ಸರ್ಕಾರಿ ನೌಕರರ ಸಂಘದ ನಿರ್ದೇಶಕರಿಗೆ ಸನ್ಮಾನ

KannadaprabhaNewsNetwork |  
Published : Nov 08, 2024, 12:39 AM ISTUpdated : Nov 08, 2024, 12:40 AM IST
51 | Kannada Prabha

ಸಾರಾಂಶ

ತಾಲೂಕು ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ಆಯ್ಕೆಯನ್ನು ಚುನಾವಣೆ ನಡೆಸದೆ ಅವಿರೋಧವಾಗಿ ಆಯ್ಕೆ ಮಾಡಿಕೊಳ್ಳಬೇಕು

ಕನ್ನಡಪ್ರಭ ವಾರ್ತೆ ಕೆ.ಆರ್. ನಗರಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಮತ್ತು ನಿರ್ದೇಶಕರಿಗೆ ಚುನಾಯಿತ ಜನಪ್ರತಿನಿಧಿಗಳಷ್ಟೆ ಜವಾಬ್ದಾರಿ ಇದ್ದು, ನೀವುಗಳು ಅಭಿವೃದ್ದಿ ವಿಚಾರದಲ್ಲಿ ಅತ್ಯಂತ ಜಾಗರೂಕರಾಗಿ ಕೆಲಸ ಮಾಡಬೇಕು ಎಂದು ಶಾಸಕ ಡಿ. ರವಿಶಂಕರ್ ಹೇಳಿದರು. ಪಟ್ಟಣದ ಹಾಸನ-ಮೈಸೂರು ರಸ್ತೆಯಲ್ಲಿರುವ ಶಾಸಕರ ಕಚೇರಿಯಲ್ಲಿ ನಡೆದ ತಾಲೂಕು ಸರ್ಕಾರಿ ನೌಕರರ ಸಂಘದ ನಿರ್ದೇಶಕರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ನಮ್ಮೊಂದಿಗೆ ನೀವು ಕೈ ಜೋಡಿಸಿ ದುಡಿದರೆ ಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿಯನ್ನಾಗಿ ಮಾಡಬಹುದು ಎಂದರು. ತಾಲೂಕು ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ಆಯ್ಕೆಯನ್ನು ಚುನಾವಣೆ ನಡೆಸದೆ ಅವಿರೋಧವಾಗಿ ಆಯ್ಕೆ ಮಾಡಿಕೊಳ್ಳಬೇಕು ಎಂಬ ತಮ್ಮ ಸಲಹೆಯನ್ನು ಪುರಸ್ಕರಿಸಿದ ನಿರ್ದೇಶಕರಿಗೆ ಅಭಿನಂದನೆ ಸಲ್ಲಿಸಿದ ಶಾಸಕರು, ನೂತನ ಅಧ್ಯಕ್ಷರನ್ನಾಗಿ ತಾಲೂಕು ಆರೋಗ್ಯಾಧಿಕಾರಿ ಡಾ.ಡಿ. ನಟರಾಜು ಅವರನ್ನು ಬೆಂಬಲಿಸಲು ಎಲ್ಲರೂ ನಿರ್ಧರಿಸಿದ್ದಾರೆ ಎಂದು ಘೋಷಣೆ ಮಾಡಿದರು. ಶಾಸಕರು ಸಂಘದ ಎಲ್ಲ 32 ಮಂದಿ ನಿರ್ದೇಶಕರನ್ನು ಸನ್ಮಾನಿಸಿದರು. ಇದರ ಜತೆಗೆ ಸಂಘದ ಖಜಾಂಚಿಯಾಗಿ ಕೃಷಿ ಇಲಾಖೆಯ ಹರೀಶ್ ಮತ್ತು ರಾಜ್ಯ ಪರಿಷತ್ ಸದಸ್ಯರನ್ನಾಗಿ ಕಂದಾಯ ಇಲಾಖೆಯ ಎಸ್.ಆರ್. ಯಶವಂತ್ ಅವರನ್ನು ಒಮ್ಮತ್ತದಿಂದ ಆಯ್ಕೆ ಮಾಡಿದ್ದು, ಉಳಿದ ಪದಾಧಿಕಾರಿಗಳನ್ನು ಅಧ್ಯಕ್ಷರು ಆಡಳಿತ ಚುರುಕು ಮಾಡುವ ಅನುಕೂಲಕ್ಕೆ ತಕ್ಕಂತೆ ಸರ್ವರಿಗೂ ಸಮಾನ ಅವಕಾಶ ನೀಡಿ ನೇಮಕ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ನಿರ್ದೇಶಕರಾದ ಸಿ.ಎಂ. ಅಣ್ಣಯ್ಯ, ಎಸ್.ಎಂ. ಗಂಗಾಧರ್, ರಾಜಶೇಖರ, ಡಾ.ಎಚ್.ಪಿ. ಹರೀಶ್, ಎಸ್. ಶಶಿಕಾಂತ್, ದೊರೆಸ್ವಾಮಿ, ಆರ್. ಮಂಜುನಾಥ್, ಶಂಕರೇಗೌಡ, ಬಿ.ಎಲ್. ಮಹದೇವ, ಪೂರ್ಣಿಮ, ಕೆ. ಮಧುಕುಮಾರ್, ಎಂ.ಎಸ್. ಲೋಕೇಶ್, ಕೆ.ಎಂ. ಮುರುಳಿ, ಎಂ.ಇ. ರಾಘವೇಂದ್ರ, ಸಿ.ಇ. ಉಮೇಶ್, ಜಿ.ಜೆ. ಮಹೇಶ್, ಎಂ.ಎಸ್. ಮಹದೇವ, ಎನ್. ರವಿಕುಮಾರ್, ಕೆ.ವಿ. ರಮೇಶ್, ಕೆ.ಎಸ್. ಪಾರ್ವತಿ, ಎಚ್.ವಿ. ಶಶಿಧರ್, ಎಚ್.ಡಿ. ಜಯಲಕ್ಷ್ಮಿ, ಎನ್.ಇ. ತುಳಸಿ, ಕೆ. ಸತೀಶ್ ಕುಮಾರ್, ಜಿ.ಟಿ. ಸತೀಶ್, ಡಿ.ಆರ್. ಕುಮಾರ್, ಕೆ.ಪಿ. ಶಿವಕುಮಾರ್, ಡಿ. ರಘು ಮತ್ತು ಇ. ವಸಂತ್ ಕುಮಾರ್ ಇದ್ದರು.

PREV

Recommended Stories

ದಸರಾ ಉದ್ಘಾಟನೆಗೆ ಬಾನು : ಬಿಜೆಪಿ vs ಕಾಂಗ್ರೆಸ್ ಜಟಾಪಟಿ
ಧರ್ಮಸ್ಥಳ ಎಸ್‌ಐಟಿ ಅಧಿಕಾರಿ ಅನುಚೇತ್‌ ಅಮೆರಿಕ ಪ್ರವಾಸಕ್ಕೆ