ಸಂಘಟಿತರಾದರೆ ಸಮಾಜದ ಪ್ರಗತಿ: ಎಲ್.ಟಿ. ಪಾಟೀಲ

KannadaprabhaNewsNetwork |  
Published : Oct 12, 2026, 02:30 AM IST
ಜ್ಞಾನದೇವ ಗುಡಿಯಾಳ ಅವರನ್ನು ಅಭಿನಂದಿಸಲಾಯಿತು. | Kannada Prabha

ಸಾರಾಂಶ

ಸಮಾಜದವರು ಒಗ್ಗಟ್ಟಿನಿಂದ ಸಂಘಟಿತರಾಗುವುದರಿಂದ ಮಾತ್ರ ಎಲ್ಲ ಕ್ಷೇತ್ರದಲ್ಲಿ ಮುಂದೆ ಬರಲು ಸಾಧ್ಯ.

ಮುಂಡಗೋಡ: ರಾಜ್ಯದಲ್ಲಿ ಮರಾಠ ಸಮಾಜ ಸುಮಾರು ೭೦ರಿಂದ ೮೦ ಲಕ್ಷ ಜನಸಂಖ್ಯೆ ಹೊಂದಿದ್ದರೂ ನಮ್ಮ ಸಮುದಾಯವನ್ನು ಅಲ್ಪಸಂಖ್ಯಾತರಂತೆ ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ಕ್ಷತ್ರಿಯ ಮರಾಠ ಮಹಾ ಒಕ್ಕೂಟ ರಾಜ್ಯ ಉಪಾಧ್ಯಕ್ಷ ಎಲ್.ಟಿ. ಪಾಟೀಲ ಹೇಳಿದರು.

ಭಾನುವಾರ ಇಲ್ಲಿಯ ಮರಾಠಾ ಭವನದಲ್ಲಿ ನೂತನವಾಗಿ ಕ್ಷತ್ರಿಯ ಮರಾಠ ಮಹಾ ಒಕ್ಕೂಟದ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿರುವ ಜ್ಞಾನದೇವ ಗುಡಿಯಾಳ ಅವರ ಪದಗ್ರಹಣ ಸಮಾರಂಭ ನೆರವೇರಿಸಿ ಮಾತನಾಡಿದರು. ಮರಾಠ ಸಮಾಜದ ಸಂಘಟನೆಯ ಕೊರತೆಯಿಂದಾಗಿ ರಾಜ್ಯ ರಾಜಕಾರಣ ಕೇವಲ ಲಿಂಗಾಯತ, ಗೌಡ, ಕುರುಬ ಹೀಗೆ ಕೆಲವೇ ಕೆಲ ಸಮಾಜಕ್ಕೆ ಸೀಮಿತವಾಗದೆ ಎಂದು ಆರೋಪಿಸಿದ ಅವರು, ಸಮಾಜದವರು ಒಗ್ಗಟ್ಟಿನಿಂದ ಸಂಘಟಿತರಾಗುವುದರಿಂದ ಮಾತ್ರ ಎಲ್ಲ ಕ್ಷೇತ್ರದಲ್ಲಿ ಮುಂದೆ ಬರಲು ಸಾಧ್ಯ ಎಂದರು.

ರಾಜ್ಯದ ಪ್ರತಿ ಮೂಲೆ ಮೇಲೆ ಸಂಚರಿಸಿ ಮನೆ ಮನೆಗೆ ತೆರಳಿ ಸದಸ್ಯ ಮಾಡುವುದರಿಂದ ಸಮಾಜವನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತದೆ. ಧಾರ್ಮಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕವಾಗಿ ಸಬಲರಾಗಬೇಕಿದ್ದು, ಸಮಾಜದ ಮುಖಂಡರು ಆಗುಹೋಗುಗಳ ಬಗ್ಗೆ ಗಮನಹರಿಸಿ ಸಮಾಜದ ಏಳ್ಗೆಯಲ್ಲಿ ಶ್ರಮಿಸಬೇಕಿದೆ ಎಂದರು.

ಕ್ಷತ್ರಿಯ ಮರಾಠ ಮಹಾ ಒಕ್ಕೂಟದ ನೂತನ ಜಿಲ್ಲಾಧ್ಯಕ್ಷ ಜ್ಞಾನದೇವ ಗುಡಿಯಾಳ ಮಾತನಾಡಿ, ಪ್ರತಿಯೊಬ್ಬರೂ ಕೈಜೋಡಿಸಿದರೆ ಸಮಾಜದ ಏಳ್ಗೆಗೆ ಸಹಕಾರಿಯಾಗುತ್ತದೆ. ಜಿಲ್ಲಾದ್ಯಂತ ಸಂಚರಿಸಿ ಸಮಾಜದವರಲ್ಲಿ ಮೊದಲು ಜಾಗೃತಿ ಮೂಡಿಸುವ ಮೂಲಕ ಸಂಘಟನೆಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಕ್ಷತ್ರಿಯ ಮರಾಠ ಮಂಡಳ ತಾಲೂಕಾಧ್ಯಕ್ಷ ನಾಗರಾಜ ಸಂಕನಾಳ, ಉಪಧ್ಯಕ್ಷ ನಾರಾಯಣ ಗುರಪ್ಪನವರ, ಶ್ರೀಧರ ಡೋರಿ, ವಿಠಲ ಬಾಳಂಬೀಡ, ಡಿ.ಎಫ್. ಮಡ್ಲಿ, ಸುರೇಶ ಕರೆಹೊಲ್ದವರ, ಕೇದಾರಿ ಮುಗಳಿ, ಎಂ.ಪಿ. ಕುಸೂರ, ಪರಶುರಾಮ ತಡಸದವರ, ಶಶಿಕಲಾ ಧಶರತ ಸಾಳುಂಕೆ, ನಾಗವೇಣಿ ಮುರುಳಿ ರಾಣೋಜಿ, ಸಣ್ಣಪ್ಪ ಕಾಶಿಬಾಯಿ, ಗೋಪಾಲ ಪಾಟೀಲ ಬಾಬಣ್ಣ ಕೋಣನಕೇರಿ ಮುಂತಾದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೊಡಗು ಗೌಡ ವಿದ್ಯಾ ಸಂಘದಿಂದ ಪ್ರತಿಭಾ ಪುರಸ್ಕಾರ, ಸನ್ಮಾನ ಸಮಾರಂಭ
ಕನ್ನಡ ರಾಜ್ಯೋತ್ಸವ ಆಚರಣೆಗೆ ಪೂರ್ವಭಾವಿ ಸಭೆ