ರೈತರ ಸಹಕಾರದಿಂದ ಸತತ 12 ವರ್ಷಗಳ ಕಾಲ ಲಾಭ

KannadaprabhaNewsNetwork |  
Published : Sep 21, 2024, 01:47 AM IST
ಇಂಡಿ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಸಭಾ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಸಂಘದ 70ನೇ ವಾರ್ಷಿಕ ಸರ್ವ ಸಾಧಾರಣ ಸಭೆಯನ್ನು ಅಧ್ಯಕ್ಷ ಬಿ.ಬಿ.ಗುಡ್ಡದ ಉದ್ಘಾಟಿಸಿದರು. | Kannada Prabha

ಸಾರಾಂಶ

ಇಂಡಿ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ ಸತತ 12 ವರ್ಷ ಗಳ ಕಾಲ ಲಾಭದಲ್ಲಿದೆ. ಇದಕ್ಕೆಲ್ಲ ರೈತರ ಸಹಕಾರವೇ ಕಾರಣ ಎಂದು ತಾಲೂಕು ಒಕ್ಕಲಿತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಅಧ್ಯಕ್ಷ ಬಿ.ಬಿ.ಗುಡ್ಡದ ಹೇಳಿದರು.

ಕನ್ನಡಪ್ರಭ ವಾರ್ತೆ ಇಂಡಿ

ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ ಸತತ 12 ವರ್ಷ ಗಳ ಕಾಲ ಲಾಭದಲ್ಲಿದೆ. ಇದಕ್ಕೆಲ್ಲ ರೈತರ ಸಹಕಾರವೇ ಕಾರಣ ಎಂದು ತಾಲೂಕು ಒಕ್ಕಲಿತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಅಧ್ಯಕ್ಷ ಬಿ.ಬಿ.ಗುಡ್ಡದ ಹೇಳಿದರು.

