ಮಟ್ಟಾರು ರತ್ನಾಕರ ಹೆಗ್ಡೆಗೆ ಗುರುವಂದನೆ ಕಾರ್ಯಕ್ರಮ

KannadaprabhaNewsNetwork |  
Published : Aug 11, 2026, 03:30 AM IST
09ಮಟ್ಟಾರು | Kannada Prabha

ಸಾರಾಂಶ

ಗುರುಪೂರ್ಣಿಮೆಯ ಪ್ರಯುಕ್ತ ಅಧಿವಕ್ತ ಪರಿಷತ್ ಉಡುಪಿ ಜಿಲ್ಲಾ ಘಟಕದ ವತಿಯಿಂದ ಧಾರ್ಮಿಕ, ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಅಮೋಘ ಸೇವೆ ಸಲ್ಲಿಸಿರುವ ಹಿರಿಯ ವಕೀಲರಾದ ಮಟ್ಟಾರು ರತ್ನಾಕರ ಹೆಗ್ಡೆ ಅವರಿಗೆ ಗುರುವಂದನೆ ಸಲ್ಲಿಸಿ, ಅಭಿನಂದಿಸಲಾಯಿತು.

ಉಡುಪಿ: ಗುರುಪೂರ್ಣಿಮೆಯ ಪ್ರಯುಕ್ತ ಅಧಿವಕ್ತ ಪರಿಷತ್ ಉಡುಪಿ ಜಿಲ್ಲಾ ಘಟಕದ ವತಿಯಿಂದ ಧಾರ್ಮಿಕ, ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಅಮೋಘ ಸೇವೆ ಸಲ್ಲಿಸಿರುವ ಹಿರಿಯ ವಕೀಲರಾದ ಮಟ್ಟಾರು ರತ್ನಾಕರ ಹೆಗ್ಡೆ ಅವರಿಗೆ ಗುರುವಂದನೆ ಸಲ್ಲಿಸಿ, ಅಭಿನಂದಿಸಲಾಯಿತು.ಕಾನೂನು ಕ್ಷೇತ್ರದಲ್ಲಿ ತಮ್ಮ ಅಪಾರ ಅನುಭವ ಹಾಗೂ ಜ್ಞಾನದಿಂದ ಅನೇಕ ಮಂದಿ ಶಿಷ್ಯರಿಗೆ ಅಮೂಲ್ಯ ಮಾರ್ಗದರ್ಶನ ನೀಡಿರುವ ಮಟ್ಟಾರು ರತ್ನಾಕರ ಹೆಗ್ಡೆಯವರ ಸೇವೆಯನ್ನು ಈ ಸಂದರ್ಭ ಪ್ರಶಂಸಿಸಲಾಯಿತು.ಅಧಿವಕ್ತ ಪರಿಷತ್‌ನ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಶ್ವೇತಾ ಜೈನ್ ಅವರು ಮಟ್ಟಾರು ಅವರಿಗೆ ಗುರುವಂದನೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಅಧಿವಕ್ತ ಪರಿಷತ್ ಉಡುಪಿ ಜಿಲ್ಲಾ ಅಧ್ಯಕ್ಷ ಸಂತೋಷ್ ಹೆಬ್ಬಾರ್, ಪ್ರಧಾನ ಕಾರ್ಯದರ್ಶಿ ಆರೂರು ಸುಕೇಶ್ ಶೆಟ್ಟಿ, ಸದಸ್ಯರಾದ ಶಶಿರಾಜ್ ಪೈಯಾರ್, ರಾಜೇಶ್ ಎ.ಆರ್., ಗಿರೀಶ್ ಎಸ್.ಪಿ., ನಿತೇಶ್ ಶೆಟ್ಟಿ ಮಟ್ಟಾರ್, ಜಯಂತ್ ರಾವ್, ಸುಚಿತಾ ಅರುಣ್ ಶೆಟ್ಟಿ, ರವೀಂದ್ರ ಬೈಲೂರು, ನಿತೀಶ್ ಶೆಟ್ಟಿ ಮಟ್ಟಾರ್ ಹಾಗೂ ಯತಿರಾಜ್, ಕಾನೂನು ವಿದ್ಯಾರ್ಥಿ ರಕ್ಷಿತ್ ಬೆಳಪು ಹಾಗೂ ಬಿಜೆಪಿ ಓಬಿಸಿ ಮೋರ್ಚಾ ಕಾಪು ಮಂಡಲ ಅಧ್ಯಕ್ಷ ಸಂತೋಷ್ ಮೂಡುಬೆಳ್ಳೆ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡಪ್ರಭ ಪ್ರಶಸ್ತಿ ಪುರಸ್ಕೃತ ಡಾ.ಪ್ರಸಾದ ಸಾಸನೂರಗೆ ಸನ್ಮಾನ
ರೈತರ ನೆರವಿಗೆ ಧಾವಿಸಲು ಸಿಎಂಗೆ ಮನವರಿಕೆ: ಸಚಿವ ಎಂ.ಬಿ.ಪಾಟೀಲ