ಮಾರ್ಚ್‌ 16ಕ್ಕೆ ಮಹಿಳಾ ವೈದ್ಯರ ರಾಜ್ಯ ಸಮ್ಮೇಳನ ಪ್ರಗತಿ: ಡಾ.ಎಸ್.ರಜನಿ

KannadaprabhaNewsNetwork | Published : Mar 16, 2025 1:48 AM

ಸಾರಾಂಶ

ಕರ್ನಾಟಕ ರಾಜ್ಯದ 7ನೇ ಮಹಿಳಾ ವೈದ್ಯರ ವಿಭಾಗದಿಂದ 7ನೇ ರಾಜ್ಯ ಮಟ್ಟದ ಸಮ್ಮೇಳನ ಪ್ರಗತಿ-2025 ಇದೇ ಮೊದಲ ಬಾರಿಗೆ ದಾವಣಗೆರೆಯಲ್ಲಿ ಮಾ.16ರಂದು ನಡೆಯಲಿದೆ ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್‌ನ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ, ಹಿರಿಯ ವೈದ್ಯೆ ಡಾ.ಎಸ್.ರಜನಿ ತಿಳಿಸಿದರು.

ಪೋಸ್ಟರ್‌ ಪ್ರದರ್ಶನ

ದಾವಣಗೆರೆ: ಕರ್ನಾಟಕ ರಾಜ್ಯದ 7ನೇ ಮಹಿಳಾ ವೈದ್ಯರ ವಿಭಾಗದಿಂದ 7ನೇ ರಾಜ್ಯ ಮಟ್ಟದ ಸಮ್ಮೇಳನ ಪ್ರಗತಿ-2025 ಇದೇ ಮೊದಲ ಬಾರಿಗೆ ದಾವಣಗೆರೆಯಲ್ಲಿ ಮಾ.16ರಂದು ನಡೆಯಲಿದೆ ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್‌ನ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ, ಹಿರಿಯ ವೈದ್ಯೆ ಡಾ.ಎಸ್.ರಜನಿ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ಇಲ್ಲಿನ ಎಂಸಿ ಕಾಲನಿ ಬಿ ಬ್ಲಾಕ್‌ನಲ್ಲಿರುವ ಐಎಂಎ ಸಭಾ ಭವನದಲ್ಲಿ ರಾಜ್ಯ ಮಟ್ಟದ ಮಹಿಳಾ ವೈದ್ಯರ ಸಮ್ಮೇಳನ ನಡೆಯಲಿದೆ ಎಂದರು.

ಪ್ರಗತಿಯತ್ತ ಕ್ರಿಯೆಯನ್ನು ವೇಗಗೊಳಿಸಿ ಎಂಬ ಘೋಷವಾಕ್ಯದೊಂದಿಗೆ ಭಾನುವಾರ ಬೆಳಿಗ್ಗೆ 10.30ಕ್ಕೆ ಐಎಂಎ ಜಿಲ್ಲಾಧ್ಯಕ್ಷ ಡಾ.ಬಿ.ಎಂ.ಹರ್ಷ ಅಧ್ಯಕ್ಷತೆಯಲ್ಲಿ ಸಂಸ್ಥೆಯ ಕರ್ನಾಟಕ ರಾಜ್ಯ ಶಾಖೆ ಅಧ್ಯಕ್ಷ ಡಾ.ವೀರಭದ್ರಪ್ಪ ವಿ.ಚಿನಿವಾಲರ, ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.

ಅದೇ ದಿನ ಬೆಳಿಗ್ಗೆ 9.30ಕ್ಕೆ ಮೆಡಿಕೋ ಲೀಗಲ್ ಲ್ಯಾಂಡ್‌ ಮೈನ್ಸ್ ವಿಷಯವಾಗಿ ಡಾ.ಎಸ್.ವಿನಯಕುಮಾರ ಮಾತನಾಡುವರು. ಡಾ.ಬಿ.ಆರ್.ಉಮಾ, ಡಾ.ಗಾಯತ್ರಿ ಮಂಚಿ ಭಾಗವಹಿಸುವರು. 10ಕ್ಕೆ 2ನೇ ಗೋಷ್ಟಿಯಲ್ಲಿ ಡಾ.ಶೃತಿ ಬಾವಿ ಪಾಟೀಲ್ ಮಾತನಾಡಲಿದ್ದು, ಡಾ.ಎಂ.ಜಿ.ಉಷಾ, ಡಾ.ಬಿ.ಕೆ.ಭಾರತಿ ಪಾಲ್ಗೊಳ್ಳುವರು. 10.30ಕ್ಕೆ ಸಮ್ಮೇಳನ ಉದ್ಘಾಟನೆಗೊಳ್ಳಲಿದೆ ಎಂದು ತಿಳಿಸಿದರು.

ಅದೇ ದಿನ 11.45ಕ್ಕೆ ಡಾ.ಬಂಧಮ್ಮ ನರೇಂದ್ರ, ಡಾ.ಸುಪರ್ಣಾ ಅಧ್ಯಕ್ಷತೆಯಲ್ಲಿ ಡಾ.ಅವಿನಾಶ ಪಾಟೀಲ ಮಾತನಾಡುವರು. ಮಧ್ಯಾಹ್ನ 2ಕ್ಕೆ ಡಾ.ಮಧುಸೂದನ ಕಾರಿಗನೂರು ಅಧ್ಯಕ್ಷತೆಯಲ್ಲಿ ಡಾ.ಅನಿತಾರಾವ್ ಮಾತನಾಡುವರು. ಮಧ್ಯಾಹ್ನ 2.45ಕ್ಕೆ ಡಾ.ಎನ್.ಜಗದೀಶ, ಡಾ.ಶೋಭಾ ಧನಂಜಯ, ಡಾ.ಎನ್.ಎಸ್.ಚೈತಾಲಿ, ಡಾ.ಶಾಂತೇರಿ ಪೈ, ಸಖಿ ಕೇಂದ್ರದ ವಕೀಲರಾದ ತಂಜೀಮಾ ಮತ್ತು ತಂಡ ಮಾತನಾಡಲಿದೆ ಎಂದರು.

ಐಎಂಎ ಜಿಲ್ಲಾಧ್ಯಕ್ಷ ಡಾ.ಬಿ.ಎಂ.ಹರ್ಷ, ಐಎಂಎ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಡಾ.ಶ್ವೇತಾ ರಾಮು, ಖಜಾಂಚಿ ಡಾ.ಸೀಮಾ ಬಿಜ್ಜರಗಿ, ಡಾ.ಚೈತಾಲಿ, ಡಾ.ಶೋಭಾ ಧನಂಜಯ, ಡಾ.ಛಾಯಾ, ಡಾ.ವೇಣು ಲೋಹಿತಾಶ್ವ ಇತರರು ಇದ್ದರು.

Share this article