ಬ್ಯೂಟಿಪಾರ್ಲರ್‌ನಲ್ಲಿ ವೇಶ್ಯಾವಾಟಿಕೆ: 6 ಮಹಿಳೆಯರ ರಕ್ಷಣೆ

KannadaprabhaNewsNetwork |  
Published : Jan 25, 2025, 01:03 AM IST
ವೇಶ್ಯಾವಾಟಿಕೆ | Kannada Prabha

ಸಾರಾಂಶ

ವೇಶ್ಯಾವಾಟಿಕೆ ಚಟುವಟಿಕೆ ನಡೆಸುತ್ತಿದ್ದ ಆರೋಪದ ಮೇರೆಗೆ ಅನಗೋಳದ ಸ್ಪಾ ಮತ್ತು ಬ್ಯೂಟಿ ಪಾರ್ಲರ್‌ ಕೇಂದ್ರದ ಮೇಲೆ ಶುಕ್ರವಾರ ಸಿಇಎನ್‌ ಪೊಲೀಸರು ದಾಳಿ ನಡೆಸಿ, 6 ಮಹಿಳೆಯರನ್ನು ರಕ್ಷಣೆ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ವೇಶ್ಯಾವಾಟಿಕೆ ಚಟುವಟಿಕೆ ನಡೆಸುತ್ತಿದ್ದ ಆರೋಪದ ಮೇರೆಗೆ ಅನಗೋಳದ ಸ್ಪಾ ಮತ್ತು ಬ್ಯೂಟಿ ಪಾರ್ಲರ್‌ ಕೇಂದ್ರದ ಮೇಲೆ ಶುಕ್ರವಾರ ಸಿಇಎನ್‌ ಪೊಲೀಸರು ದಾಳಿ ನಡೆಸಿ, 6 ಮಹಿಳೆಯರನ್ನು ರಕ್ಷಣೆ ಮಾಡಿದ್ದಾರೆ. ಈ ಸಂಬಂಧ ಮಹಿಳೆಯೊಬ್ಬಳನ್ನು ಪೊಲೀಸರು ಬಂಧಿಸಿದ್ದಾರೆ.

ಅನಗೋಳದ ಮುಖ್ಯ ರಸ್ತೆಯಲ್ಲಿ ರುವ ಅಂಜಲಿ ಸ್ಪಾ ಮತ್ತು ಬ್ಯೂಟಿ ಪಾರ್ಲರ್ ಮೇಲೆ ದಾಳಿ ನಡೆಸಲಾಗಿದೆ. ಖಚಿತ ಮಾಹಿತಿ ಮೇರೆಗೆ ಬೆಳಗಾವಿಯ ಸಿಇಎನ್ ಠಾಣೆಯ ಪಿಐ ಬಿ.ಆರ್. ಗಡ್ಡೇಕರ್ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ಈ ದಾಳಿ ವೇಳೆ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ 6 ಮಹಿಳೆಯರನ್ನು ರಕ್ಷಣೆ ಮಾಡಲಾಗಿದೆ. ಅಲ್ಲದೆ ಈ ವೇಶ್ಯಾವಾಟಿಕೆ ಚಟುವಟಿಕೆಯಲ್ಲಿ ಜಿಲ್ಲೆಯ ಸಂಕೇಶ್ವರ ಹಾಗೂ ಕಾಕತಿಯ ಮಹಿಳೆ ಸೇರಿ ಅನಗೋಳದ ನಾಲ್ವರನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಈ ಸಂಬಂಧ ಪಾರ್ಲರ್‌ ಮಾಲಕಿ ಅಂಜಲಿ ಸಂಜಯ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಸಿಇಎನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನುದಾನಿತ ಪಿಯು ಕಾಲೇಜು ನಿವೃತ್ತರ ಗಳಿಕೆ ರಜೆಗೆ 30 ಕೋಟಿ ರು.
ಮೇಲ್ಮನೆಗೆ ಪತ್ರಕರ್ತರ ಕರೆತರಲು ಎಂಎಲ್‌ಸಿ ಆಫರ್‌!