ಜೀವಸಂಕುಲ ರಕ್ಷಣೆಗಾಗಿ ಪರಿಸರ ಸಂರಕ್ಷಿಸಿ

KannadaprabhaNewsNetwork |  
Published : Jun 12, 2025, 05:02 AM IST
೧೧ಕೆಎಲ್‌ಆರ್-೧ಕೋಲಾರದ ಕಾರಂಜಿಕಟ್ಟೆಯ ಸುಭಾಷ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆರ್.ನಟೇಶ್ ಉದ್ಘಾಟಿಸುತ್ತಿರುವುದು. | Kannada Prabha

ಸಾರಾಂಶ

ಇತ್ತೀಚೆಗೆ ನ್ಯಾಯಾಧೀಶರು ಕಾರಾಗೃಹಕ್ಕೆ ಭೇಟಿ ನೀಡಿದಾಗ ಸುಮಾರು ೪೦-೪೫ ಮಂದಿ ಪೋಕ್ಸೋ ಪ್ರಕರಣದ ಆರೋಪಿಗಳಿದ್ದರು. ಅವರಿಗೆ ಕಾನೂನಿನ ಅರಿವಿನ ಕೊರತೆಯಿಂದ ಈ ಶಿಕ್ಷೆಗೆ ಗುರಿಯಾಗಿದ್ದರು. ಮೊಬೈಲ್ ಬಳಕೆ ಪ್ರತಿಯೊಬ್ಬರಿಗೂ ಅನಿವಾರ್ಯವಾಗಿದೆ. ಆದರೆ ಮೊಬೈಲ್ ಬಳಕೆಯಲ್ಲಿ ಇತಿಮಿತಿ ಇರಬೇಕು ಎಂಬುದು ನ್ಯಾಯಾಧೀಶರ ಕಿವಿಮಾತು.

ಕನ್ನಡಪ್ರಭ ವಾರ್ತೆ ಕೋಲಾರಮರ ಗಿಡಗಳನ್ನು ಬೆಳೆಸುವುದರಿಂದ ಉತ್ತಮ ಪರಿಸರ ನಿರ್ಮಾಣವಾಗಲಿದ್ದು, ಮಾನವ ಸೇರಿದಂತೆ ಜೀವಸಂಕೋಲಗಳ ಆರೋಗ್ಯಕರ ಬದುಕಿಗೆ ಪೂರಕವಾಗಲಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆರ್.ನಟೇಶ್ ಅಭಿಪ್ರಾಯಪಟ್ಟರು.ನಗರದ ಕಾರಂಜಿ ಕಟ್ಟೆಯ ಸುಭಾಷ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತು ಕೋಲಾರ ಜಿಲ್ಲಾ ವಕೀಲ ಸಂಘದಿಂದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಗಿಡಕ್ಕೆ ನೀರು ಎರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಅವಕಾಶ ಇರುವಲ್ಲಿ ಸಸಿ ಬೆಳೆಸಿ

ನೀವು ಸುಡುಬಿಸಿಲಿನಲ್ಲಿ ಶಾಲೆಯಲ್ಲಿ ಒಂದು ಮರದ ಕೆಳಗೆ ಸುಮಾರು ೧೫೦ಕ್ಕೂ ಮಂದಿ ಕುಳಿತ್ತಿರಲು ಕಾರಣ ಉತ್ತಮ ಗಾಳಿ, ನೆರಳು ಕಾರಣವಾಗಿದೆ, ಇದನ್ನು ನೀಡುತ್ತಿರುವುದು ಕೇವಲ ಒಂದು ಮರ ಮಾತ್ರ. ನಿಮ್ಮ ಶಾಲೆಯ ೨೭೦ ಮಂದಿಯೂ ಒಂದೊಂದು ಗಿಡವನ್ನು ಬೆಳೆಸಿದರೆ ಮುಂದೆ ಎಷ್ಟು ಜನಕ್ಕೆ ನೆರಳು ಗಾಳಿ ನೀಡುವುದು ಎಂಬುವುದನ್ನು ವಿಮರ್ಶೆ ಮಾಡಿಕೊಳ್ಳಿ, ಪ್ರತಿಯೊಬ್ಬರು ಅವಕಾಶವಿರುವ ಕಡೆ ಒಂದೊಂದು ಗಿಡವನ್ನಾದರೂ ನೆಟ್ಟು ಬೆಳೆಸುವಂತಾಗಬೇಕು. ಪ್ರಾಣಿ ಪಕ್ಷಿಗಳಿಂದ ಬೀಜ ಪ್ರಸಾರದ ಮೂಲಕ ಗಿಡಗಳ ಬೆಳೆವಣಿಗೆ ಸಹಕಾರಿ ಎಂದರು.

ಕಾನೂನು ಅರಿವಿನ ಕೊರತೆ

ಇತ್ತೀಚೆಗೆ ಕಾರಾಗೃಹಕ್ಕೆ ಭೇಟಿ ನೀಡಿದಾಗ ಸುಮಾರು ೪೦-೪೫ ಮಂದಿ ಪೋಕ್ಸೋ ಪ್ರಕರಣದ ಆರೋಪಿಗಳಿದ್ದರು. ಅವರಿಗೆ ಕಾನೂನಿನ ಅರಿವಿನ ಕೊರತೆಯಿಂದ ಈ ಶಿಕ್ಷೆಗೆ ಗುರಿಯಾಗಿದ್ದರು. ಇದರ ಜೂತೆಗೆ ಪೋಷಕರಿಗೂ ಶಿಕ್ಷೆ ತಪ್ಪಿದ್ದಲ್ಲ, ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಮೊಬೈಲ್ ಬಳಕೆ ಪ್ರತಿಯೊಬ್ಬರಿಗೂ ಅನಿವಾರ್ಯವಾಗಿದೆ. ಇದರಿಂದ ಸಾಕಷ್ಠು ಪ್ರಯೋಜನಕಾರಿಯಾಗಿದೆ ಅಷ್ಟೇ ಅಪಾಯಕಾರಿಯಾಗಿದೆ. ಮೊಬೈಲ್ ಬಳಕೆಯಲ್ಲಿ ಇತಿಮಿತಿ ಇರಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ವಕೀಲರಾದ ಸತೀಶ್, ಸೋಮಶೇಖರ್, ಸಮಾಜ ಸೇವಕ ಶಿವಕುಮಾರ್‌ಗೌಡ ಇದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