ಧಾರವಾಡ:
ಇಲ್ಲಿಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಏರ್ಪಡಿಸಿದ್ದ ‘ಭಾರತದ ಇಂಧನದ ವಿವಿಧ ರೀತಿಯ ಮಿಶ್ರಣ 2047: ಅವಕಾಶಗಳು ಮತ್ತು ಸವಾಲುಗಳು’ ವಿಜ್ಞಾನ ವಿಚಾರ ಗೋಷ್ಠಿ ಉದ್ಘಾಟಿಸಿದ ಅವರು, ಭಾರತದ ಇಂಧನ ಮಿಶ್ರಣ ಎಂಬ ಪರಿಕಲ್ಪನೆಯು 2047ರ ವೇಳೆಗೆ ಭಾರತದ ಹೆಚ್ಚುತ್ತಿರುವ ಇಂಧನ ಅಗತ್ಯಗಳನ್ನು ಪೂರೈಸಲು ಬಳಸಲಾಗುವ ವಿವಿಧ ಇಂಧನ ಮೂಲಗಳ ಸಮೂಹವನ್ನು ಸೂಚಿಸುತ್ತದೆ. ಈ ಇಂಧನ ಮಿಶ್ರಣದಲ್ಲಿ ಸೌರಶಕ್ತಿ, ಪವನಶಕ್ತಿ, ಜಲವಿದ್ಯುತ್, ಅಣುಶಕ್ತಿ, ಜೈವಿಕ ಇಂಧನ, ಹಸಿರು ಹೈಡ್ರೋಜನ್, ನೈಸರ್ಗಿಕ ಅನಿಲ ಹಾಗೂ ಇತರ ಇಂಧನ ಮೂಲಗಳು ಪ್ರಮುಖ ಪಾತ್ರ ವಹಿಸಲಿವೆ. ಇದರ ಜತೆಗೆ, ಕಲ್ಲಿದ್ದಲು ಮತ್ತು ಪೆಟ್ರೋಲಿಯಂ ಮೇಲಿನ ಅವಲಂಬನೆಯನ್ನು ಹಂತ-ಹಂತವಾಗಿ ಪರಿವರ್ತಿಸುವ ಪ್ರಯತ್ನಗಳು ನಡೆಯಲಿವೆ ಎಂದರು.
ಜಲವಿದ್ಯುತ್ ಮತ್ತು ಅಣುಶಕ್ತಿಯು ವಿಶ್ವಾಸಾರ್ಹ ವಿದ್ಯುತ್ ಪೂರೈಕೆಗೆ ಕೊಡುಗೆ ನೀಡಬಲ್ಲವು ಎಂದ ಅವರು, ಇಂಧನ ಸಂಗ್ರಹಣಾ ವ್ಯವಸ್ಥೆಗಳು, ಸ್ಮಾರ್ಟ್ ವಿದ್ಯುತ್ ಜಾಲ ಮತ್ತು ಇಂಧನ ದಕ್ಷ ತಂತ್ರಜ್ಞಾನಗಳು ಭಾರತದ ಇಂಧನ ಭದ್ರತೆಯನ್ನು ಮತ್ತಷ್ಟು ಬಲಪಡಿಸಬಲ್ಲವು ಎಂದ ಅವರು, ಈ ಬೆಳವಣಿಗೆಗಳು ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಜತೆಗೆ, ನಾವೀನ್ಯತೆಗೆ ಉತ್ತೇಜನ ನೀಡುತ್ತವೆ. ಆಮದು ಮಾಡಿಕೊಳ್ಳುವ ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆ ಕಡಿಮೆ ಮಾಡುತ್ತವೆ ಮತ್ತು ಪರಿಸರ ಸಂರಕ್ಷಣೆಗೆ ಸಹಕಾರಿಯಾಗುತ್ತವೆ ಎಂದು ಹೇಳಿದರು.ಡಯಟ್‌ನ ಹಿರಿಯ ಉಪನ್ಯಾಸಕ ದೀಪಕ ಕುಲಕರ್ಣಿ ಮಾತನಾಡಿ, ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತಕ್ಕೆ ಅಪಾರ ಸಾಮರ್ಥ್ಯವಿದೆ. ವಿಶೇಷವಾಗಿ ಸೌರಶಕ್ತಿ ಮತ್ತು ಪವನಶಕ್ತಿಯ ಅಭಿವೃದ್ಧಿಗೆ ದೇಶದಲ್ಲಿ ಉತ್ತಮ ಅವಕಾಶಗಳಿವೆ. ಹೇರಳವಾದ ಸೂರ್ಯನ ಬೆಳಕು, ವಿಶಾಲ ಕರಾವಳಿ ಪ್ರದೇಶಗಳು ಮತ್ತು ಅನುಕೂಲಕರ ಭೌಗೋಳಿಕ ಪರಿಸ್ಥಿತಿಗಳು ಶುದ್ಧ ವಿದ್ಯುತ್ ಉತ್ಪಾದನೆಗೆ ನೆರವಾಗುತ್ತವೆ ಎಂದರು.
ರಾಜು ಭೂಶೆಟ್ಟಿ ನಿರೂಪಿಸಿದರು. ಶೈಲಾ ನಾಯಕ ಪ್ರಾರ್ಥಿಸಿದರು. ಉಪನ್ಯಾಸಕರಾದ ಗೀತಾ ಚುಳಕಿ, ಹೇಮಲತಾ ಅಮ್ಮಿನಬಾವಿ, ಸುಧಾ ಜಂಬಗಿ ಇದ್ದರು. ಈ ವಿಷಯ ಕುರಿತ ವಿಚಾರ ಗೋಷ್ಠಿ ಸ್ಪರ್ಧೆ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.