ಕಾರಟಗಿ: ರಾಜ್ಯದಲ್ಲಿ ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಪಂಚ ಗ್ಯಾರಂಟಿ ಯೋಜನೆಗಳು ಸಹಕಾರಿಯಾಗಿವೆ. ಸ್ವಸಹಾಯ ಗುಂಪಿನ ಸದಸ್ಯರು ಗ್ಯಾರಂಟಿ ಯೋಜನೆಗಳ ಬಗ್ಗೆ ಹೆಚ್ಚು ಪ್ರಚಾರ ಮಾಡಬೇಕು ಎಂದು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ದೇವಪ್ಪ ಭಾವಿಕಟ್ಟಿ ಹೇಳಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಸದಸ್ಯ ಸೋಮನಾಥ ದೊಡ್ಡಮನಿ ಮಾತನಾಡಿ, ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಬಡ ಮಹಿಳೆಯರು, ವಿದ್ಯಾರ್ಥಿನಿಯರಿಗೆ ಶಕ್ತಿ ಯೋಜನೆಯಿಂದ ಅನುಕೂಲವಾಗಿದೆ. ಮಹಿಳೆಯರು ಸ್ವಂತ ಕಿರು ಉದ್ಯಮ ಆರಂಭಿಸಲು ಗೃಹಲಕ್ಷ್ಮೀ ಯೋಜನೆ ನೆರವಾಗಿದೆ ಎಂದು ಹೇಳಿದರು.
ತಾಪಂ ಇಒ ಹಾಗೂ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ಸದಸ್ಯ ಕಾರ್ಯದರ್ಶಿ ಲಕ್ಷ್ಮೀದೇವಿ ಮಾತನಾಡಿ, ಪ್ರತಿಯೊಬ್ಬ ಮಹಿಳೆ ಪ್ರಜ್ಞಾವಂತರಾಗಿ ಕಾನೂನಿನ ತಿಳಿವಳಿಕೆ ಹಾಗೂ ಅರಿವು ಹೊಂದಿದರೆ ಮಹಿಳಾ ಸಬಲೀಕರಣಕ್ಕೆ ನಾಂದಿ ಆಗಬಲ್ಲದು ಎಂದರು.ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯೆ ದೀಪಾ ಕುಮಾರ್ ರಾಥೋಡ್ ಮಾತನಾಡಿದರು. ತಾಲೂಕು ಅನುಷ್ಠಾನ ಸಮಿತಿ ಸದಸ್ಯ ಶಿವಕುಮಾರ್ ಗೋನಾಳ್, ಸ್ವಸಹಾಯ ಗುಂಪಿನ ಸದಸ್ಯೆ ವೀರಮ್ಮ, ಅಂಜಲಿ ಅವರು ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಕುರಿತು ಮಾತನಾಡಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಜಿಲ್ಲಾ ಸಮಿತಿಯ ಉಪಾಧ್ಯಕ್ಷ ನಾಗರಾಜ್ ಅರಳಿ, ಸದಸ್ಯೆ ಶಕುಂತಲಾ ಸಹಾಯಕ ನಿರ್ದೇಶಕಿ ವೈ. ವನಜಾ, ತಾಲೂಕು ಅನುಷ್ಠಾನ ಸಮಿತಿಯ ಸದಸ್ಯ ವೈ. ರಾಮಕೃಷ್ಣ, ರೇಣುಕಮ್ಮ, ಮುತ್ತಣ್ಣ, ಚಂದ್ರಶೇಖರ ಉಪ್ಪಾರ ಇದ್ದರು.