ಪ್ರಗತಿಪರ ಸಂಘಟನೆಯಿಂದ ಅಂಬೇಡ್ಕರ್ ಪ್ರತಿಮೆ ಬಳಿ ಪ್ರತಿಭಟನೆ

KannadaprabhaNewsNetwork |  
Published : Apr 21, 2025, 12:57 AM IST
20ಸಿಎಚ್ಎನ್‌51ಮೈಸೂರು ತಾಲೂಕಿನ ವರುಣ ಕ್ಷೇತ್ರದ ವಾಜ್ ಮಂಗಲದಲ್ಲಿ ಅಂಬೇಡ್ಕರ್ ಹಾಗೂ ಬುದ್ಧನ ಫ್ಲೆಕ್ಸ್ ನಲ್ಲಿನ ಪೋಟೊ ಗೆ ಮಲ ಬಳಿದು (ಹೇಸಿಗೆ ) ಅವಮಾನ ಮಾಡಿದ ಕಿಡಿಗೇಡಿಗಳನ್ನ ಬಂಧಿಸಿ, ಕಠಿಣ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿ ಕೊಳ್ಳೇಗಾಲದಲ್ಲಿ ಪ್ರಗತಿಪರ ಸಂಘಟನೆಯ ವತಿಯಿಂದ ಅಂಬೇಡ್ಕರ್ ಪ್ರತಿಮೆ ಬಳಿ ಭಾನುವಾರದ ಪ್ರತಿಭಟನೆ ನಡೆಸಲಾಯಿತು. | Kannada Prabha

ಸಾರಾಂಶ

ಮೈಸೂರು ತಾಲೂಕಿನ ವರುಣಾ ಕ್ಷೇತ್ರದ ವಾಜ್ ಮಂಗಲದಲ್ಲಿ ಅಂಬೇಡ್ಕರ್ ಹಾಗೂ ಬುದ್ಧನ ಫ್ಲೆಕ್ಸ್ ನಲ್ಲಿನ ಪೋಟೋಗೆ ಮಲ ಬಳಿದು ಅವಮಾನ ಮಾಡಿದ ಕಿಡಿಗೇಡಿಗಳನ್ನು ಬಂಧಿಸಿ, ಕಠಿಣ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿ ಇಲ್ಲಿನ ಪ್ರಗತಿಪರ ಸಂಘಟನೆಯ ವತಿಯಿಂದ ಅಂಬೇಡ್ಕರ್ ಪ್ರತಿಮೆ ಬಳಿ ಭಾನುವಾರ ಪ್ರತಿಭಟನೆ ನಡೆಸಲಾಯಿತು.

ಕೊಳ್ಳೇಗಾಲ: ಮೈಸೂರು ತಾಲೂಕಿನ ವರುಣಾ ಕ್ಷೇತ್ರದ ವಾಜ್ ಮಂಗಲದಲ್ಲಿ ಅಂಬೇಡ್ಕರ್ ಹಾಗೂ ಬುದ್ಧನ ಫ್ಲೆಕ್ಸ್ ನಲ್ಲಿನ ಪೋಟೋಗೆ ಮಲ ಬಳಿದು ಅವಮಾನ ಮಾಡಿದ ಕಿಡಿಗೇಡಿಗಳನ್ನು ಬಂಧಿಸಿ, ಕಠಿಣ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿ ಇಲ್ಲಿನ ಪ್ರಗತಿಪರ ಸಂಘಟನೆಯ ವತಿಯಿಂದ ಅಂಬೇಡ್ಕರ್ ಪ್ರತಿಮೆ ಬಳಿ ಭಾನುವಾರ ಪ್ರತಿಭಟನೆ ನಡೆಸಲಾಯಿತು. ಪಟ್ಟಣದ ಅಂಬೇಡ್ಕರ್ ಪ್ರತಿಮೆ ಮುಂದೆ ಜಮಾಯಿಸಿದ್ದ ಪ್ರತಿಭಟನಾಕಾರರು, ಧಿಕ್ಕಾರ ಕೂಗುವ ಮೂಲಕ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿದರು. ಮುಖ್ಯಮಂತ್ರಿಗಳ ಸ್ವಕ್ಷೇತ್ರಕ್ಕೆ ಒಳಪಡುವ ವಾಜ್‌ ಮಂಗಲದಲ್ಲಿ ಇಂತಹ ಘಟನೆ ನಡೆದಿರುವುದು ಖಂಡನೀಯ, ಇಂತಹ ಕೃತ್ಯ ಎಸಗಿದ ದ್ರೋಹಿಗಳಿಗೆ ಶಿಕ್ಷೆ ಆಗಬೇಕು ಸರ್ಕಾರ ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಕಿಡಿಗೇಡಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಗತಿಪರ ಸಂಚಾಲಕ ಶೇಖರ್ ಬುದ್ಧ, ಮಹಮ್ಮದ್ ಮತೀನ್, ಮಣಿ, ಮುಳ್ಳೂರು ಪ್ರಭು , ಡಿಡಿಪಿ ರಾಜು, ಚಂದ್ರು, ಚರಣ್, ಅಣಗಳ್ಳಿ ವೆಂಕಟ, ಟೈಲರ್ ರಾಜಣ್ಣ, ಪಾಳ್ಯ ಮಹೇಶ್, ಎಜಾಜ್ ಇನ್ನಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!