ವೇತನ ನೀಡುವ ಭರವಸೆ: ಪ್ರತಿಭಟನೆ ಸ್ಥಗಿತ

KannadaprabhaNewsNetwork |  
Published : Mar 02, 2025, 01:19 AM IST
ಕಾರಟಗಿಯಲ್ಲಿ ನೀರಾವರಿ ನಿಗಮದ ಕಚೇರಿಯ ಮುಂದೆ ಪ್ರತಿಭಟನಾನಿರತ ಗ್ಯಾಂಗ್‌ಮನ್‌ಗಳೊಂದಿಗೆ ಎಂಜಿನಿಯರ್ ವೆಂಕಟೇಶ್ವರ ಭೇಟಿ ನೀಡಿ ಪ್ರತಿಭಟನೆ ಕೈಬಿಡುವಂತೆ ಮನವೋಲಿಸಿದರು. | Kannada Prabha

ಸಾರಾಂಶ

ತುಂಗಭದ್ರಾ ನೀರಾವರಿ ಯೋಜನೆಯ ಟಾಸ್ಕ್‌ಪೋರ್ಸ್ ಕಾರ್ಮಿಕರು ನಾಲ್ಕು ತಿಂಗಳ ವೇತನಕ್ಕಾಗಿ ನಡೆಸುತ್ತಿದ್ದ ಪ್ರತಿಭಟನೆಯನ್ನು ವೇತನ ನೀಡುವ ಭರವಸೆ ಬಳಿಕ ಶನಿವಾರ ತಾತ್ಕಾಲಿಕವಾಗಿ ಅಂತ್ಯಗೊಳಿಸಿದ್ದಾರೆ.

ಕಾರಟಗಿ:

ತುಂಗಭದ್ರಾ ನೀರಾವರಿ ಯೋಜನೆಯ ಟಾಸ್ಕ್‌ಪೋರ್ಸ್ ಕಾರ್ಮಿಕರು ನಾಲ್ಕು ತಿಂಗಳ ವೇತನಕ್ಕಾಗಿ ನಡೆಸುತ್ತಿದ್ದ ಪ್ರತಿಭಟನೆಯನ್ನು ವೇತನ ನೀಡುವ ಭರವಸೆ ಬಳಿಕ ಶನಿವಾರ ತಾತ್ಕಾಲಿಕವಾಗಿ ಅಂತ್ಯಗೊಳಿಸಿದ್ದಾರೆ.

ಇಲ್ಲಿನ ನೀರಾವರಿ ನಿಗಮದ ನಂ.೨ರ ಕಾಲುವೆ ಉಪವಿಭಾಗದ ಎಂಜನಿಯರ್ ಕಚೇರಿಯ ಮುಂದೆ ವಿತರಣಾ ಕಾಲುವೆ ೩೨ರ ವ್ಯಾಪ್ತಿಯ ಕಾರ್ಯನಿರ್ವಹಿಸುವ ೭೦ ಜನರು ೪ ತಿಂಗಳ ವೇತನಕ್ಕಾಗಿ ಆಗ್ರಹಿಸಿ ಹಮ್ಮಿಕೊಂಡ ಪ್ರತಿಭಟನೆಯನ್ನು ಶನಿವಾರ ಸಂಜೆ ಕೈಬಿಟ್ಟರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಎಇಇ ವೆಂಕಟೇಶ್ವರ ಪ್ರತಿಭಟನೆ ನಿರತರಿಗೆ ನಿಮ್ಮ ವೇತನ ಪಾವತಿಯಾಗಲಿದೆ. ರೈತರಿಗೆ ಸಮಸ್ಯೆಯಾಗದಂತೆ ಕೆಲಸ ಮಾಡಿ. ಈಗಾಗಲೇ ಎಡಿಜಿ ಅನುಮತಿ ದೊರೆತಿದೆ. ಧಾರವಾಡಡದ ವಿಭಾಗಿ ಕಚೇರಿಗೆ ಪತ್ರ ಕಳುಹಿಸಲಾಗಿದ್ದು, ಶೀಘ್ರವೇ ವೇತನ ಪಾವತಿಯಾಗಲಿದೆ ಎಂದು ಭರವಸೆ ನೀಡಿದರು.

ವೇತನ ಬಿಡುಗಡೆಗಾಗಿ ಕಾರ್ಮಿಕರು ಹಲವು ಭಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜವಾಗಿರಲಿಲ್ಲ. ಹೀಗಾಗಿ ಪ್ರತಿಭಟನೆ ನಡೆಸಿದ್ದರು. ಇವರಿಗೆ ರೈತರು ಸಹ ಬೆಂಬಲಿಸಿದ್ದರು.

ಈ ವೇಳೆ ಗ್ಯಾಂಗ್‌ಮನ್‌ಗಳಾದ ಮಹಿಬೂಬ್ ಮ್ಯಾಗಳಮನಿ, ಶಿವಕುಮಾರ, ಬಸವರಾಜ ಆಡವಿಭಾವಿ, ಶ್ರೀಧರಗೌಡ, ದುರುಗಪ್ಪ, ಶಿವುಕುಂಬಾರ, ರಮೇಶ ಹರಿಜನ, ಯಮನೂರಪ್ಪ ಚಲುವಾದಿ ಸೇರಿದಂತೆ ಇನ್ನಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಯ್ಯಪ್ಪನ ಮಾಲೆ ಧರಿಸಿದ ಬಾಲಕನ ಮೇಲೆ ಶಿಕ್ಷಕ ಹಲ್ಲೆ!
ತಂದೆಗೆ ಕಿರುಕುಳ ನೀಡದಂತೆ ಚೈತ್ರಾ ಕುಂದಾಪುರಗೆ ಆದೇಶ