ಬೇಲೂರಲ್ಲಿ ಗಾಣಿಗರ ಸಂಘದಿಂದ ಗ್ರಾಮ ದೇವತೆಗಳ ಮೆರವಣಿಗೆ

KannadaprabhaNewsNetwork | Published : Dec 31, 2024 1:00 AM

ಸಾರಾಂಶ

ಗಾಣಿಗರ ಸಂಘದಿಂದ ಗ್ರಾಮ ದೇವತೆಗಳ ಮೆರವಣಿಗೆ ಹಾಗೂ ಉತ್ಸವ ಕಾರ್ಯಕ್ರಮಗಳನ್ನು ಸಾವಿರಾರು ಭಕ್ತರ ನಡುವೆ ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು. ಗಾಣಿಗರ ಬೀದಿಯಲ್ಲಿ ನಿರ್ಮಾಣ ಮಾಡಿದ್ದ ಬೃಹತ್ ವೇದಿಕೆ ಮೇಲೆ ಗುರುವಾರದಿಂದ ಆರಂಭವಾದ ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಸಂಜೆ ೭ ಗಂಟೆಯಿಂದ ಬೀದಿಯಲ್ಲಿ ದೇವತೆಗಳ ಮೆರವಣಿಗೆ ನಡೆಸಲಾಯಿತು.ಈ ವೇಳೆ ವಿದ್ಯುತ್ ದೀಪ, ಹಸಿರು ತೋರಣಗಳಿಂದ ಬೀದಿಯನ್ನು ಸಿಂಗರಿಸಲಾಗಿದ್ದು, ಬರುವ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಬೇಲೂರು

ತಾಲೂಕು ಗಾಣಿಗರ ಸಂಘದಿಂದ ಗ್ರಾಮ ದೇವತೆಗಳ ಮೆರವಣಿಗೆ ಹಾಗೂ ಉತ್ಸವ ಕಾರ್ಯಕ್ರಮಗಳನ್ನು ಸಾವಿರಾರು ಭಕ್ತರ ನಡುವೆ ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು.ಪಟ್ಟಣದ ಗಾಣಿಗರ ಬೀದಿಯಲ್ಲಿ ಮೂರನೇ ವರ್ಷದ ಗ್ರಾಮ ದೇವತೆಗಳ ಉತ್ಸವ ಕಾರ್ಯಕ್ರಮದ ಅಂಗವಾಗಿ ಮೂರು ದಿನಗಳ ಕಾಲ ಹಮ್ಮಿಕೊಂಡಿದ್ದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಗ್ರಾಮ ದೇವತೆಗಳಾದ ದುರ್ಗಮ್ಮ, ಅಂತರಘಟ್ಟಮ್ಮ ಹಾಗೂ ಮಿಡಿಸಲಮ್ಮ ದೇವತೆಗಳ ಮೆರವಣಿಗೆ ಹಾಗೂ ಉತ್ಸವ ನಡೆಯಿತು.ಗಾಣಿಗರ ಬೀದಿಯಲ್ಲಿ ನಿರ್ಮಾಣ ಮಾಡಿದ್ದ ಬೃಹತ್ ವೇದಿಕೆ ಮೇಲೆ ಗುರುವಾರದಿಂದ ಆರಂಭವಾದ ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಸಂಜೆ ೭ ಗಂಟೆಯಿಂದ ಬೀದಿಯಲ್ಲಿ ದೇವತೆಗಳ ಮೆರವಣಿಗೆ ನಡೆಸಲಾಯಿತು.ಈ ವೇಳೆ ವಿದ್ಯುತ್ ದೀಪ, ಹಸಿರು ತೋರಣಗಳಿಂದ ಬೀದಿಯನ್ನು ಸಿಂಗರಿಸಲಾಗಿದ್ದು, ಬರುವ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. ಈ ವೇಳೆ ಗಾಣಿಗರ ಸಂಘದ ಅಧ್ಯಕ್ಷ ಬಿ.ಎಲ್. ನಾಗರಾಜ್ ಮಾತನಾಡಿ, ನಮ್ಮ ಹಿರಿಯರು ಗ್ರಾಮದೇವತೆಗಳನ್ನು ಕರೆಸಿ ಇಂತಹ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದರು. ಅದನ್ನು ಇಂದಿನ ಯುವಕರು ಮುಂದುವರೆಸಿಕೊಂಡು ಹೋಗುತ್ತಿರುವುದು ಸಂತೋಷದಾಯಕವಾಗಿದೆ. ನಾಡಿನ ದೇವತೆಗಳು ಜನಾಂಗದ ಏಳಿಗೆ ಮತ್ತು ನಾಡಿನ ಅಭಿವೃದ್ಧಿಗೆ ಆಶೀರ್ವದಿಸಲಿ ಎಂದು ದೇವತೆಗಳಲ್ಲಿ ಪ್ರಾರ್ಥಿಸಿದ್ದೇವೆ ಎಂದರು.

ಸಮಾರಂಭದಲ್ಲಿ ಶಾಸಕ ಎಚ್.ಕೆ.ಸುರೇಶ್, ಮಾಜಿ ಸಚಿವ ಬಿ.ಶಿವರಾಂ, ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ್, ಗಾಣಿಗರ ಸಂಘದ ಖಜಾಂಚಿ ಬಿ.ಎಸ್ ಮಂಜುನಾಥ್, ಕಾರ್ಯದರ್ಶಿ ಎನ್.ಅನಂತು, ಉಪಾಧ್ಯಕ್ಷ ಚಂದ್ರು, ಅಶೋಕ್, ಗಾಣಿಗರ ಸಂಘದ ರಾಜ್ಯಧ್ಯಕ್ಷ ನರಸಿಂಹಯ್ಯ, ಉಪಾಧ್ಯಕ್ಷ ಗಂಗರಾಜು, ಪುರಸಭೆ ಸದಸ್ಯರಾದ ಬಿ.ಎಲ್.ಪ್ರಭಾಕರ್, ಆಶಾ, ತಾ. ಯುವ ಘಟಕದದ ಪಾದಧಿಕಾರಿಗಳಾದ ಶ್ರೀಧರ್‌, ಬಿ.ಎಸ್. ಕೇಶವ, ಸಂಜು, ಮಂಜುನಾಥ್, ಬಿ.ಎಂ.ಜಗದೀಶ್, ಮಹೇಶ, ಬಿ.ಕೆ.ಯಶ್ವಂತ್, ರಾಘವೇಂದ್ರ, ಅರ್ಚಕರಾದ ಚಂದ್ರು, ಕುಮಾರ್‌, ಪದ್ಮ, ಸುರೇಶ್ ಇದ್ದರು.

Share this article