ಪಟ್ಟಣದ ಒಕ್ಕಲಿತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಸಭಾ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ 70ನೇ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಹಕಾರಿ ಸಂಘದ ಮೂಲಕ ರೈತರಿಗೆ ರಸಗೊಬ್ಬರ ಮಾರಾಟಕ್ಕೆ ಸರ್ಕಾರದಿಂದ ಅನುಮತಿ ಪಡೆದುಕೊಂಡು ಮಾರಾಟ ಮಾಡಲಾಗುತ್ತದೆ. ತಾಲೂಕಿನ ರೈತರು ಇದರ ಸದುಪಯೋಗ ಮಾಡಿಕೊಳ್ಳಬೇಕು. ಇನ್ನು ಮುಂದೆ ರಸಗೊಬ್ಬರದ ಜೊತೆಗೆ ಕ್ರಿಮಿನಾಶಕ ಔಷಧಿ ಕೂಡಾ ಮಾರಾಟ ಮಾಡಲು ಅನುಮತಿ ಪಡೆದುಕೊಳ್ಳಲಾಗುವುದು ಎಂದು ತಿಳಿಸಿದರು.ರೈತ ಕಲ್ಲಪ್ಪ ಗಂಟಿಯವರ ರೈತರ ಷೇರ್‌ ಹಣಕ್ಕೆ ಲಾಭಾಂಶ ಹಂಚಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅಧ್ಯಕ್ಷರು, ರೈತರ ಷೇರ್‌ ಹಣದ ಲಾಭಾಂಶ ಸಂಘದ ಕಚೇರಿ ಕಟ್ಟಡಕ್ಕೆ ವಿನಿಯೋಗಿಸಲಾಗಿದೆ ಎಂದರು.ರೈತರಾದ ಅಣ್ಣಪ್ಪ ಬಿದರಕೋಟಿ, ಭೀಮರಾಯಗೌಡ ಬಿರಾದಾರ ಮಾತನಾಡಿ, ಸಂಘದ ಅಡಿಯಲ್ಲಿ ಪೆಟ್ರೋಲ್ ಪಂಪ್ ಮತ್ತು ಮಂಗಲ ಕಾರ್ಯಾಲಯ ನಿರ್ಮಿಸಬೇಕೆಂದು ಮಾಡಿಕೊಂಡ ಮನವಿಗೆ ಸ್ಪಂದಿಸಿದ ಅಧ್ಯಕ್ಷರು ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಲಾಭದಲ್ಲಿದ್ದ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘಗಳಿಗೆ ಕೇಂದ್ರ ಸರ್ಕಾರ ಪೆಟ್ರೋಲ್ ಪಂಪ, ಇಥಿನಾಲ್ ಮತ್ತು ಕೋಲ್ಡ್ ಸ್ಟೋರೇಜ್‌ ಮಳಿಗೆಗಳಿಗೆ ಅನುದಾನದ ಜೊತೆಗೆ ಅನುಮತಿ ನೀಡಲಿವೆ. ಇದು ಜಾರಿಯಲ್ಲಿ ಬಂದರೆ ಜಿಲ್ಲೆಯಲ್ಲಿಯೇ ನಮ್ಮ ಸಂಘ ಅತೀ ಲಾಭದಲ್ಲಿದೆ. ನಮ್ಮ ಸಂಘದ ಅಡಿಯಲ್ಲಿ 4 ಎಕರೆ ಜಮೀನಿದೆ. ನಮಗೇ ಮೊದಲನೇಯ ಆದ್ಯತೆ ದೊರೆಯಲಿದೆ. ಕಾರಣ ಸ್ವಲ್ಪ ದಿವಸ ಕಾದು ನೋಡೋಣ ಎಂದರು.ನಮ್ಮ ಸಹಕಾರಿ ಸಂಘದ ಮೂಲಕ ತಾಲೂಕಿನ ಎಲ್ಲ ರೈತ ಸಹಕಾರಿ ಸಂಘಗಳಿಗೆ ತಲಾ ₹2 ಲಕ್ಷ ಅನುದಾನ ನೀಡಲು ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು.ವೇದಿಕೆಯಲ್ಲಿ ಉಪಾಧ್ಯಕ್ಷ ಅಣ್ಣಾಸಾಹೇಬ ಪಾಟೀಲ, ಗುರುನಾಥ ಮೈತ್ರಿ, ಶಿವನಗೌಡ ಪಾಟೀಲ, ರಾಜೇಂದ್ರ ಪಾಟೀಲ, ಮಲ್ಲಪ್ಪ ಗುಡ್ಡಲ, ಬಸವರಾಜ ಲವಗಿ, ಮಲ್ಲಪ್ಪ ಬೋಸಗಿ, ಲಕ್ಷ್ಮಣ ಲಮಾಣಿ, ಸಹಾಯಕ ನಿಬಂಧಕ ಕೆ.ಎಚ್.ವಡ್ಡರ, ವಿಜುಗೌಡ ಪಾಟೀಲ, ಅಣ್ಣಪ್ಪ ಬಿದರಕೋಟಿ, ವಿಜು ನಿಡಗುಂದಿ, ವಿಜುಗೌಡ ಪಾಟೀಲ, ಬಾಬುಸಾಹುಕಾರ ಮೇತ್ರಿ ಇದ್ದರು.ಶ್ರೀಕುಮಾರ ಪಾಟೀಲ ಪ್ರಾರ್ಥಿಸಿದರು. ಸಂಘದ ಕಾರ್ಯನಿರ್ವಾಣಾಧಿಕಾರಿ ಆರ್.ಜಿ.ಕಾವಿ ಸ್ವಾಗತಿಸಿದರು. ಲೆಕ್ಕಿಗ ಕೃಷ್ಣಾಜಿ ಕುಲಕರ್ಣಿ ನಿರೂಪಿಸಿ ವಂದಿಸಿದರು.

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