ಕನ್ನಡ ಪ್ರಭ ವಾರ್ತೆ ಮುಧೋಳ
ಸ್ಥಳೀಯ ವಾತ್ಸಲ್ಯ ಧಾಮ ಆಶ್ರಮದಲ್ಲಿ ನಡೆದ ರೈತರ ಚರ್ಚಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೃಷಿ ನಿರ್ವಹಣೆಯ ವೆಚ್ಚ ಬಹಳ ಹೆಚ್ಚಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಕಬ್ಬಿನ ಬೆಲೆ ಹೆಚ್ಚಿಸುವುದು ತೀರ ಅವಶ್ಯವಾಗಿದೆ ಎಂದರು.
ಎಥೆನಾಲ್ ಉತ್ಪಾದನೆಯಿಂದ ಸಕ್ಕರೆ ಕಾರ್ಖಾನೆಗಳು ಚೆನ್ನಾಗಿ ಲಾಭಗಳಿಸುತ್ತಿವೆ. ರೈತರಿಗೆ ಅನುಕೂಲ ಮಾಡಿ ಕೊಡುವ ದೃಷ್ಟಿಯಿಂದ ಎಥೆನಾಲ್ ಬೆಲೆಯನ್ನು ಸರ್ಕಾರ ಹೆಚ್ಚಿಸಿದೆ. ಈ ಲಾಭ ರೈತರಿಗೂ ದೊರಕಬೇಕೆಂದರು.ಬಾಗಲಕೋಟೆ, ವಿಜಯಪುರ ಜಿಲ್ಲೆಗಳ ವ್ಯಾಪ್ತಿಯಲ್ಲಿ ರೈತರು ದಾಳಿಂಬೆ, ಚಿಕ್ಕೂ, ಮಾವು, ಪೇರಲು, ಪಪ್ಪಾಯಿ, ದ್ರಾಕ್ಷಿ, ಬಾಳೆ ಇತ್ಯಾದಿ ಹಣ್ಣಗಳನ್ನು ಚೆನ್ನಾಗಿ ಬೆಳೆಯುತ್ತಾರೆ. ಸರ್ಕಾರ ಹಣ್ಣುಗಳಿಗೆ ಉತ್ತಮ ಮಾರುಕಟ್ಟೆ ಒದಗಿಸಬೇಕು. ವಿದೇಶಗಳಿಗೆ ಎಕ್ಸ್ ಪೋರ್ಟ್ ಮಾಡುವ ವ್ಯವಸ್ಥೆ ಕಲ್ಪಿಸಬೇಕೆಂದು ಅವರು ಮನವಿ ಮಾಡಿದರು.
ವಾತ್ಸಲ್ಯದಾಮ ಆಶ್ರಮದ ರಮೇಶ ಭಯಾ, ಬಾಗಲಕೋಟ ಜಿ.ಪಂ ಮಾಜಿ ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ರಮೇಶ ಶಿರೋಳ , ಲಕ್ಷ್ಮಣ ಬಿಳೂರ, ಮಲ್ಲಿಕಾರ್ಜುನ ಹೆಗ್ಗಳಗಿ, ಬಿ.ಹೆಚ್.ಬೀಳಗಿ ಇತರರು ಉಪಸ್ಥಿತರಿದ್ದರು.