ಯಲ್ಲಾಪುರ: ಶಿಕ್ಷಕರು ಹಾಗೂ ಸಾರ್ವಜನಿಕರ ಸಹಭಾಗಿತ್ವವಿದ್ದರೆ ಮಾತ್ರ ಸರ್ಕಾರಿ ಶಾಲೆಗಳು ಮಾದರಿಯಾಗಿ ಅಭಿವೃದ್ಧಿಗೊಳ್ಳಲು ಸಾಧ್ಯ ಎಂದು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಂಜೀವಕುಮಾರ ಹೊಸ್ಕೇರಿ ಹೇಳಿದರು.
ತಾಲೂಕಿನ ಆನಗೋಡ ಸಮೀಪದ ಗೋಳಿಗದ್ದೆ ಸ.ಕಿ.ಪ್ರಾ. ಶಾಲೆಯ ವಾರ್ಷಿಕ ಸ್ನೇಹ ಸಮ್ಮಿಲನದಲ್ಲಿ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.ಹಿರಿಯ ವೈದಿಕ ನಾರಾಯಣ ಭಟ್ಟ ಕೊರಗಿ ಕಾರ್ಯಕ್ರಮ ಉದ್ಘಾಟಿಸಿದರು. ಗ್ರಾಮಸ್ಥರ ಸಹಕಾರದೊಂದಿಗೆ ನಿರ್ಮಿಸಿದ ಮಹಾದ್ವಾರವನ್ನು ಗ್ರಾಪಂ ಅಧ್ಯಕ್ಷೆ ಮೀನಾಕ್ಷಿ ಭಟ್ಟ ಉದ್ಘಾಟಿಸಿದರು. ವಿದ್ಯಾರ್ಥಿಗಳ ಕೈಬರಹ ಪತ್ರಿಕೆಯನ್ನು ಗ್ರಾಪಂ ಸದಸ್ಯ ಕೆ.ಟಿ. ಹೆಗಡೆ ಬಿಡುಗಡೆಗೊಳಿಸಿದರು. ಇದೇ ಸಂದರ್ಭದಲ್ಲಿ ಪರಿಸರ ಮಿತ್ರ ಇಕೋ ಕ್ಲಬ್ ಅನ್ನು ಗಿಡ ನೆಡುವ ಮೂಲಕ ಉದ್ಘಾಟಿಸಲಾಯಿತು.
ನಾಟಿ ವೈದ್ಯ ದೇಮು ಮರಾಠಿ, ಶಾಲಾಭಿವೃದ್ಧಿ ಸಮಿತಿಯ ಮಾಜಿ ಅಧ್ಯಕ್ಷ ಶಿವರಾಮ ಹೆಗಡೆ ಗೋಳಿಗದ್ದೆ ಅವರನ್ನು ಸನ್ಮಾನಿಸಲಾಯಿತು. ಹಿರಿಯ ವೈದಿಕ ನಾರಾಯಣ ಭಟ್ಟ ಕೊರಗಿ, ಸರ್ಕಾರಿ ನೌಕರರ ಸಂಘದ ನೂತನ ಅಧ್ಯಕ್ಷ ಸಂಜೀವಕುಮಾರ ಹೊಸ್ಕೇರಿ ಹಾಗೂ ಶಾಲಾಭಿವೃದ್ಧಿಗೆ ಸಹಕರಿಸಿದ ರಮೇಶ ಮರಾಠಿ ಆನಗೋಡ ಅವರನ್ನು ಗೌರವಿಸಲಾಯಿತು.ವೇ. ಗೋಪಾಲಕೃಷ್ಣ ಭಟ್ಟ ಕೊರಗಿ, ಗ್ರಾಪಂ ಉಪಾಧ್ಯಕ್ಷೆ ಕುಸುಮಾ ಸಿದ್ದಿ, ಸದಸ್ಯ ಪರಮೇಶ್ವರ ಗಾಂವ್ಕರ, ಸಿ.ಆರ್.ಪಿ. ಚಂದ್ರಹಾಸ ನಾಯ್ಕ, ಎಸ್.ಡಿ.ಎಂ.ಸಿ. ಅಧ್ಯಕ್ಷ ಶಂಕರ ಹೆಗಡೆ, ಶಿಕ್ಷಣ ಇಲಾಖೆಯ ಪ್ರಶಾಂತ ಜಿ.ಎನ್., ಪ್ರಶಾಂತ ಪಟಗಾರ, ಸಂತೋಷ ನಾಯ್ಕ, ದಿಲೀಪ ದೊಡ್ಮನಿ, ನಿವೃತ್ತ ಶಿಕ್ಷಕ ಎಂ.ಬಿ. ಶೇಟ್, ಮುಖ್ಯಾಧ್ಯಾಪಕ ಶ್ರೀಧರ ಮಡಿವಾಳ, ಶಿಕ್ಷಕಿ ಸುಮಂಗಲಾ ಭಟ್ಟ ಮತ್ತಿತರರು ಉಪಸ್ಥಿತರಿದ್ದರು.ಭಾಷಣ ಸ್ಪರ್ಧೆಯಲ್ಲಿ ನಿಧಿ ದೇವಡಿಗ ಜಿಲ್ಲಾ ಮಟ್ಟಕ್ಕೆ ಆಯ್ಕೆ
ಭಟ್ಕಳ: ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿಯಲ್ಲಿ ತಾಲೂಕಿನ ಶಿರಾಲಿ ಸೈಂಟ್ ಥಾಮಸ್ ಪ್ರೌಢಶಾಲೆಯ ವಿದ್ಯಾರ್ಥಿನಿ ನಿಧಿ ಎನ್. ದೇವಡಿಗ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಪಟ್ಟಣದ ಕಲಾವತಿ ರಾಮನಾಥ ಶ್ಯಾನಭಾಗ ಸಭಾ ಭವನದಲ್ಲಿ ನಡೆದ ಜಿಲ್ಲಾಮಟ್ಟದ ಕಾರ್ಯಕ್ರಮದಲ್ಲಿ ಈಕೆಯು ಕನ್ನಡ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಇದೇ ಶಾಲೆಯ ಪೂರ್ವಿ ಮತ್ತು ತಂಡ ಕವಾಲಿ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಶಾಲೆಯ ಮುಖ್ಯೋಪಾಧ್ಯಾಯ ಮತ್ತು ಆಡಳಿತ ಮಂಡಳಿ ಅಭಿನಂದಿಸಿದೆ.