ಶರನ್ನವರಾತ್ರಿ ನಿಮಿತ್ತ ದೇವಿ ವಜ್ರಾಭರಣಗಳ ಮೆರವಣಿಗೆ

KannadaprabhaNewsNetwork |  
Published : Oct 16, 2026, 02:30 AM IST
ಶರನ್ನವರಾತ್ರಿ ನಿಮಿತ್ತ ಹಿರೇಕೆರೂರಿನ ದುರ್ಗಾದೇವಿಯ ವಜ್ರಾಭರಣಗಳನ್ನು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ದೇವಸ್ಥಾನ ತರಲಾಯಿತು. | Kannada Prabha

ಸಾರಾಂಶ

ಶರನ್ನವರಾತ್ರಿ ನಿಮಿತ್ತ ಇಲ್ಲಿಯ ದುರ್ಗಾದೇವಿ ದೇವಸ್ಥಾನದ ದೇವಿಯ ವಜ್ರಾಭರಣಗಳನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

ಹಿರೇಕೆರೂರು: ಶರನ್ನವರಾತ್ರಿ ನಿಮಿತ್ತ ಇಲ್ಲಿಯ ದುರ್ಗಾದೇವಿ ದೇವಸ್ಥಾನದ ದೇವಿಯ ವಜ್ರಾಭರಣಗಳನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

ಪಟ್ಟಣದ ಸ್ಟೇಟ್ ಬ್ಯಾಂಕಿನಿಂದ ವಿವಿಧ ವಾದ್ಯ-ಮೇಳಗಳೊಂದಿಗೆ ದೇವಸ್ಥಾನಕ್ಕೆ ತರಲಾಯಿತು. ಆನಂತರ ಅರ್ಚಕರಾದ ನಿರಂಜನ ಬಡಿಗೇರ, ಲಿಂಗಾಚಾರಿ ಮಾಯಾಚಾರಿ ಮತ್ತು ಸಂಗಡಿಗರಿಂದ ದೇವಿಗೆ ಆಭರಣ ಅಲಂಕಾರ ಪೂಜೆ ಮಾಡಿ, ಮಹಾಮಂಗಳಾರತಿ ನೆರವೇರಿಸಲಾಯಿತು.

ದುರ್ಗಾದೇವಿ ದೇವಸ್ಥಾನದ ಟ್ರಸ್ಟ್ ಕಮಿಟಿ ಅಧ್ಯಕ್ಷ ಜಗದೀಶ ತಂಬಾಕದ, ಟಿಎಪಿಸಿಎಂಎಸ್ ಅಧ್ಯಕ್ಷ ಎಸ್.ಎಸ್. ಪಾಟೀಲ, ಮಹೇಂದ್ರ ಬಡಳ್ಳಿ, ಮಂಜುನಾಥ್ ತಂಬಾಕದ, ರಮೇಶ್ ಕುಂಕುಮಗಾರ, ಪ್ರಕಾಶ್ ಹಿತ್ಲಳ್ಳಿ, ರುದ್ರೇಶ್ ಬೇತೂರು, ಜಗದೀಶ ದೊಡ್ಡಗೌಡ್ರ, ಸತೀಶ ನಾಡಿಗೇರ, ಸತೀಶ ತಂಬಾಕದ, ಸಿದ್ದು ತಂಬಾಕದ, ಹರೀಶ್ ಕಲಾಲ್, ಬಾಲು ಜನ್ನು, ಮೈಲಾರಪ್ಪ ದಿಂದೇರ, ತುಕಾರಾಮ ರಾಯ್ಕರ್, ಇಂದೂಧರ್ ಹಳಕಟ್ಟಿ, ಬೀರೇಶ ಹಾರ್ನಳ್ಳಿ, ಪಾಂಡುರಂಗ ಚೌಧರಿ, ರಾಜು ಖಾಂಡ್ಕೆ, ಬಸವರಾಜ ಕಾಲ್ವೀಹಳ್ಳಿ, ಮಾಲತೇಶ ಬೆಟಕೇರೂರು, ಗಣಪತಿ ನಾಡಿಗೇರ, ಮಹಾದೇವಪ್ಪ ಚಾಪೇರ, ಶಂಭು ಹಂಸಭಾವಿ, ಆಂಜನೇಯ ಹೊಸಕಟ್ಟೆ ಹಾಗೂ ಭಕ್ತರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶ್ರೀದೇವಿ ಪುರಾಣದ ತತ್ವ ಅಳವಡಿಕೆ ಬದುಕಿಗೆ ದಾರಿ
ಬರದಲ್ಲಿ ವರವಾದ ವಿಬಿ ಜಿ ರಾಮ್‌ ಜಿ ಯೋಜನೆ