ದಾರಿಯಲ್ಲಿ ಮತಾಂತರ ಪ್ರಚೋದನೆಯ ಭಿತ್ತಿಪತ್ರಗಳು

KannadaprabhaNewsNetwork |  
Published : Feb 11, 2026, 02:00 AM IST
10ಎಚ್ಎಸ್ಎನ್14 : ತಾಲೂಕಿನ ಹಾಸನ ರಸ್ತೆಯ ಮಲ್ಲಿಕಾರ್ಜುನಪುರ  ಗೇಟ್   ಬಳಿ  ಬಜರಂಗದಳ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. | Kannada Prabha

ಸಾರಾಂಶ

ವಿಶ್ವ ಹಿಂದೂ ಪರಿಷತ್ ಬಜರಂಗದಳ ತಾಲೂಕು ಅಧ್ಯಕ್ಷ ಭರತ್ ಮಾತನಾಡಿ, ಹಿಂದೂ ಧರ್ಮೀಯರನ್ನು ಮತಾಂತರ ಮಾಡುವ ಉದ್ದೇಶದಿಂದ ಯೇಸು ಬಗ್ಗೆ ಬರೆದಿರುವ ಪುಸ್ತಕಗಳನ್ನ ರಸ್ತೆಯುವುದಕ್ಕೂ ಎಸೆದು ಧರ್ಮಸ್ಥಳ ಪಾದಯಾತ್ರೆಗಳ ಗಮನವನ್ನು ಬೇರೆಡೆ ಸೆಳೆಯುವ ಹುನ್ನಾರು ನಡೆಸುತ್ತಿದ್ದಾರೆ. ಯೇಸುವಿನ ಪುಸ್ತಕಗಳನ್ನು ರಸ್ತೆ ಯುದ್ಧಕ್ಕೂ ಹಾಕಿ ಮತಾಂತರಕ್ಕೆ ಹುನ್ನಾರು ನಡೆಸುತ್ತಿರುವ ಕಿಡಿಗೇಡಿಗಳನ್ನು ಪೊಲೀಸ್ ಇಲಾಖೆ ಗುರುತಿಸಿ ಸೂಕ್ತವಾದ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಬೇಲೂರು

