ಜೂ.15 ರವರೆಗೆ ಪಂಚಮಸಾಲಿ ಮಠ ಆವರಣದಲ್ಲಿ ನಿಷೇಧಾಜ್ಞೆ

KannadaprabhaNewsNetwork |  
Published : Jun 03, 2026, 01:45 AM IST
02 HRR. 03àಹರಿಹರದ ಪಂಚಮಸಾಲಿ ಮಠ | Kannada Prabha

ಸಾರಾಂಶ

ಹರಿಹರ ನಗರದ ಶಿವಮೊಗ್ಗ ರಸ್ತೆಯ ಶ್ರೀ ಪಂಚಮಸಾಲಿ ಮಠದ ಆವರಣದಲ್ಲಿ ಸಭೆ, ಸಮಾರಂಭ ಹಾಗೂ ಪತ್ರಿಕಾ ಗೋಷ್ಠಿಗಳನ್ನು ನಡೆಸದಂತೆ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಜೂ.1ರಿಂದ ಜೂ.15ರವೆರೆಗೆ ನಿಷೇಧಾಜ್ಞೆ ಹೊರಡಿಸಿದ್ದಾರೆ.

- ಜಿಲ್ಲಾ ಎಸ್‌ಪಿ ಮನವಿ ಮೇರೆಗೆ ಜಿಲ್ಲಾಧಿಕಾರಿ ಆದೇಶ

- ಸಭೆ, ಸಮಾರಂಭ, ಪತ್ರಿಕಾಗೋಷ್ಠಿ ನಡೆಸುವಂತಿಲ್ಲ

- - -

ಹರಿಹರ: ನಗರದ ಶಿವಮೊಗ್ಗ ರಸ್ತೆಯ ಶ್ರೀ ಪಂಚಮಸಾಲಿ ಮಠದ ಆವರಣದಲ್ಲಿ ಸಭೆ, ಸಮಾರಂಭ ಹಾಗೂ ಪತ್ರಿಕಾ ಗೋಷ್ಠಿಗಳನ್ನು ನಡೆಸದಂತೆ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಜೂ.1ರಿಂದ ಜೂ.15ರವೆರೆಗೆ ನಿಷೇಧಾಜ್ಞೆ ಹೊರಡಿಸಿದ್ದಾರೆ.

ಹರಿಹರ ಗ್ರಾಮಾಂತರ ಠಾಣಾ ವ್ಯಾಪ್ತಿಯ ಶ್ರೀ ಪಂಚಮಸಾಲಿ ಮಠದಲ್ಲಿ ಮಠದ ಟ್ರಸ್ಟಿಗಳು ಮತ್ತು ಮಠದ ವಚನಾನಂದ ಶ್ರೀ ಹಾಗೂ ಬೆಂಬಲಿಗರು ನಡೆಸಿದ ಎಲ್ಲ ಸಭೆಗಳು ಹಾಗೂ ಪತ್ರಿಕಾಗೋಷ್ಠಿಗಳನ್ನು ಅವಲೋಕಿಸಲಾಗಿದೆ. ಮಠದಲ್ಲಿ ಉದ್ರೇಕಿತವಾಗಿ ಹೇಳಿಕೆಗಳನ್ನು, ಭಾಷಣಗಳನ್ನು ಮಾಡುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಭಿತ್ತರ ಮಾಡುತ್ತಿದ್ದಾರೆ. ಇದರಿಂದ ಪ್ರಕ್ಷುಬ್ಧ ವಾತಾವರಣ ಉಂಟುಮಾಡಿ, ಸಮಾಜದ ಸ್ವಾಸ್ಥ್ಯಕ್ಕೆ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗಿ ಸಾರ್ವಜನಿಕರ ಆಸ್ತಿ ಪ್ರಾಣಹಾನಿ ಮತ್ತು ಮಠದ ಆಸ್ತಿಗೆ ನಷ್ಟವಾಗುವ ಸಾಧ್ಯತೆಗಳು ಅತಿ ಹೆಚ್ಚಾಗಿ ಕಂಡುಬಂದಿದೆ ಎಂದಿದ್ದಾರೆ.

ಇದರ ಪ್ರಯುಕ್ತ ಸಮಾಜದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿಯಲ್ಲಿ ಮಠದಲ್ಲಿ ಹಾಗೂ ಮಠದ ಆವರಣದಲ್ಲಿ ಧಾರ್ಮಿಕ ಪೂಜಾ ವಿಧಾನಗಳನ್ನು ಹೊರತುಪಡಿಸಿ, ಯಾವುದೇ ಸಭೆ, ಸಮಾರಂಭಗಳನ್ನು, ಸುದ್ದಿಗೋಷ್ಠಿಗಳನ್ನು ನಡೆಸದಂತೆ ಜೂ.1ರಿಂದ ಜೂ.15 ರವೆರೆಗೆ ನಿಷೇಧಾಜ್ಞೆ ಹೊರಡಿಸಲು ಜಿಲ್ಲಾ ಪೊಲೀಸ್ ಅಧೀಕ್ಷಕರ ಮನವಿ ಮೇರೆಗೆ ಆದೇಶ ನೀಡಲಾಗಿದೆ ಎಂದು ತಿಳಿಸಲಾಗಿದೆ.

- - -

-02HRR.03à: ಹರಿಹರದ ಪಂಚಮಸಾಲಿ ಮಠ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಾಸಕ ಪಿ.ಎಂ.ನರೇಂದ್ರಸ್ವಾಮಿ ಸಚಿವ ಸ್ಥಾನ ಸಿಗಲೆಂದು ಆಶಿಸಿ ವಿಶೇಷ ಪೂಜೆ
ಸರ್ಕಾರಿ ಶಾಲೆಗಳನ್ನು ಬಲವರ್ಧನೆಗೊಳಿಸಿ: ಕೆ.ಆರ್.ನಂದಿನಿ