ಗಜೇಂದ್ರಗಡ: ಇಸ್ಲಾಂ ಧರ್ಮದ ಸ್ಥಾಪಕರಾದ ಪ್ರವಾದಿ ಮುಹಮ್ಮದ್ ಪೈಗಂಬರ್ ಅವರು ಮನುಕುಲದ ಉದ್ಧಾರಕ್ಕಾಗಿ ಶ್ರಮಿಸಿದ ಮಹಾನ್ ಮಾನವತಾವಾದಿಯಾಗಿದ್ದು, ವಿಶ್ವಕ್ಕೆ ಸಮಾನತೆಯ ಸಂದೇಶ ಸಾರಿದ್ದಾರೆ ಎಂದು ರೋಣ ತಾಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷ ಮಿಥುನ್ ಪಾಟೀಲ ಹೇಳಿದರು.ಸಮೀಪದ ಗೋಗೇರಿ ಗ್ರಾಮದಲ್ಲಿ ಅಂಜುಮನ್ ಇಸ್ಲಾಂ ಕಮಿಟಿ ಹಾಗೂ ಬಾಗವಾನ ವೆಲ್ಫೇರ್ ಸೊಸೈಟಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪ್ರವಾದಿ ಮುಹಮ್ಮದ್ ಪೈಗಂಬರ್ ಮುಸ್ತಫಾರ ೧೫೦೦ನೇ ಜನ್ಮ ದಿನಾಚರಣೆಯ ನಿಮಿತ್ತ ಹಮ್ಮಿಕೊಂಡಿದ್ದ ಈದ-ಮಿಲಾದ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಉಪನ್ಯಾಸಕರಾಗಿ ಆಗಮಿಸಿದ್ದ ಕುಷ್ಟಗಿ ಜಮಾತೆ ಇಸ್ಲಾಂ ಹಿಂದ್ ಸಂಚಾಲಕ ಮೊಹಮ್ಮದ ಅಫ್ತಾಬ್ ಮಾತನಾಡಿ, ಭೌತಿಕ ಮತ್ತು ಆಧ್ಯಾತ್ಮಿಕವಾಗಿ ಯಾರ ಜೀವನದ ಅನುಸರಣೆಯಿಂದ ಮಾನವನಿಗೆ ಶಾಂತಿ ಸಮಾಧಾನಗಳು ಪ್ರಾಪ್ತವಾಗುವ ವ್ಯಕ್ತಿಯ ಹೆಜ್ಜೆ ಗುರುತು ಅರಸಿ ಅದರಂತೆ ಜೀವನ ರೂಪಿಸುವುದು ನಮ್ಮೆಲ್ಲರ ಮೂಲಭೂತ ಕರ್ತವ್ಯ. ಶ್ರೇಷ್ಠ ವ್ಯಕ್ತಿಗಳ ಜೀವನಗಾಥೆಯ ವಿಶ್ಲೇಷಣೆಯಲ್ಲಿ ಅತೀ ಹೆಚ್ಚು ಮೌಲ್ಯಗಳು ಗುರುತಿಸಲ್ಪಟ್ಟಿರುವುದು ಪ್ರವಾದಿ ಮುಹಮ್ಮದ್(ಸ)ರ ಬದುಕಿನ ವೃತ್ತಾಂತದಿಂದಾಗಿದೆ ಎಂಬುದು ಜಗತ್ತಿನ ಖ್ಯಾತ ಇತಿಹಾಸಕಾರರು, ತತ್ವಜ್ಞಾನಿಗಳು ಮತ್ತು ಚಿಂತಕರು ಒಪ್ಪಿಕೊಂಡ ಸತ್ಯವಾಗಿದೆ ಎಂದರು.ಮುಖ್ಯೋಪಾಧ್ಯಾಯ ಆರ್.ಐ.ಬಾಗವಾನ ಪ್ರಾಸ್ತಾವಿಕವಾಗಿ ಮಾತನಾಡಿದರು.