ಮೆಜೆಸ್ಟಿಕ್‌ನಲ್ಲಿ ಸಿಂಗಾಪುರ ಮೀರಿಸುವ ಪ್ರಾಜೆಕ್ಟ್‌ ಮೆಜೆಸ್ಟಿಕ್‌

KannadaprabhaNewsNetwork |  
Published : Mar 11, 2026, 03:30 AM ISTUpdated : Mar 11, 2026, 07:15 AM IST
Bengaluru Majestic

ಸಾರಾಂಶ

ಸಿಂಗಾಪುರವನ್ನು ಮೀರಿಸುವ ರೀತಿಯಲ್ಲಿ ನಗರದ ಮೆಜೆಸ್ಟಿಕ್‌ ಬಸ್‌ ನಿಲ್ದಾಣದಲ್ಲಿ 32 ಎಕರೆ ಜಾಗದಲ್ಲಿ ಸುಸಜ್ಜಿತ ಬಸ್‌ ನಿಲ್ದಾಣವನ್ನು ವಾಣಿಜ್ಯ ಸಂಕೀರ್ಣದೊಂದಿಗೆ ನಿರ್ಮಿಸಲು ‘ಪ್ರಾಜೆಕ್ಟ್‌ ಮೆಜೆಸ್ಟಿಕ್’ ಯೋಜನೆಗೆ ರಾಜ್ಯ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

 ವಿಧಾನ ಪರಿಷತ್‌ :  ಸಿಂಗಾಪುರವನ್ನು ಮೀರಿಸುವ ರೀತಿಯಲ್ಲಿ ನಗರದ ಮೆಜೆಸ್ಟಿಕ್‌ ಬಸ್‌ ನಿಲ್ದಾಣದಲ್ಲಿ 32 ಎಕರೆ ಜಾಗದಲ್ಲಿ ಸುಸಜ್ಜಿತ ಬಸ್‌ ನಿಲ್ದಾಣವನ್ನು ವಾಣಿಜ್ಯ ಸಂಕೀರ್ಣದೊಂದಿಗೆ ನಿರ್ಮಿಸಲು ‘ಪ್ರಾಜೆಕ್ಟ್‌ ಮೆಜೆಸ್ಟಿಕ್’ ಯೋಜನೆಗೆ ರಾಜ್ಯ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಮೆಜೆಸ್ಟಿಕ್‌ ಬಸ್‌ ನಿಲ್ದಾಣ ಜಾಗ 40 ಎಕರೆ ಪ್ರದೇಶ

ಕಾಂಗ್ರೆಸ್‌ ಸದಸ್ಯ ಎಂ. ನಾಗರಾಜು ಅವರು ಮಾಡಿದ ಪ್ರಸ್ತಾಪಕ್ಕೆ ಉತ್ತರಿಸಿದ ಅವರು, ಮೆಜೆಸ್ಟಿಕ್‌ ಬಸ್‌ ನಿಲ್ದಾಣ ಜಾಗ 40 ಎಕರೆ ಪ್ರದೇಶ ಹೊಂದಿದ್ದು, ಈ ಪೈಕಿ ಎಂಟು ಎಕರೆ ಜಾಗವನ್ನು ಮೆಟ್ರೋ ರೈಲು ನಿಲ್ದಾಣಕ್ಕೆ ನೀಡಲಾಗಿದೆ. ಉಳಿದಿರುವ ಕೆಎಸ್‌ಆರ್‌ಟಿಸಿಯ 20 ಎಕರೆ ಹಾಗೂ ಬಿಎಂಟಿಸಿಯ 12 ಎಕರೆ ಜಾಗದಲ್ಲಿ ಸಿಂಗಾಪುರವನ್ನು ಮೀರಿಸುವ ರೀತಿಯಲ್ಲಿ ಎರಡು ನಿಗಮಗಳು ಜಂಟಿಯಾಗಿ ‘ಇಂಟರ್‌ ಮೋಡಲ್ ಟ್ರಾನ್ಸಿಟ್‌ ಹಬ್‌’ ಆಗಿ ಅಭಿವೃದ್ಧಿ ಪಡಿಸಲು ಉದ್ದೇಶಿಸಲಾಗಿದೆ.

