ಕನ್ನಡಪ್ರಭ ವಾರ್ತೆ ಮೈಸೂರು
ವಿಜಯನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಇನ್ಸ್ಪೈರ್‌ಸಂಸ್ಥೆಯು ಭಾನುವಾರ ಆಯೋಜಿಸಿದ್ದ ಎಸ್. ಚಿಕ್ಕಸಾವಕ ಅವರ ಸಂವಿಧಾನ ಸಭೆ ವರ್ಸಸ್ ಅಂಬೇಡ್ಕರ್ ಕುರಿತ ನಾಲ್ಕು ಸಂಪುಟಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ದಲಿತರಲ್ಲಿ ಅನೇಕ ಸಮರ್ಥ ನಾಯಕರು ಇದ್ದಾರೆ. ಆದರೂ ಅವರು ಮುಖ್ಯಮಂತ್ರಿ ಆಗಲು ಅವಕಾಶ ದೊರಕಿಲ್ಲ. ಸ್ವಾಮಿ ವಿವೇಕಾನಂದರು ಮುಂದೆ ಆಳ್ವಿಕೆ ನಡೆಸುವುದೇ ಶೂದ್ರರು ಎಂದಿದ್ದರು. ಅದರಂತೆ ಎಲ್ಲೆಡೆ ಬ್ರಾಹ್ಮಣೇತರರು ಆಳ್ವಿಕೆ ನಡೆಸಿದ್ದಾರೆ. ಆದರೆ ಕರ್ನಾಟಕದಲ್ಲಿ ಅದು ಸಾಧ್ಯವಾಗಿಲ್ಲ ಎಂದರು.ದೇಶದಲ್ಲಿ ನಾಲ್ಕು ವರ್ಣಗಳು ಪ್ರಸ್ತುತ ಅಸ್ತಿತ್ವದಲ್ಲಿ ಇಲ್ಲ. ಪ್ರಸ್ತುತ ಇರುವುದು ಬ್ರಾಹ್ಮಣ ಹಾಗೂ ಶೂದ್ರರು ಮಾತ್ರ. ಮನುಷ್ಯರೆಲ್ಲರೂ ಒಂದೇ ಎಂದು ಪ್ರಪಂಚದಲ್ಲಿ ಪ್ರಥಮ ಬಾರಿಗೆ ಹೇಳಿದವರು ಗೌತಮ ಬುದ್ಧ. ಅದನ್ನು ಆಚರಣೆಗೆ ತಂದವರು ಡಾ.ಬಿ.ಆರ್. ಅಂಬೇಡ್ಕರ್. ಅವರು ಕೇವಲ ದಲಿತರ ಪರವಾಗಿ ಇರದೆ, ಸಂವಿಧಾನದ ಮೂಲಕ ಎಲ್ಲರಿಗೂ ನ್ಯಾಯ ಕೊಡಿಸಿದ್ದಾರೆ ಎಂದರು.
ಲೇಖಕ ಎಸ್. ಚಿಕ್ಕಸಾವಕ್ಕ ಅವರು ತಮ್ಮ ಕೃತಿಯಲ್ಲಿ ಹೇಳಿರುವಂತೆ ನಾನು ಗಾಂಧಿ ಅವರನ್ನು ಒಪ್ಪಿ, ಗೌರವಿಸಿದರೂ ಅವರ ಎಲ್ಲಾ ವಿಚಾರಧಾರೆಗಳನ್ನು ಒಪ್ಪುವುದಿಲ್ಲ. ಗಾಂಧೀಜಿಗಿಂತ ಅಂಬೇಡ್ಕರ್ ದೊಡ್ಡವರು. ಸ್ವಾತಂತ್ರ್ಯ ಹೋರಾಟಕ್ಕೆ ಗಾಂಧೀಜಿ ಕೊಡುಗೆ ಅಪಾರವಾದದ್ದು. ಆದರೆ ಅವರು ಸನಾತನ ಧರ್ಮವನ್ನು ಅನುಸರಿಸುತ್ತಿದ್ದರು. ರಾಮ ಹಾಗೂ ಭಗವದ್ಗೀತೆಯನ್ನು ಗಾಂಧಿ ಒಪ್ಪಿಕೊಂಡಿದ್ದರು. ಹೀಗಾಗಿ ಅವರ ಎಲ್ಲಾ ವಿಚಾರಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.ವೇದಿಕೆಯಲ್ಲಿ ಲೇಖಕ ಎಸ್. ಚಿಕ್ಕಸಾವಕ್ಕ, ವಕೀಲ ಬಿ.ಆರ್. ರಂಗಸ್ವಾಮಿ, ರಂಗಕರ್ಮಿ ಸಿ. ಬಸವಲಿಂಗಯ್ಯ, ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಮಾಜಿ ಮೇಯರ್ ಎಂ. ಪುರುಷೋತ್ತಮ್, ಪತ್ರಕರ್ತ ಡಾ.ಆರ್. ಮೋಹನ್‌ರಾಜ್, ಸಾಹಿತಿ ಹೊರೆಯಾಲ ದೊರೆಸ್ವಾಮಿ ಇದ್ದರು.