ಕನ್ನಡ ಸೇವೆಯ ಸಾರ್ಥಕ ಯೋಧ.ಪ್ರೊ.ಹನಮಂತಗೌಡ್ರ.

KannadaprabhaNewsNetwork |  
Published : Oct 03, 2026, 02:30 AM IST
(1ಎನ್.ಆರ್.ಡಿ3 ಸೇವಾ ನಿವೃತ್ತಿ ಹೊಂದಿದೆ ಡಾ. ಎಂ.ಪಿ.ಕುಲಕರ್ಣಿವರಗೆ ಶಾಂತಲಿಂಗ ಶ್ರೀಗಳು ಸನ್ಮಾನ ಮಾಡಿ ಗೌರವಿಸಿದರು.)  | Kannada Prabha

ಸಾರಾಂಶ

ಕನ್ನಡ ಭಾಷೆ ಮತ್ತು ಸಾಹಿತ್ಯದ ಮೇಲೆ ಅಪಾರ ಅಭಿಮಾನ ಹೊಂದಿರುವ ಕುಲಕರ್ಣಿ ಅವರು ತಮ್ಮ ಭೋದನಾ ಸೇವೆಯಲ್ಲಿ ಅನೇಕ ವಿದ್ಯಾರ್ಥಿಗಳ ಬದುಕಿಗೆ ದಾರಿ ದೀಪ

ನರಗುಂದ: ಉಪನ್ಯಾಸಕ ವೃತ್ತಿ ಕೇವಲ ಉದ್ಯೋಗವಲ್ಲ, ಅದು ಸಮಾಜ ನಿರ್ಮಾನದ ಮಹತ್ವದ ಜವಾಬ್ದಾರಿ. ಶಿಸ್ತು, ಸಮಯ ಪ್ರಜ್ಞೆ, ಸರಳತೆ ಹಾಗೂ ವಿದ್ಯಾರ್ಥಿಗಳ ಮೇಲಿನ ಕಾಳಜಿಯನ್ನು ತಮ್ಮ ವೃತ್ತಿಜೀವನದ ಉಸಿರಾಗಿಸಿಕೊಂಡು ಸೇವೆ ಸಲ್ಲಿಸಿದ ಡಾ. ಎಂ. ಪಿ. ಕುಲಕರ್ಣಿವರು ಇಂದು ನಿವೃತ್ತರಾಗುತ್ತಿರುವುದು ಭಾವನಾತ್ಮಕ ಕ್ಷಣವಾಗಿದೆ ಎಂದು ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪ್ರೊ. ಬಿ.ಸಿ.ಹನಮಂತಗೌಡ್ರ ಹೇಳಿದರು.

ಅವರು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಡಾ. ಎಂ.ಪಿ.ಕುಲಕರ್ಣಿವರ ಸೇವಾ ನಿವೃತ್ತಿ ಸಮಾರಂಭದಲ್ಲಿ ಮಾತನಾಡಿದ ಕುಲಕರ್ಣಿವರು ಶಿಸ್ತಿನ ಸಿಪಾಯಂತೆ ತಮ್ಮ ಕರ್ತವ್ಯವನ್ನು ನಿರ್ವಹಿಸಿದವರು. ವಿದ್ಯಾರ್ಥಿಗಳಿಗೆ ಪಾಠ ಭೋಧಿಸುವುದರ ಜೊತೆಗೆ ಅವರಲ್ಲಿ ಸಂಸ್ಕಾರ ಮತ್ತು ಕನ್ನಡಾಭಿಮಾನ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಸ್ಮರಿಸಿದರು.

ಕನ್ನಡ ಭಾಷೆ ಮತ್ತು ಸಾಹಿತ್ಯದ ಮೇಲೆ ಅಪಾರ ಅಭಿಮಾನ ಹೊಂದಿರುವ ಕುಲಕರ್ಣಿ ಅವರು ತಮ್ಮ ಭೋದನಾ ಸೇವೆಯಲ್ಲಿ ಅನೇಕ ವಿದ್ಯಾರ್ಥಿಗಳ ಬದುಕಿಗೆ ದಾರಿ ದೀಪವಾಗಿದ್ದಾರೆ, ಸರಳ ವೆಕ್ತಿತ್ವ, ನೇರ ನಡೆ-ನುಡಿ, ಕರ್ತವ್ಯ ನಿಷ್ಠೆ ಮತ್ತು ಸಹೋದ್ಯೋಗಿಗಳೊಂದಿಗೆ ಆತ್ಮೀಯತೆ ಅವರ ವಿಶೇಷ ಗುಣಗಳಾಗಿವೆ ಉಪನ್ಯಾಸಕರಾಗಿ ತಮ್ಮ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುವ ಮೊಲಕ ಶಿಕ್ಷಣ ಕ್ಷೇತ್ದಲ್ಲಿ ತಮ್ಮದೆಯಾದ ಛಾಪು ಮೂಡಿಸಿದ್ದಾರೆ ಎಂದರು.

