ಕನ್ನಡಪ್ರಭ ವಾರ್ತೆ ಗುಡ್ಡೆ ಹೊಸೂರು
ಗುಡ್ಡೆಹೊಸೂರಿನಲ್ಲಿ ನಡೆದ ಹಾಲು ಉತ್ಪಾದಕರ ಸಹಕಾರ ಸಂಘದ ನಿಯಮಿತ 2023 -24 ನೇ ಸಾಲಿನ ವಾರ್ಷಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಗುಡ್ಡೆಹೊಸೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ಬಿ ಎಂ ಸಾಗರ್, ನೆರೆದಿದ್ದ ಸಂಘದ ಸದಸ್ಯರ ಅಹವಾಲುಗಳನ್ನು ಆಲಿಸಿ ಸೂಕ್ತ ಪರಿಹಾರ ಸೂಚಿಸಿದರು. ಅತಿ ಹೆಚ್ಚು ಹಾಲು ಉತ್ಪಾದನೆ ಮಾಡಿದ ಸಂಘದ ಸದಸ್ಯರು ಹಾಗೂ ಗುಡ್ಡೆ ಹೊಸೂರು, ವ್ಯಾಪ್ತಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಶಾಲಾ ಮಕ್ಕಳಿಗೆ ಬಹುಮಾನ ವಿತರಿಸಿ ಸನ್ಮಾನಿಸಲಾಯಿತು.ಹಾಸನ ಹಾಲು ಒಕ್ಕೂಟದ ನಿರ್ದೇಶಕರಾದ ಹೇಮಂತ್ ಕುಮಾರ್ ಭಾಗವಹಿಸಿದ್ದರು. ಗುಡ್ಡೆಹೊಸೂರು ಹಾಲು ಒಕ್ಕೂಟದ ಉಪಾಧ್ಯಕ್ಷೆ ಎನ್. ಪಿ. ಸುಲೋಚನ, ನಿರ್ದೇಶಕರಾದ ಧನಪಾಲ್, ಯತೀಶ್ ಮೋಹನ ಕುಮಾರ್, ಪಳಂಗಪ್ಪ, ಗುರುಪ್ರಸಾದ್, ಕಾಶಿ, ಶುಭ ಶೇಖರ, ಅಭಿಷೇಕ್, ಕಮಲ, ಕಮಲಾಕ್ಷಿ, ಬಸಮ್ಮ ಮತ್ತಿತರರು ಇದ್ದರು.