ಕನ್ನಡಾಂಬೆಯ ರಥ ಮೆರವಣಿಗೆ

KannadaprabhaNewsNetwork |  
Published : Nov 16, 2026, 02:45 AM IST
ಮೆರವಣಿಗೆ ಸಂದರ್ಭ | Kannada Prabha

ಸಾರಾಂಶ

ಕುಶಾಲನಗರ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಆಶ್ರಯದಲ್ಲಿ ಎರಡು ದಿನಗಳ ಕಾಲ ನಡೆದ ಕನ್ನಡ ರಾಜ್ಯೋತ್ಸವ ಅಂಗವಾಗಿ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಕನ್ನಡಾಂಬೆಯ ರಥ ಮೂಲಕ ಮೆರವಣಿಗೆ ನಡೆಯಿತು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಕುಶಾಲನಗರ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಆಶ್ರಯದಲ್ಲಿ ಎರಡು ದಿನಗಳ ಕಾಲ ನಡೆದ ಕನ್ನಡ ರಾಜ್ಯೋತ್ಸವ ಅಂಗವಾಗಿ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಕನ್ನಡಾಂಬೆಯ ರಥ ಮೂಲಕ ಮೆರವಣಿಗೆ ನಡೆಯಿತು.

ಕುಶಾಲನಗರ ಪಟ್ಟಣದ ಕೆ ಎಸ್ ಆರ್ ಟಿ ಸಿ ಆವರಣದಿಂದ ಮಂಗಳೂರಿನ ಕಲ್ಲಡ್ಕದ ಗೊಂಬೆ ಕುಣಿತ ಡಿ ಜೆ ಸಂಗೀತದೊಂದಿಗೆ ರಥ ಬೀದಿ ಮೂಲಕ ಹಳೆಯ ಮಾರುಕಟ್ಟೆ ಮಾರ್ಗದಲ್ಲಿ ತೆರಳಿ ಕುಶಾಲನಗರ ಸಮೀಪದ ಕೊಪ್ಪ ತನಕ ಸಾಗಿತು.

ಸಂಘದ ಅಧ್ಯಕ್ಷರಾದ ಕೃಷ್ಣ ದರ್ಶನ್, ಕಾರ್ಯಾಧ್ಯಕ್ಷರಾದ ಕೆ ಟಿ ಯೋಗೇಶ್, ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್, ಖಜಾಂಚಿ ಮುನೀರ್ ಮತ್ತು ಪದಾಧಿಕಾರಿಗಳು, ನಿರ್ದೇಶಕರು ಇದ್ದರು.

ಸಂಜೆ ವೇದಿಕೆ ಕಾರ್ಯಕ್ರಮ ಬಹುಮಾನ ವಿತರಣೆ ಮತ್ತು ರಸಮಂಜರಿಯೊಂದಿಗೆ ಸಮಾರೋಪ ಸಮಾರಂಭ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯುವಕರಲ್ಲಿ ದೇಶಪ್ರೇಮ, ಸಾಮಾಜಿಕ ಹೊಣೆ ಮೇಳೈಸಲಿ
ಹಿಂದೂ ಅಲ್ಪ ಸಂಖ್ಯಾತರಾದರೆ ಅಪಾಯ ಕಟ್ಟಿಟ್ಟ ಬುತ್ತಿ: ಕೃಷ್ಣಾನಂದ ಕಾಮತ್‌