ಲಕ್ಷ್ಮೇಶ್ವರ ಪಟ್ಟಣದ ಚಂದನ ಶಾಲೆಯ ಮಕ್ಕಳು ಹಾಗೂ ಸಂಸ್ಥೆಯ ಆಡಳಿತ ಮಂಡಳಿಯು ಚಂದನ ರತ್ನ ಪುರಸ್ಕಾರ ನೀಡಿರುವುದು ಹೆಚ್ಚು ಸಂತೋಷ ತಂದಿದೆ. ಚಂದನ ಶಾಲೆಯ ಮಕ್ಕಳು ದೇಶದ ಉನ್ನತ ವಿಜ್ಞಾನಿಗಳು ಆಗಬೇಕು ಎನ್ನುವುದು ನಮ್ಮ ಕನಸಾಗಿದೆ
ಲಕ್ಷ್ಮೇಶ್ವರ: ಪಟ್ಟಣದ ಚಂದನ ಶಾಲೆ ನೀಡುವ ಚಂದನ ರತ್ನ ಪುರಸ್ಕಾರವನ್ನು ಈ ಬಾರಿ ಭಾರತ ರತ್ನ ಪ್ರೋ, ಸಿಎನ್ಆರ್ ರಾವ್ ಅವರಿಗೆ ಬೆಂಗಳೂರಿನಲ್ಲಿ ಬುಧವಾರ ನೀಡಿ ಗೌರವಿಸಲಾಯಿತು.
ಈ ವೇಳೆ ಚಂದನ ಶಾಲೆಯ ಅಧ್ಯಕ್ಷ ಟಿ. ಈಶ್ವರ ಮಾತನಾಡಿ, ಭಾರತ ರತ್ನ ಪ್ರೋ. ಸಿಎನ್ಆರ್ ರಾವ್ ಅವರಿಗೆ ನಮ್ಮ ಸಂಸ್ಥೆ ಕೊಡ ಮಾಡುವ ಚಂದನ ರತ್ನ ಪುರಸ್ಕಾರ ಕೊಡಮಾಡುವ ಮೂಲಕ ಸಂಸ್ಥೆಯು ಸಾರ್ಥಕ ಕಾರ್ಯ ಮಾಡುತ್ತಿರುವುದು ನಮಗೆಲ್ಲ ಹೆಮ್ಮೆಯ ಸಂಗತಿಯಾಗಿದೆ. ಭಾರತದ ಖ್ಯಾತ ವಿಜ್ಞಾನಿ ಪ್ರೋ. ಸಿಎನ್ಆರ್ ರಾವ್ ಅವರಿಗೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಹಲವು ಪ್ರತಿಷ್ಟಿತ ಸಂಸ್ಥೆಗಳು ಹಲವು ಉನ್ನತ ಪುರಸ್ಕಾರ ನೀಡಿ ಗೌರವಿಸಿದ್ದು, ಅದರ ಜತೆಯಲ್ಲಿ ನಮ್ಮ ಸಂಸ್ಥೆಯ ಮೇಲೆ ಅವರಿಗಿದ್ದ ಪ್ರೀತಿ ಮತ್ತು ಅಭಿಮಾನಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಹೇಳಿದರು.
ಈ ವೇಳೆ ಭಾರತ ರತ್ನ ಸಿಎನ್ಆರ್ ರಾವ್ ಮಾತನಾಡಿ, ಲಕ್ಷ್ಮೇಶ್ವರ ಪಟ್ಟಣದ ಚಂದನ ಶಾಲೆಯ ಮಕ್ಕಳು ಹಾಗೂ ಸಂಸ್ಥೆಯ ಆಡಳಿತ ಮಂಡಳಿಯು ಚಂದನ ರತ್ನ ಪುರಸ್ಕಾರ ನೀಡಿರುವುದು ಹೆಚ್ಚು ಸಂತೋಷ ತಂದಿದೆ. ಚಂದನ ಶಾಲೆಯ ಮಕ್ಕಳು ದೇಶದ ಉನ್ನತ ವಿಜ್ಞಾನಿಗಳು ಆಗಬೇಕು ಎನ್ನುವುದು ನಮ್ಮ ಕನಸಾಗಿದೆ ಎಂದು ಹೇಳಿದರು.
ಪ್ರೋ. ಇಂದುಮತಿ ರಾವ್, ಇಸ್ರೋ ಸಂಸ್ಥೆಯ ಮಾಜಿ ಅಧ್ಯಕ್ಷ ಎ.ಎಸ್. ಕಿರಣಕುಮಾರ, ಇಸ್ರೋ ಅಧ್ಯಕ್ಷ ಜಿ.ಯು. ಕುಲಕರ್ಣಿ, ಪ್ರೋ. ಕೆ,ಎನ್,ಗಣೇಶ, ಸುಚಿತ್ರಾ, ಗಿರಿಜಾ ಈಶ್ವರ ಹಾಗೂ ವಿದ್ಯಾರ್ಥಿಗಳು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.