ಡಂಬಳ: ಮಕ್ಕಳು ಒಳ್ಳೆಯ ಶಿಕ್ಷಣ ಪಡೆದು ಉತ್ತಮ ಬದುಕನ್ನು ನಡೆಸಬೇಕಾಗಿದೆ. ಉತ್ತಮ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು. ಪಾಲಕರು ತಮ್ಮ ಮಕ್ಕಳ ಜೊತೆಗೆ ಪ್ರೀತಿಯಿಂದ ಮಾತನಾಡಬೇಕು. ಆ ಮೂಲಕ ಮಕ್ಕಳಿಗೆ ಉತ್ತಮ ಕಲಿಕಾ ವಾತಾವರಣ ನಿರ್ಮಾಣ ಮಾಡಬೇಕೆನ್ನುವ ಹಿನ್ನೆಲೆಯಲ್ಲಿ ಸರಕಾರಿ ಅನುದಾನದಡಿ ಪ್ರೊಜೆಕ್ಟರನ್ನು ಶಾಲೆಯಲ್ಲಿ ಅಳವಡಿಸಲಾಗಿದೆ ಎಂದು ಮುಖ್ಯೋಪಾಧ್ಯಾಯ ಬಿ.ಜೆ. ಪಾಟೀಲ ಹೇಳಿದರು.
ಸಿಆರ್‌ಪಿ ಮೃತ್ಯುಂಜಯ್ಯ ಪೂಜಾರ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಖಾಸಗಿ ಶಾಲೆಗಳಿಗೆ ಸರ್ಕಾರಿ ಶಾಲೆಗಳು ಪೈಪೋಟಿ ನೀಡುವಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗಿದ್ದು, ಈ ಬಗ್ಗೆ ಎಲ್ಲ ಶಾಲಾ ಶಿಕ್ಷಕರು ಗಮನ ಹರಿಸಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವುದಕ್ಕೆ ಮುಂದಾಗಬೇಕು. ಸರ್ಕಾರಿ ಶಾಲೆಗಳು ಇಂದು ಖಾಸಗಿ ಶಾಲೆಗಳಿಗಿಂತ ಕಮ್ಮಿ ಇಲ್ಲವೆಂಬಂತೆ ಮಕ್ಕಳಿಗೆ ಶಿಕ್ಷಣ ನೀಡುತ್ತಿದೆ. ಇದರಲ್ಲಿ ಶಿಕ್ಷಕರ ಪಾತ್ರವೇ ಅತೀ ಮುಖ್ಯ. ಇಂದು ಶಿಕ್ಷಣವೂ ವ್ಯಾಪಾರೀಕರಣವಾಗಿದೆ. ಪೋಷಕರು ತಮ್ಮ ಮಕ್ಕಳು ಕೇವಲ ಅಂಕಗಳಿಕೆಗೆ ಸೀಮಿತ ಮಾಡುತ್ತಿದ್ದಾರೆ. ಪೋಷಕರು ಬಣ್ಣದ ಶಾಲೆಗಳಿಗೆ ಮಾರು ಹೋಗಿ ಸರ್ಕಾರಿ ಶಾಲೆಗಳನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಹಲವಾರು ಯೋಜನೆ, ಅನುದಾನ ಜಾರಿಗೆ ತರುತ್ತಿದೆ ಇದರ ಸದ್ಬಳಕೆ ಮಾಡಿಕೊಳ್ಳಲು ಮುಂದಾಗಬೇಕೆಂದು ಹೇಳಿದರು.
ಎಸ್‌ಡಿಎಂಸಿ ಅಧ್ಯಕ್ಷ ಮಾರುತಿ ಕಾತರಕಿ ಪ್ರೊಜೆಕ್ಟರ್ ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ಪಾತಿಮಾ ನದಾಫ, ಕಾಶಿನಾಥ ಮಾದರ, ಮರಿಯಪ್ಪ ದೊಡ್ಡಮನಿ, ಶೋಭಾ ತಳಗೇರಿ, ಶಂಕ್ರಮ್ಮ ತಳವಾರ, ಜಂದಿಪೀರಾ ಸರಕವಾಸ, ರೂಪಾ ಹಡಪದ, ರಮೇಶ ಚವಡಕಿ, ರಾಮಪ್ಪ ಗೋಣಿಸ್ವಾಮಿ, ಮಹೇಶ ಗುಡ್ಡದ, ಶಿಕ್ಷಕರಾದ ಎಮ್.ಎಸ್. ಉಮಾಲೋಟಿ, ಯು.ಆರ್. ಗಡ್ಡಿ, ಟಿ.ಸಿ. ಮಾಗಿ, ಎಲ್.ಎನ್. ಸಣ್ಣಯರಾಶಿ, ಎಸ್.ಎಸ್. ಸೊರಟೂರ, ಆರ್.ಬಿ. ಪೂಜಾರ, ಎಸ್.ಬಿ. ನಿಂಗಾಪುರ ವಿದ್ಯಾರ್ಥಿನಿಯರು ಇದ್ದರು.