ಕನ್ನಡಪ್ರಭ ವಾರ್ತೆ ಕೋಲಾರಸರ್ಕಾರದ ಭೂಮಿ ಸಂರಕ್ಷಣೆಗಾಗಿ ಎಷ್ಟೇ ಕಠಿಣವಾದ ಕಾನೂನುಗಳು ಜಾರಿಗೆ ತಂದರೂ ಸಹ ಒತ್ತುವರಿ ಮಾಡಲಾಗುತ್ತಿದೆ ಎಂದು ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಹಾಗೂ ಅಧ್ಯಕ್ಷ ಬಿ.ಎ.ಪಾಟೀಲ್ ಕಳವಳ ವ್ಯಕ್ತಪಡಿಸಿದರು.ನಗರದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಕಂದಾಯ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಜಿಲ್ಲಾಡಳಿತದಿಂದ ಕರ್ನಾಟಕ ಭೂ ಕಬಳಿಕೆ ನಿಷೇಧ ಅಧಿನಿಯಮ ಮತ್ತು ಸಂಬಂಧ ಕಾಯ್ದೆಗಳ ಬಗ್ಗೆ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಯಾವುದೇ ರೋಗ ಬರುವ ಮುನ್ನೆಚ್ಚರಿಕೆ ಕ್ರಮ ಅಗತ್ಯ ಇರುವಂತೆ ಸರ್ಕಾ ರಿ ಆಸ್ತಿಗಳು ಒತ್ತುವರಿಯಾಗದಂತೆ ಗುರುತಿಸಿ ಸಂರಕ್ಷಣಾ ಕ್ರಮಕೈಗೊಳ್ಳಬೇಕು ಎಂದರು. ಜನಜಾಗೃತಿ ಮೂಡಿಸಬೇಕು
ಅಧಿಕಾರಿ ಸ್ವೀಕರಿಸುತ್ತಿಲ್ಲ
ಜಿಲ್ಲೆಯಲ್ಲಿ ಶೇ.೨೦ರಿಂದ ೩೦ರಷ್ಟು ಹುದ್ದೆಗಳು ಖಾಲಿ ಇದೆ. ಸರ್ವೇಯರ್ ಕೊರತೆ ಬಹು ದಿನಾಗಳಿಂದ ಇದೆ. ಕೋಲಾರಕ್ಕೆ ನೇಮಕಾತಿಗೊಂಡವರು ಅಧಿಕಾರ ಸ್ವೀಕಾರ ಮಾಡದೆ ಪಲಾಯನ ಮಾಡುತ್ತಿರುವುದು ಕಳವಳಕಾರಿ. ಇಷ್ಟೇಲ್ಲಾ ಒತ್ತಡಗಳ ನಡುವೆಯೂ ೭೧ ಸಾವಿರ ಅರ್ಜಿಗಳು ಸಕಾಲದಲ್ಲಿ ನಿಗದಿತ ಅವಧಿಗೆ ಮೂದಲೇ ವಿಲೇ ಮಾಡಲಾಗಿದೆ. ರಾಜ್ಯದಲ್ಲಿ ನಂಬರ್ ಓನ್ ಸ್ಥಾನಕ್ಕೆ ಬರಲು ಅಧಿಕಾರಿಗಳ ಪರಿಶ್ರಮವೇ ಕಾರಣ ಎಂದು ಶ್ಲಾಘಿಸಿದರು.ಕಾರ್ಯಾಗಾರದ ಪ್ರಥಮ ಅಧಿವೇಶನದಲ್ಲಿ ಕರ್ನಾಟಕ ಭೂಕಬಳಿಕೆ ನಿಷೇಧ ಅಧಿನಿಯಮ ೨೦೧೧ ಮತ್ತು ತಿದ್ದುಪಡಿ ಕಾಯ್ದೆ ಕುರಿತು ನ್ಯಾಯಮೂರ್ತಿ ಬಿ.ಎ.ಪಾಟೀಲ್ ಉಪನ್ಯಾಸ ನೀಡಿದರು.ಭೂ ದಾಖಲೆಗಳ ಉಪನಿರ್ದೇಶಕ ಬಿ.ಕೆ.ಸಂಜಯ್, ಕಂದಾಯ ಸದಸ್ಯ ಎಸ್.ಪಾಲಯ್ಯ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ವೆಂಕಟೇಶ್ ಎಸ್.ಎಂ, ಹಿರಿಯ ಸಿವಿಲ್ ನ್ಯಾಯಾಧೀಶರಾದ ಸುನೀಲ್ ಎಸ್.ಹೊಸಮನಿ, ಹಿರಿಯ ಸಿವಿಲ್ ನ್ಯಾಯಾಧೀಶರಾದ ಹೆಚ್.ಕೆ.ನವೀನ್, ಕಂದಾಯ ಸದಸ್ಯ ಅಶ್ವಥ್ ನಾರಾಯಣಗೌಡ, ಡಿಎಫ್‌ಓ ಏಡುಕೊಂಡಲು, ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್.ಬಿ. ಇದ್ದರು. ಎಡಿಸಿ ಮಂಗಳಾ ಸ್ವಾಗತಿಸಿದರು.