ ೧೪ ಗಣೇಶ ಮಂಡಳಿಯವರು ಪೊಲೀಸ್‌ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳು ಮೌಖಿಕವಾಗಿ ಡಿಜೆ ಹಚ್ಚಲು ಅವಕಾಶ ನೀಡಿದ್ದಾರೆ ಎಂದು ಅಬ್ಬರದ ಡಿಜೆಗೆ ಹೆಜ್ಜೆ ಹಾಕಿ ಮೆರವಣಿಗೆ ಕೈಗೊಂಡರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಲಿಕೆಯಲ್ಲಿ ಸಂಭ್ರಮವಿರಬೇಕು: ಪ್ರೊ. ಕೃಷ್ಣಮೂರ್ತಿ
ಆಶಾ ಕಾರ್ಯಕರ್ತೆಯರ ನಿಸ್ವಾರ್ಥ ಸೇವೆ ಸಮಾಜಕ್ಕೆ ಮಾದರಿ