ಗ್ರಾಮದ ಅಂಜುಮನ್ ಕಮಿಟಿಯ ಅಧ್ಯಕ್ಷ ದಾವಲಸಾಬ ಬಾಗವಾನ, ವೇದಮೂರ್ತಿ ಶಂಕ್ರಯ್ಯ ಮೇಟಿಮಠ, ಹೇಮಾಪತಿ ಭೋಸಲೆ, ಹನಮಪ್ಪ ಹೊರಪೇಟಿ, ಮಾರ್ತಾಂಡಪ್ಪ ಹದ್ದಣ್ಣವರ, ಕಳಕಪ್ಪ ಮಾದರ, ಮುತ್ತಣ್ಣ ಲ್ಯಾವಕ್ಕಿ, ಹುಸೇನಸಾಬ ಬಡಿಗೇರ, ಶಾಬುದ್ದೀನ್ ನಧಾಪ್, ಮೆಹಬೂಬ ಬಾಗವಾನ, ರಾಜೇಸಾಬ ಬಡಿಗೇರ, ಕೆ.ಕೆ.ಬಾಗವಾನ, ಮಲ್ಲಿಕಾರ್ಜುನ ಗಾರಗಿ, ಆಯ್.ಎಚ್.ಬಾಗವಾನ, ಸೈದುಸಾಬ ಬೇವಿನಗಿಡದ, ಸಿಕಂದರ ಬಾಗವಾನ, ಬಶೀರ ಬದಾಮಿ, ಗ್ರಾಂ.ಪಂ ಸದಸ್ಯ ಇಮಾಮಸಾಬ ಬಾಗವಾನ ಹಜರತ್ ಬಾಗವಾನ, ಎಂ.ಡಿ.ಬಾಗವಾನ, ಹುಸೇನ ಬಾಗವಾನ ಸೇರಿ ಇತರರು ಇದ್ದರು.ಗಜೇಂದ್ರಗಡದಲ್ಲಿ ಸಂಭ್ರಮದಿಂದ ನಡೆದ ಈದ್ ಮಿಲಾದ್;ಗಜೇಂದ್ರಗಡ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಪ್ರವಾದಿ ಪೈಗಂಬರ್ ಮುಹಮ್ಮದ್ ಮುಸ್ತಫಾರ ೧೫೦೦ ನೇ ಜನ್ಮ ದಿನಾಚರಣೆಯನ್ನು ಶುಕ್ರವಾರ ಸಂಭ್ರಮದಿಂದ ಆಚರಿಸಲಾಯಿತು.ಪಟ್ಟಣದ ಜಾಮೀಯಾ ಮಸೀದಿಯಿಂದ ಆರಂಭವಾದ ಮೆರವಣಿಗೆಯು ಸ್ಥಳೀಯ ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ಸಂಚರಿಸಿ ಕುಷ್ಟಗಿ ರಸ್ತೆಯಲ್ಲಿನ ಈದ್ಗಾ ಮೈದಾನ ತಲುಪಿತು. ಬಳಿಕ ಧಾರ್ಮಿಕ ಗುರುಗಳಿಂದ ಸಾಮೂಹಿಕ ಪ್ರಾರ್ಥನೆ ನಡೆಯಿತು. ಸಂಸ್ಥೆಯ ಚೇರ್ಮನ್ ನೂರಲ್ ಹಸನ ತಟಗಾರ, ಹಾಸೀಂಅಲಿ ಹಿರೇಹಾಳ, ಫಯಾಜ್ ತೋಟದ, ಮುಸ್ತಾಕ ಅಕ್ಕಿ, ಎ.ಡಿ.ಕೋಲಕಾರ, ಎಂ.ಎಚ್.ಕೋಲಕಾರ, ರಾಜು ಸಾಂಗ್ಲಿಕರ, ಸುಭಾನಸಾಬ ಆರಗಿದ್ದಿ, ದಾದೇಸಾಬ ಹಣಗಿ, ನಾಸಿರ ಸುರಪುರ, ಅಬ್ಬಾಸಲಿ ನಿಶಾನದಾರ, ಮುರ್ತುಜಾ ಡಾಲಾಯತ, ಇಮ್ರಾನ ಅತ್ತಾರ, ಶಾಮೀದ ಮಾಲ್ದಾರ್, ದಾವಲ್ ತಾಳಿಕೋಟಿ ಸೇರಿ ಇತರರು ಇದ್ದರು.