ದೊಡ್ಡಬಳ್ಳಾಪುರ: ರಂಗ ಕಲೆಗಳ ಉತ್ತೇಜನಕ್ಕೆ ಎಲ್ಲ ವಲಯಗಳ ಒತ್ತಾಸೆ ಅಗತ್ಯವಾಗಿದೆ. ಸರ್ಕಾರದ ಸಂಸ್ಥೆಗಳ ಜತೆಗೆ ಜನಸಂಘಟನೆಗಳೂ ಕಲಾ ಪ್ರಜ್ಞೆಯ ಜೀವಂತಿಕೆಯ ಆಶಯವನ್ನು ಪ್ರತಿನಿಧಿಸುವುದು ಅಗತ್ಯ ಎಂದು ಬೆಂ.ಗ್ರಾ. ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎನ್.ಕೃಷ್ಣಪ್ಪ ಹಙೇಳಿದರು.
ರಂಗ ಕಲೆಗಳ ಉತ್ತೇಜನಕ್ಕೆ ಸರ್ಕಾರದ ಜತೆಗೆ ಸ್ಥಳೀಯ ಆಡಳಿತ ವ್ಯವಸ್ಥೆ ಹಾಗೂ ಸಂಘಟನೆಗಳ ಸಹಕಾರ ಮುಖ್ಯ. ಸಮಕಾಲೀನ ಅಗತ್ಯತೆಗಳಿಗೆ ಪೂರಕವಾಗಿ ರಂಗ ಚಿಂತನೆಗಳು ವಿಸ್ತರಣೆಯಾಗುವ ಅಗತ್ಯವಿದೆ ಎಂದು ಅವರು ತಿಳಿಸಿದರು.
ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಅಧ್ಯಕ್ಷ ಡಾ.ಹುಲಿಕಲ್ ನಟರಾಜ್ ಮಾತನಾಡಿ, ಹೊಸಪೀಳಿಗೆಯ ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ರಂಗ ಅಖಾಡ ಪ್ರವೇಶಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದ ಅವರು, ಸ್ಥಳೀಯ ಹಂತದಲ್ಲಿ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಅನೇಕ ಯೋಜನೆಗಳಿವೆ. ಅವುಗಳ ಕುರಿತ ಅರಿವು, ಸಹಭಾಗಿಯಾಗುವ ಉತ್ಸಾಹ ಮುಖ್ಯವಾಗಿದೆ ಎಂದರು.ಬೆಂ.ಗ್ರಾ. ಜಿಲ್ಲಾ ರಂಗಭೂಮಿ ಕಲಾವಿದರ ಸಂಘದ ಗೌರವಾಧ್ಯಕ್ಷ ಡಾ.ಕೆ.ಎಂ.ಕೃಷ್ಣಮೂರ್ತಿ, ದೊಡ್ಡಬಳ್ಳಾಪುರ ಸಾಂಸ್ಕೃತಿಕ ಕಲಾ ಚಟುವಟಿಕೆಗಳಿಗೆ ಹೆಸರಾಗಿದ್ದು, ಇಲ್ಲಿನ ನಾಟಕ, ಸಾಂಸ್ಕೃತಿಕ ಪರಂಪರೆ ಅನನ್ಯವಾಗಿದೆ. ಬಹುದೊಡ್ಡ ನಾಟಕ ಪರಂಪರೆ ಹಾಗೂ ಕಲಾವಿದ ಬಳಗವನ್ನು ಹೊಂದಿರುವ ದೊಡ್ಡಬಳ್ಳಾಪುರದಲ್ಲಿ ನಾಡಿನ ಅಪ್ರತಿಮ ಕಲಾವಿದರನೇಕರು ತಮ್ಮ ಪ್ರತಿಭಾ ಪ್ರದರ್ಶನವನ್ನು ನೀಡಿರುವುದು ಇತಿಹಾಸ. ಕಲಾ ಕ್ಷೇತ್ರದಲ್ಲಿ ಮಹಿಳೆಯರ ಕೊಡುಗೆ ಆಪಾರ ಎಂದರು.
ನಾಟಕ ಅಕಾಡೆಮಿ ಪುರಸ್ಕಾರ ವಿಜೇತ ಕಲಾವಿದ ಕೆ.ಪಿ.ಪ್ರಕಾಶ್, ರಂಗಭೂಮಿ ದಿನಾಚರಣೆಯ ಸಂದೇಶ ಓದಿದರು.
8 ಕಲಾವಿದರಿಗೆ ರಂಗ ಕೌಸ್ತುಭ ಬಿರುದು:
ಸುಗಮ ಸಂಗೀತ, ಭಜನೆ, ಜನಪದ ಗೀತೆ, ಸೋಬಾನೆ ಪದಗಳು, ಚಲನಚಿತ್ರ ಗೀತೆಗಳು, ಏಕಪಾತ್ರಾಭಿನಯ, ಭರತನಾಟ್ಯ, ಕಿರುನಾಟಕ ಸೇರಿದಂತೆ ಅನೇಕ ಕಲಾ ಪ್ರದರ್ಶನಗಳು ನಡೆದವು.
ದೊಡ್ಡಬಳ್ಳಾಪುರದ ಕನ್ನಡ ಜಾಗೃತ ಭವನದಲ್ಲಿ ಬೆಂ.ಗ್ರಾ ಜಿಲ್ಲಾ ರಂಗಭೂಮಿ ಕಲಾವಿದರ ಸಂಘದಿಂದ ನಡೆದ ವಿಶ್ವ ರಂಗಭೂಮಿ ದಿನಾಚರಣೆ ಕಾರ್‍ಯಕ್ರಮದಲ್ಲಿ ಹಿರಿಯ ಕಲಾವಿದರಿಗೆ ರಂಗ ಕೌಸ್ತುಭ ಬಿರುದು ನೀಡಿ ಅಭಿನಂದಿಸಲಾಯಿತು.27ಕೆಡಿಬಿಪಿ2-