ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ತಾಲೂಕಿನ ಬೀಚನಕುಪ್ಪೆ ಗ್ರಾಮದ ಸರ್ವೇ ನಂ 76ರ ಸರ್ಕಾರಿ ಜಮೀನನ್ನು ರಕ್ಷಿಸಬೇಕು. ಭೂಗಳ್ಳರ ಹಾಗೂ ಅಧಿಕಾರಿಗಳು ಶಾಮೀಲಾಗಿ ಲಪಟಾಯಿಸಲು ಮುಂದಾಗುತ್ತಿದ್ದರೂ ಹಾಲಿ ಹಾಗೂ ಮಾಜಿ ಜನಪ್ರತಿನಿಧಿಗಳ ಮೌನವೇಕೆ ಎಂದು ಬೆಳಗೊಳ ಗ್ರಾಪಂ ಸದಸ್ಯ ಬಿ.ವಿ.ಸುರೇಶ್ ಪ್ರಶ್ನಿಸಿದರು.ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗ್ರಾಮದ ಸರ್ವೇ ನಂ 76 ಬ ಕರಾಬು, ಗೋಮಾಳ ಜಮೀನಿನ ಪೈಕಿ ಸರ್ಕಾರ ರೈತರಿಗೆ 48 ಎಕರೆ ಸಾಗುವಳಿ ನೀಡಿದೆ. ಇನ್ನು ಉಳಿದ 60 ಎಕೆರೆ ಜಮೀನನ್ನು ಯಾವುದೇ ಸಾಗುವಳಿಗೆ ನೀಡಿದೆ ಇದ್ದರೂ ಭೂಗಳ್ಳರ ಹೆಸರಿನಲ್ಲಿ ಅಧಿಕಾರಿಗಳು ಆರ್‌ಟಿಸಿ ನಮೂದಿಸಿದ್ದಾರೆ ಎಂದು ದೂರಿದರು.ಹೈಕೋರ್ಟ್ ಆದೇಶದಂತೆ ರಾಜ್ಯ ಸರ್ಕಾರ 2005ರಲ್ಲಿ ಸುತ್ತೋಲೆ ಹೊರಡಿಸಿ ಗೋಮಾಗಳನ್ನು ಯಾವುದೇ ಟೌನ್ ಶಿಪ್ ಹೆಸರಿನಲ್ಲಿ ಇಂಡಸ್ಟ್ರೀಸ್‌ಗಳಿಗೆ ಭೂಮಿ ನೀಡದಂತೆ ಆದೇಶ ನೀಡಿದೆ. ಆದರೆ, ಕೆಐಎಡಿಬಿ ಅಧಿಕಾರಿಗಳು ಚೇತನ್ ಪಿ ತಯಾಲ್ ಎಂಬ ವ್ಯಕ್ತಿ ಹೆಸರಿಗೆ ಗೋಮಾಳ ಹಾಗೂ ರೈತರ ಜಮೀನನ್ನು ಅಕ್ರಮವಾಗಿ ಭೂ-ಸ್ವಾಧೀನ ಮಾಡಿಕೊಳ್ಳಲು ಮುಂದಾಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಈ ವಿಷಯವಾಗಿ ರೈತರು ಬೀದಿಗೆ ಇಳಿದು ಪ್ರತಿಭಟನೆ ನಡೆಸುತ್ತಿದ್ದೇವೆ. ಆದರೆ, ಹಿಂದಿನ ಹಾಗೂ ಪ್ರಸ್ತುತ ಸರ್ಕಾರಗಳ ಜನಪ್ರತಿನಿಧಿಗಳ ಮೌನವನ್ನು ನೋಡಿದರೆ ಇದರಲ್ಲಿ ಶಾಮೀಲಾಗಿರುವ ಶಂಕೆ ವ್ಯಕ್ತವಾಗುತ್ತಿದೆ ಎಂದು ಆರೋಪಿಸಿದರು.
ಕೆಆರ್‌ಎಸ್‌ನಲ್ಲಿ ರಾಜ್ಯ ಸರ್ಕಾರ ಅಮ್ಯೂಸ್‌ಮೆಂಟ್ ಪಾರ್ಕ್ ಹಾಗೂ ಕಾವೇರಿ ಹಾರಲಿ ಮಾಡಲು ಮುಂದಾಗುತ್ತಿದೆ. ಬಿಜೆಪಿ ನಾಯಕರು ಹಾಗೂ ರೈತ ಸಂಘ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸುತ್ತಾರೆ. ಆದರೆ, ಸರ್ಕಾರಿ ಗೋಮಾಳ ಹಾಗೂ ರೈತರ ಜಮೀನನ್ನು ವಾಮಾ ಮಾರ್ಗದಲ್ಲಿ ಲೇಔಟ್ ನಿರ್ಮಾಣಕ್ಕೆ ಮುಂದಾಗುತ್ತಿದ್ದರೂ ಏಕೆ ಹೋರಾಟ ಮಾಡುತ್ತಿಲ್ಲ ಎಂದು ಪಶ್ನೆ ಮಾಡಿದರು.ಜಿಲ್ಲೆಯ 8 ಮಂದಿ ಶಾಸಕರು, ಕೇಂದ್ರ ಸಚಿವರು, ವಿಪಕ್ಷದ 8 ಮಂದಿ ಮಾಜಿ ಶಾಸಕರು, ಲೋಕಸಭೆ ಮಾಜಿ ಸದಸ್ಯರು ಜೊತೆಗೂಡಿ ಬೀಚನಕುಪ್ಪೆ ಗ್ರಾಮದ ಗೋಮಾಳ ಹಾಗೂ ರೈತರ ಜಮೀನನ್ನು ಉಳಿಸಿಕೊಡುವಂತೆ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಕೆಆರ್‌ಎಸ್ ಗ್ರಾಪಂ ಸದಸ್ಯ ವಸಂತ್‌ಕುಮಾರ್ ಇದ್ದರು.