ನಿವೃತ್ತಿಯಾಗುತ್ತಿರುವುದು ಕೇವಲ ಸರ್ಕಾರಿ ಸೇವೆಯಿಂದ, ಆದರೆ ಉಪನ್ಯಾಸಕರಾಗಿ ಗಳಿಸಿರುವ ಗೌರವ, ವಿದ್ಯಾರ್ಥಿಗಳ ಪ್ರೀತಿ ಮತ್ತು ಕನ್ನಡ ಸೇವೆಯ ಬದ್ದತೆಯಿಂದ ಅವರಿಗೆ ಎಂದಿಗೂ ನಿವೃತ್ತಿ ಇಲ್ಲ ಎಂದು ತಿಳಿಸಿದರು.

ಕಾಲೇಜು ಅಭಿವೃದ್ಧಿ ಮಂಡಳಿಯ ಉಪಾಧ್ಯಕ್ಷರಾದ ಎಸ್.ಆರ್.ಪಾಟೀಲ ಮಾತನಾಡಿ ಡಾ.ಕುಲಕರ್ಣಿವರು ಸರಳ ಶರಣ ಜೀವಿ ಎಂದು ಬಣ್ಣಿಸಿದರು.

ಕಾರ್ಯಕ್ರಮ ದ ದಿವ್ಯ ಸಾನಿಧ್ಯ ವಹಿಸಿದ್ದ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು ಮಾತನಾಡಿ ಸುದೀರ್ಘ ಸೇವಾ ಅವದಿಯಲ್ಲಿ ಸಹೋದ್ಯೋಗಿಗಳು ಹಾಗೂ ಕನ್ನಡಾಭಿಮಾನಿಗಳೊಂದಿಗೆ ಉತ್ತಮ ಬಾಂದವ್ಯ ಬೆಳೆಸಿಕೊಂಡಿರುವ ಡಾ. ಎಂ. ಪಿ. ಕುಲಕರ್ಣಿ ಅವರ ನಿವೃತ್ತಿ ಜೀವನ ಸುಖ ಶಾಂತಿ ಆರೋಗ್ಯ ಮತ್ತು ಸಾರ್ಥಕಥೆಯಿಂದ ಕೂಡಿರಲಿ ಎಂದು ಶುಭಹಾರೖಸಿದರು.

ವೇದಿಕೆ ಮೇಲೆ ಪ್ರಾಚಾರ್ಯರಾದ ಸಿ.ಎಸ್.ಸುಳ್ಳದ, ಎಸ್.ಆರ್.ಪಾಟೀಲ, ಗುರಪ್ಪ ಆದಪ್ಪನವರ, ಕೇಂದ್ರ ಕಳಸಾ ಬಂಡೂರಿ ಹೋರಾಟ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ, ಭೀಮಪ್ಪ ಕೊರಿಗನ್ನವರ, ಎಸ್. ಬಿ. ಭಜಂತ್ರಿ, ಸುಜಾತಾ ಮೆಳವಂಕಿ, ಆನಂದ ಹವಾಲ್ದಾರ, ಸುಧೀರ ಸಜ್ಜನ, ಕಲಕರ್ಣಿ ದಂಪತಿಗಳು ವೇದಿಕೆ ಮೇಲೆ ಉಪಸ್ಥಿತರಿದ್ದರು.

ಎಸ್.ವಿ. ದಂಡನಾಯ್ಕರ್ ಸ್ವಾಗತಿಸಿದರು, ಶರಣು ಪೂಜಾರ ಹಾಗೂ ರಮೇಶ ಐನಾಪೂರ ಕಾರ್ಯಕ್ರಮ ನಿರೂಪಿಸಿದರು, ಚನ್ನು ನೀಲಗುಂದ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮುದ್ರದ ಮೀನು ಹಳ್ಳದಲ್ಲಿ ಬೇಟೆ ಕೇಣಿಯಲ್ಲಿ ಕೊಕ್ಕರಾ ಮೀನುಗಳ ಸುಗ್ಗಿ
ಯಲ್ಲಾಪುರದ 5 ಆಯುಷ್ಮಾನ್ ಆರೋಗ್ಯ ಕೇಂದ್ರ ಮುಚ್ಚಲು ಆದೇಶ