ಕಾರ್ಯಾದೇಶ ಪತ್ರ ಸಹ ನೀಡಲಾಗಿದೆ

 ಈ ಯೋಜನೆ ಕೈಗೊಳ್ಳಲು ಸರ್ಕಾರ ಮೂಲಭೂತ ಸೌಕರ್ಯ ಅಭಿವೃದ್ಧಿ ಇಲಾಖೆಯ ನೋಂದಾಯಿತ ಮೆ. ರಿಸರ್ಜಂಟ್‌ ಇಂಡಿಯಾ ಲಿಮಿಟೆಡ್‌ಗೆ ಟೆಂಡರ್‌ ಮೇಲೆ ನೇಮಕಗೊಂಡಿದ್ದಾರೆ. ಈಗಾಗಲೇ ಕಾರ್ಯಾದೇಶ ಪತ್ರ ಸಹ ನೀಡಲಾಗಿದೆ. ಈ ಸಂಸ್ಥೆ ಯೋಜನೆಯನ್ನು ಅನುಷ್ಠಾನಗೊಳಿಸಲು ಬೇಕಾದ ನಕ್ಷೆ, ಯೋಜನೆಯ ರೂಪುರೇಷೆ, ದಾಖಲೆಗಳು, ಅಭಿವೃದ್ಧಿದಾರರನ್ನು ಆಯ್ಕೆಗೊಳಿಸಲು ಬೇಕಾದ ಟೆಂಡರ್‌ ದಸ್ತಾವೇಜನ್ನು ತಯಾರಿಸಲು ಬೇಕಾದ ಸಂಚಾರ ಅಧ್ಯಯನ, ಮಾರುಕಟ್ಟೆ ಅಧ್ಯಯನ, ತಾಂತ್ರಿಕ ಅಧ್ಯಯನ ವರದಿಗಳನ್ನು ಪ್ರಾರಂಭಿಸಿರುತ್ತಾರೆ ಎಂದು ವಿವರಿಸಿದರು.

ಯೋಜನೆಯನ್ನು ಅನುಷ್ಠಾನಗೊಳಿಸಲು ಬೇಕಾದ ಪ್ರಾಥಮಿಕ ಮಾಹಿತಿಗಳನ್ನು ಸಂಗ್ರಹಿಸಿ ಇನ್ಸೆಪ್ಷನ್‌ ರಿಪೋರ್ಟ್ ಹಾಗೂ ಕಾನ್ಸೆಪ್ಟ್‌ ರಿಪೋರ್ಟ್‌ಗಳನ್ನು ತಯಾರಿಸಿದ್ದಾರೆ. ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್‌ಗಳ ಕಾರ್ಯಾಚರಣೆ ಉಳಿಸಿಕೊಂಡು ಯೋಜನೆ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ. ಯೋಜನೆಯ ಮೊತ್ತ ಸೇರಿದಂತೆ ಇನ್ನಿತರ ವಿವರಗಳು ಖಾಸಗಿ ಸಂಸ್ಥೆ ವರದಿ ನೀಡಿದ ನಂತರ ತಿಳಿಯಲಿದೆ ಎಂದು ಹೇಳಿದರು.

ಇದಕ್ಕೂ ಮುನ್ನ ಮಾತನಾಡಿದ ಎಂ. ನಾಗರಾಜು, ಸಾವಿರಾರು ಕೋಟಿ ರು. ಬೆಲೆ ಬಾಳುವ ಜಾಗವನ್ನು ಕೇವಲ ಬಸ್‌ ಸಂಚಾರಕ್ಕೆ ಬಳಸುವುದರಿಂದ ಉಪಯೋಗವಾಗುವುದಿಲ್ಲ. ಈ ಜಾಗದಲ್ಲಿ ಮಾಲ್‌, ಹೊಟೇಲ್‌ ಸೇರಿದಂತೆ ಅತ್ಯಾಧುನಿಕ, ಆಕರ್ಷಕವಾದ, ಅಂತಾರಾಷ್ಟ್ರೀಯ ಮಟ್ಟದ ಬಸ್‌ ನಿಲ್ದಾಣ ನಿರ್ಮಿಸಿದರೆ ಸಾರಿಗೆ ನಿಗಮಗಳಿಗೆ ದೊಡ್ಡ ಆದಾಯ ಬರುತ್ತದೆ. ಆದಷ್ಟು ಬೇಗ ಯೋಜನೆ ಜಾರಿ ಮಾಡಬೇಕೆಂದು ಆಗ್ರಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಗೂಗಲ್‌ ಟಾಪ್‌-10ರಲ್ಲಿ ಕ್ಯಾಂಪ್ಕೋ ಚಾಕೋಲೆಟ್‌ಗೆ ಸಿಕ್ತು 8ನೇ ಸ್ಥಾನ!
ಮೇ 15ರೊಳಗೆ ಸಂಪುಟ ಪುನಾರಚನೆ ಶುಭ ಸುದ್ದಿ: ಶಾಸಕ ನಾರಾಯಣಸ್ವಾಮಿ