ಹೂವಿನಹಡಗಲಿ: ಪ್ರತಿಯೊಬ್ಬರೂ ಧರ್ಮದ ರಕ್ಷಣೆಯ ಜತೆಗೆ ನಮ್ಮ ಸಂಸ್ಕೃತಿ ಉಳಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈ ಜೋಡಿಸಬೇಕೆಂದು ಬೆಳ್ಳಟ್ಟಿಯ ರಾಮಲಿಂಗೇಶ್ವರ ದಾಸೋಹ ಮಠದ ಬಸವರಾಜ ಸ್ವಾಮೀಜಿ ಹೇಳಿದರು.
ಸಾನಿಧ್ಯ ವಹಿಸಿ ಮಾತನಾಡಿದ ನೀಲಗುಂದ ಮಠದ ಚನ್ನಬಸವ ಸ್ವಾಮೀಜಿ, ಮಲ್ಲನಕೆರೆ ಮಠದ ಅಭಿನವ ಚನ್ನಬಸವ ಸ್ವಾಮೀಜಿ, ಈ ಭಾಗದಲ್ಲಿ ಭಕ್ತರಿಗೆ ಸಂಸ್ಕಾರ ನೀಡುವಂತಹ ಧಾರ್ಮಿಕ ಪುರಾಣ ಪ್ರವಚನ ಪೌರಾಣಿಕ, ನಾಟಕಗಳನ್ನು ಮಠದಲ್ಲಿ ಆಯೋಜಿಸಿ ಸಾಮಾಜಿಕ ಮೌಲ್ಯಗಳನ್ನು ಮೂಡಿಸುತ್ತಿದ್ದಾರೆ ಎಂದರು. ಲಿಂಗನಾಯಕನಹಳ್ಳಿ ಮಠದ ಚನ್ನವೀರ ಸ್ವಾಮಿ ಸಾನಿಧ್ಯ ವಹಿಸಿ ಮಾತನಾಡಿದರು.
ಉತ್ತಂಗಿಯ ಸೋಮಶೇಖರ ಸ್ವಾಮೀಜಿ, ಹಿರೇಹಡಗಲಿ ಹಾಲಸ್ವಾಮಿ ಮಠದ ಸಣ್ಣ ಹಾಲಸ್ವಾಮೀಜಿ, ಹಾಲಯ್ಯ ಶಾಸ್ತ್ರಿ, ಪುರಸಭೆ ಸದಸ್ಯ, ಎ.ಜೆ.ವೀರೇಶ್, ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕ ಅಧ್ಯಕ್ಷ ಸಿ.ಕೆ.ಎಂ.ಬಸವಲಿಂಗಸ್ವಾಮಿ, ನಗರ ಘಟಕದ ಅಧ್ಯಕ್ಷ ಮುಂಡವಾಡ ಉಮೇಶ, ಕಿರಾಣಿ ವರ್ತಕರ ಸಂಘದ ಅಧ್ಯಕ್ಷ ಎಸ್.ಎಂ. ಎನ್.ಅಶೋಕ, ಎಸ್.ಮಾಹಾಂತೇಶ ಇತರರಿದ್ದರು.