ಕನ್ನಡಪ್ರಭ ವಾರ್ತೆ ಹರಿಹರ
ತಾಲೂಕಿನ ದೊಗ್ಗಳ್ಳಿಯ ಪಿಎಂಶ್ರೀ ಶಾಲೆಯಲ್ಲಿ ಗುರುವಾರ ನಡೆದ ಕಲಿಕೆಯ ಪರಿಣಾಮಗಳು ವಿಷಯ ಉಪನ್ಯಾಸ ನೀಡಿದ ಅವರು, ತಮ್ಮ ಅನುಭವದಲ್ಲಿ ವಿದ್ಯೆಯಿಂದ ಆದ ಉಪಯೋಗದ ಕುರಿತು ಮನವರಿಕೆ ಮಾಡಿದರು.
ಧಾರವಾಡ ಜಿಲ್ಲೆಯ ಶಿಕ್ಷಕ ಲಕ್ಕಪ್ಪ ಐ. ಲಕ್ಕಮ್ಮನವರ್ ಮಾತನಾಡಿ, ಮಕ್ಕಳಿಗೆ ವಿದ್ಯಾದಾನ ನೀಡುವ ಜೊತೆಗೆ ಲೂಸಿ ಸಾಲ್ಡಾನ ಅವರು ಸರ್ಕಾರಿ ಶಾಲೆಗಳಿಗೆ ಲಕ್ಷಾಂತರ ರು. ದತ್ತಿ ನೀಡಿದ್ದಾರೆ. ಆ ಮೂಲಕ ಧಾರವಾಡ ಜಿಲ್ಲೆಯಲ್ಲಿ ಮನೆ ಮಾತಾಗಿದ್ದಾರೆ. ದೊಗ್ಗಳ್ಳಿ ಶಾಲೆಗೆ ದತ್ತಿ ನೀಡುವ ಯೋಜನೆ ಹೊಂದಿದ್ದಾರೆ. ಬೆಂಗಳೂರಿನ ರೋಹನ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಹರಿಹರ ತಾಲೂಕಿನ ಶಾಲೆಗಳಿಗೆ ಶೌಚಾಲಯ, ಆಟೋಪಕರಣಗಳು, ಪೀಠೋಪಕರಣಗಳು ಸೇರಿದಂತೆ ಅನೇಕ ಸೌಲಭ್ಯ ನೀಡಲು ಸಿದ್ಧವಿರುವುದಾಗಿ ತಿಳಿಸಿದರು.ಮುಖ್ಯೋಪಾಧ್ಯಾಯ ಎಚ್. ಮಲ್ಲಿಕಾರ್ಜುನಪ್ಪ ಅಧ್ಯಕ್ಷತೆ ವಹಿಸಿದ್ದರು. ಧಾರವಾಡದ ಸಮಾಜ ಸೇವಕ ಮಲ್ಲಪ್ಪ ಹೊಸಕೇರಿ, ಶಿಕ್ಷಕರಾದ ಸುಶೀಲಮ್ಮ, ಸಬಿಯಾ ಪರ್ವಿನ್, ನಾಗರತ್ನಮ್ಮ, ಶರತ್ ಬಾಬು, ಶಿಲ್ಪಾ, ಪುಷ್ಪಾವತಿ, ಸಿಬ್ಬಂದಿ ಜ್ಯೋತಿ, ನೇತ್ರಾವತಿ, ಮಂಜಮ್ಮ ನಾಗಮ್ಮ ಇತರರು ಹಾಜರಿದ್ದರು.
- - - -21ಎಚ್‌ಆರ್‌ಆರ್01:ಹರಿಹರ ತಾಲೂಕಿನ ದೊಗ್ಗಳ್ಳಿಯ ಪಿಎಂಶ್ರೀ ಶಾಲೆಯಲ್ಲಿ ಹೈಟೆಕ್ ಶೌಚಾಲಯ ನಿರ್ಮಿಸಲು ಕೋರಿ ಧಾರವಾಡದ ಅಕ್ಷರತಾಯಿ ಲೂಸಿ ಸಾಲ್ಡಾನ ಅವರಿಗೆ ಶಾಲೆ ವತಿಯಿಂದ ಮನವಿ ಸಲ್ಲಿಸಲಾಯಿತು.