ತಾಲೂಕಿನ ಹಾಸನ ರಸ್ತೆಯ ಮಲ್ಲಿಕಾರ್ಜುನಪುರ ಗೇಟ್ ಬಳಿ ಕ್ರಿಶ್ಚಿಯನ್ ಮಿಷನರಿ ಕಾರ್ಯಕರ್ತರು ಧರ್ಮಸ್ಥಳಕ್ಕೆ ತೆರಳುತ್ತಿರುವ ಹಿಂದೂ ಪಾದಚಾರಿಗಳ ಗಮನ ಸೆಳೆಯಲು ಮತಾಂತರಕ್ಕೆ ಪ್ರಚೋದನೆ ನೀಡುವ ಬಿತ್ತಿ ಪತ್ರಗಳನ್ನು ದಾರಿ ಉದ್ದಕ್ಕೂ ಎಸೆದು ಹೋಗಿದ್ದಾರೆ ಎಂದು ಬಜರಂಗದಳ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.ವಿಶ್ವ ಹಿಂದೂ ಪರಿಷತ್ ಬಜರಂಗದಳ ತಾಲೂಕು ಅಧ್ಯಕ್ಷ ಭರತ್ ಮಾತನಾಡಿ, ಹಿಂದೂ ಧರ್ಮೀಯರನ್ನು ಮತಾಂತರ ಮಾಡುವ ಉದ್ದೇಶದಿಂದ ಯೇಸು ಬಗ್ಗೆ ಬರೆದಿರುವ ಪುಸ್ತಕಗಳನ್ನ ರಸ್ತೆಯುವುದಕ್ಕೂ ಎಸೆದು ಧರ್ಮಸ್ಥಳ ಪಾದಯಾತ್ರೆಗಳ ಗಮನವನ್ನು ಬೇರೆಡೆ ಸೆಳೆಯುವ ಹುನ್ನಾರು ನಡೆಸುತ್ತಿದ್ದಾರೆ. ಯೇಸುವಿನ ಪುಸ್ತಕಗಳನ್ನು ರಸ್ತೆ ಯುದ್ಧಕ್ಕೂ ಹಾಕಿ ಮತಾಂತರಕ್ಕೆ ಹುನ್ನಾರು ನಡೆಸುತ್ತಿರುವ ಕಿಡಿಗೇಡಿಗಳನ್ನು ಪೊಲೀಸ್ ಇಲಾಖೆ ಗುರುತಿಸಿ ಸೂಕ್ತವಾದ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.ಫೆಬ್ರವರಿ 15ರಂದು ಮಹಾಶಿವರಾತ್ರಿಯ ಹಿನ್ನೆಲೆಯಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಧರ್ಮಸ್ಥಳ ಸೇರಿದಂತೆ ವಿವಿಧ ಶಿವನ ದೇವಾಲಯಕ್ಕೆ ಪಾದಯಾತ್ರೆ ತೆರಳುತ್ತಾರೆ. ಶಿವರಾತ್ರಿ ಸಮಯದಲ್ಲಿ ಶಿವನ ದರ್ಶನ ಮಾಡಿದರೆ ಪುಣ್ಯ ಲಭಿಸುತ್ತದೆ ಎಂಬುದು ಹಿಂದೂ ಸಂಪ್ರದಾಯಗಳಲ್ಲಿ ಒಂದಾಗಿದೆ. ಆದರೆ ಪಾದಯಾತ್ರೆ ಸಂದರ್ಭ ನೋಡಿಕೊಂಡು ಹೆದ್ದಾರಿ ರಸ್ತೆಯಲ್ಲಿ ವ್ಯಕ್ತಿ ಪತ್ರಗಳನ್ನು ಎಸೆದು ಹೋಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡುವ ಉದ್ದೇಶದಿಂದ ಈ ರೀತಿ ಮಾಡಲಾಗಿದೆ ಎಂದ ಕಿಡಿಕಾರಿದರು.ಗೋ ರಕ್ಷಣಾ ಪ್ರಮುಖ್ ದಕ್ಷಿಣ ಪ್ರಾಂತ್ಯ ಶರತ್ ಮಾತನಾಡಿ, ಕರ್ನಾಟಕದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ, ಬಲವಂತದ, ಆಮಿಷದ ಅಥವಾ ವಂಚನೆಯ ಮತಾಂತರ ಪ್ರಕರಣಗಳು ನಡೆಯುತ್ತಲೇ ಇದೆ. ಹಾಸನದಿಂದ ಬೇಲೂರು ರಸ್ತೆವರೆಗೂ ಎರಡು ಬದಿಯಲ್ಲೂ ಯೇಸುವಿನ ಪುಸ್ತಕಗಳನ್ನ ಹಾಕಿ ಹೋಗಿದ್ದು ಮತಾಂತರ ಮಾಡುತ್ತಿರುವವರನ್ನು ಗುರುತಿಸಿ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.ರಸ್ತೆಯಲ್ಲಿ ಎಸೆದಿದ್ದ ಯೇಸುವಿನ ಪುಸ್ತಕಗಳನ್ನ ಕಂಡು ವಿಶ್ವ ಹಿಂದೂ ಪರಿಷತ್ ಬಜರಂಗದಳ ಮನವಿ ನೀಡಿದ ಮೇರೆಗೆ ಪೊಲೀಸ್ ಇಲಾಖೆ ಸಿಬ್ಬಂದಿ ಪುಸ್ತಕ ಬಿತ್ತಿ ಪತ್ರಗಳನ್ನು ತೆರವುಗೊಳಿಸಿದರು. ಈ ಸಂದರ್ಭದಲ್ಲಿ ತಾಲೂಕು ಕಾರ್ಯದರ್ಶಿ ನಾಗೇಶ್ ( ಗುಂಡ) ತಾಲೂಕು ಸಂಯೋಜಕ ಭರತ್, ತಾಲೂಕು ಸಹ ಸಂಯೋಜಕ ಮೋಹನ್, ಶಂಕರ್‌, ದರ್ಶನ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗರ್ಭಕಂಠ ಕ್ಯಾನ್ಸರ್ ಮುಕ್ತ ಜಿಲ್ಲೆಯನ್ನಾಗಿಸಲು ಕೈಜೋಡಿಸಿ: ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ
ಮಹನೀಯರ ಜಯಂತಿಗೆ ದೇಣಿಗೆ ನೀಡುವೆ ಎಂದು ಶಿವಲಿಂಗೇಗೌಡ