ಕನ್ನಡಪ್ರಭ ವಾರ್ತೆ, ದಾವಣಗೆರೆ
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1 ಎಕರೆ ಬತ್ತ ಬೆಳೆಯಲು ರೈತರು ₹30 ಸಾವಿರ, ಮೆಕ್ಕೆಜೋಳಕ್ಕೆ ₹10 ಸಾವಿರ ಖರ್ಚು ಮಾಡುತ್ತಾರೆ. ಆದರೆ, ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರೂ ಬೆಳೆ ನಷ್ಟ ಪರಿಹಾರ ನೀಡಲೇ ಸರ್ಕಾರ ಸತಾಯಿಸುತ್ತಿದೆ. ಕಂದಾಯ ಸಚಿವ ಕೃಷ್ಣ ಭೈರೇಗೌಡ ಸಮೀಕ್ಷೆಗೆಂದು ಜಗಳೂರು ತಾಲೂಕಿಗೆ ಬಂದು ಆಟಕ್ಕುಂಟು, ಲೆಕ್ಕಕ್ಕಿಲ್ಲ ಎಂಬಂತೆ ಬೆಳೆ ಹಾನಿ ಪರಿಶೀಲಿಸಿದ್ದಾರೆ ಎಂದರು.
ನೈತಿಕತೆ ಇಲ್ಲ:ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬಗ್ಗೆ ಮಾತನಾಡುವ ನೈತಿಕತೆ ರಮೇಶ ಜಾರಕಿಹೊಳಿ ಸೇರಿದಂತೆ ಮೂರ್ನಾಲು ಮಂದಿಗೆ ಇಲ್ಲ. ವಿಜಯಪುರದಲ್ಲಿ ಹೊಂದಾಣಿಕೆ ರಾಜಕಾರಣ ಮಾಡಿದ್ದು ನೀವೇ ಹೊರತು, ವಿಜಯೇಂದ್ರ ಅಲ್ಲ. ಜಾರಕಿಹೊಳಿ ಬಂದಿರುವುದು ಕಾಂಗ್ರೆಸ್ ಪಕ್ಷ ನಿಷ್ಟೆ ಇಲ್ಲದೇ, ಉಚ್ಛಾಟನೆಗೊಂಡು ಜೆಡಿಎಸ್‌ಗೆ ಹೋಗಿದ್ದರು. ನಂತರ ಬಿ.ಎಸ್.ಯಡಿಯೂರಪ್ಪನವರ ಕೈ-ಕಾಲು ಕಟ್ಟಿಕೊಂಡು, ಬಿಜೆಪಿಗೆ ಬಂದರು. ಕೆಲವರು ವಿಜಯೇಂದ್ರಗೆ ಟೀಕೆ ಮಾಡುವುದೇ ಬಾಯಿ ಚಟಕ್ಕೆ ಎಂದು ಜರಿದರು.
ಪಕ್ಷದ ಯುವ ಮುಖಂಡರಾದ ಪ್ರವೀಣ ಜಾಧವ್, ರಾಜು ವೀರಣ್ಣ, ಮಂಜುನಾಥ ಪೈಲ್ವಾನ್, ಧರ್ಮರಾಜ್, ಕೆ.ಎನ್.ವೆಂಕಟೇಶ ಇದ್ದರು.- - -
-29ಕೆಡಿವಿಜಿ4: