ಹಾವೇರಿ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಮಹಿಳೆಯರಿಗಾಗಿಯೇ ಆಯೋಜಿಸಿದ್ದ ವಿವಿಧ ಮನರಂಜನಾ ಕ್ರೀಡೆಗಳು, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಮಹಿಳಾ ಮಣಿಗಳು ಪಾಲ್ಗೊಂಡು ಸಂಭ್ರಮಿಸಿದರು.
5 ಕಿಮೀ ರಸ್ತೆ ಓಟದ ಸ್ಪರ್ಧೆಯಲ್ಲಿ ಧಾರವಾಡದ ಶಿಲ್ಪಾ ಹೊಸಮನಿ, ಸುಪ್ರಿತಾ ಸಿದ್ದಿ, ಕಾರವಾರದ ಸುಪ್ರಿತಾ ಚನ್ನಯ್ಯ, ಹಾವೇರಿಯ ಸಾಕ್ಷಿ ಗುಡಿಹಿಂದ್ಲರ, ಬ್ಯಾಡಗಿಯ ಅರ್ಪಿತಾ ಮಡಿವಾಳರ, ಸೃಷ್ಟಿ ತಿಳವಳ್ಳಿ, ಐಶ್ವರ್ಯ ಬೆನ್ನೂರ, ಅರ್ಚನಾ ಲಮಾಣಿ, ಸಂಜನಾ ರೊಟ್ಟಿ, ಈರಮ್ಮ ಗೌರಕ್ಕನವರ ಕ್ರಮವಾಗಿ ಬಹುಮಾನಗಳನ್ನು ಪಡೆದುಕೊಂಡರು. ಅದೇರೀತಿ 3 ಕಿಮೀ ಓಟದ ಸ್ಪರ್ಧೆಯಲ್ಲಿ ಧಾರವಾಡದ ಶ್ರೇಯಾ ಘಂಟಿ, ರಾಜಶ್ರೀ ಮರೇದ, ಸವಣೂರಿನ ಲಕ್ಷ್ಮಿ ಹಡಪದ, ಸಾವಿತ್ರಿ ಮಿರಾಶಿ, ಪ್ರೀಯಾ ವಾರ, ವೈದೇಹಿ, ಅನನ್ಯಾ ಕಮಾಟಿ, ನೇತ್ರಾ ಮಲ್ಲೂರ, ಚಂದನಾ ಮರಡೇರ, ನಿವೇದಿತಾ ಕೊಪ್ಪದ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಹೀಗೆ ಬಹುಮಾನ ಪಡೆದುಕೊಂಡರು.ಗೋಣಿ ಚೀಲ ಸ್ಪರ್ಧೆ: 30 ವರ್ಷದೊಳಗಿನ ಮಹಿಳೆಯರ 100 ಮೀ ಓಟದ ಸ್ಪರ್ಧೆಯಲ್ಲಿ ಚಂದ್ರಕಲಾ ಹೊಸಮನಿ, ನೀಲಮ್ಮ, ರೇಖಾ ಜಾಡರ, ಗೋಣಿಚೀಲ ಓಟದ ಸ್ಪರ್ಧೆಯಲ್ಲಿ ಲಕ್ಷ್ಮಿ ಜಾಡರ, ಶ್ರೇಯಾ ಪಿ.ಜೆ., ನೀಲಮ್ಮ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದುಕೊಂಡರು. 30 ವರ್ಷ ಮೇಲ್ಪಟ್ಟ ಮಹಿಳೆಯರ ವಿಭಾಗದಲ್ಲಿ 100 ಮೀ ಓಟದ ಸ್ಪರ್ಧೆಯಲ್ಲಿ ಶೋಭಾ ಲಮಾಣಿ, ಚೇತನಾ ಕಾರಗಿ, ರೇಣುಕಾ ನಾಯಕ, ಗೋಣಿಚೀಲ ಓಟದ ಸ್ಪರ್ಧೆಯಲ್ಲಿ ಶಾರದಾ ಲಮಾಣಿ, ವಿಶಾಲಾಕ್ಷಿ ಕಮತದ, ಭಾರತಿ ಕುರುವತ್ತಿಮಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.ಮನೋರಂಜನಾ ಸ್ಪರ್ಧೆ: 18 ವರ್ಷ ಮೇಲ್ಪಟ್ಟ ಮಹಿಳೆಯರ ಮನೋರಂಜನಾ ಸ್ಪರ್ಧೆಯ ಬಾಂಬ್ ಇನ್ ದ ಸಿಟಿ ಆಟದಲ್ಲಿ ಲಕ್ಷ್ಮೀ ಜಾಡರ, ನೀಲಮ್ಮ, ಭಾಗ್ಯಾ ಜನ್ನು ವಿಜೇತರಾಗಿದ್ದಾರೆ. ಹಗ್ಗ ಜಗ್ಗಾಟದ ಸ್ಪರ್ಧೆಯಲ್ಲಿ ಮಂಜುಳಾ ಬಿ., ಅರ್ಪಿತಾ ಪಿ.ಎಂ., ಶೋಭಾ ಲಮಾಣಿ, ಅಶ್ವಿನಿ ಎಂ.ಕೆ., ಶೋಭಾ ಸಿ., ರೇಖಾ ಎಂ.ಜೆ, ನೀಲಮ್ಮ, ಸಂಜನಾ ಎಂ.ಎಚ್, ರತ್ನಾ ಟಿ., ರಕ್ಷತಾ ಬಿ.ನೇತೃತ್ವದ ತಂಡ ಪ್ರಥಮ ಸ್ಥಾನ ಪಡೆದಿದೆ. ಅದೇ ರೀತಿ ಅನುರಾಧಾ ಪೂಜಾರ, ಕಮಲಮ್ಮ ಕೆ.ಎನ್., ಗಾನವಿ ಪಾಟೀಲ, ಪ್ರತಿಭಾ ಬೆಂಡಿಗೇರಿ, ಸಂಗೀತಾ ಪೂಜಾರ, ಪಲ್ಲವಿ ಪಾಟೀಲ, ಲಕ್ಷ್ಮೀ ಎಂ., ಎಸ್ಎಚ್. ಸೊರಟೂರ, ಸೌಜನ್ಯ, ಚೈತ್ರಾ ಬಾಯಿ ನೇತೃತ್ವದ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು.ಸಾಂಸ್ಕೃತಿಕ ಸ್ಪರ್ಧೆ: 18 ವರ್ಷ ಮೇಲ್ಪಟ್ಟ ಸಾಂಸ್ಕೃತಿಕ ವಿಭಾಗದ ಗುಂಪು ನೃತ್ಯ ಸ್ಪರ್ಧೆಯಲ್ಲಿ ರಾಣಿಬೆನ್ನೂರಿನ ವರ್ಷಿತಾ ತಂಡ ರೈತ ಗೀತೆ ಹಾಡಿ ಪ್ರಥಮ ಸ್ಥಾನ ಪಡೆದುಕೊಂಡರೆ, ಪೂರ್ವಿಕಾ ನೇತೃತ್ವದ ತಂಡ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು.